ಬೆಂಗಳೂರು, ನ.29- ಪ್ರೀತಿಸಿದ ಯುವತಿಯನ್ನು ಮದುವೆಯಾಗಲು ತಾನು ಕೆಲಸ ಮಾಡುತ್ತಿದ್ದ ಎಟಿಎಂನಲ್ಲೇ ಲಕ್ಷಗಟ್ಟಲೇ ಹಣ ದೋಚಿದ್ದ ಸೆಕ್ಯುರಿಟಿ ಗಾರ್ಡ್‍ನನ್ನು ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಸ್ಸಾಂ ಮೂಲದ ಡಿಪೊಂಕರ್ ನೋಮೋಸುದರ್(23) ಬಂಧಿತ ಸೆಕ್ಯುರಿಟಿ ಗಾರ್ಡ್. ಆತನಿಂದ 14.20 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಶ್ರೀನಿವಾಸ್ ಗೌಡ ಅವರು ತಿಳಿಸಿದ್ದಾರೆ.
ಕಳವು ಮಾಡಿದ ಹಣದಲ್ಲಿ ಮೊದಲು ಒಂದು ಹೋಟೆಲ್ ತೆರೆಯಲು ಯೋಜನೆ ಹಾಕಿಕೊಂಡಿದ್ದು ಬಳಿಕ ಒಂದು ವರ್ಷ ದುಡಿದು ನಂತರ ಪ್ರೇಯಸಿಯನ್ನು ಮದುವೆ ಮಾಡಿಕೊಳ್ಳಲು ಯೋಜನೆ ಮಾಡಿದ್ದ. ಆದರೆ, ಖದೀಮನ ಕಳ್ಳತನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಕಾರ್ಯಾಚರಣೆ ಕೈಗೊಂಡ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ವಿಲ್ಸನ್ ಗಾರ್ಡನ್‍ನ 13ನೇ ಕ್ರಾಸ್‍ನಲ್ಲಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನ ಎಟಿಎಂನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಡಿಪೊಂಕರ್ ಕೆಲಸ ಮಾಡುತ್ತಿದ್ದನು.
BIG NEWS: ಬೆಂಗಳೂರಿನಲ್ಲಿ ಸಾಮೂಹಿಕ ಅತ್ಯಾಚಾರ, ಮೂವರ ಬಂಧನ
ಆರೋಪಿಯು ಎಟಿಎಂನಲ್ಲಿ ಹಣ ತುಂಬುವ ಸಿಬ್ಬಂದಿಗಳ ಜೊತೆ ವಿಶ್ವಾಸದಿಂದ ಇದ್ದು, ಸಿಬ್ಬಂದಿ ತಮ್ಮ ಡೈರಿಯಲ್ಲಿ ಬರೆದುಕೊಂಡಿದ್ದ ಪಾಸ್‍ವರ್ಡ್ ಮತ್ತು ಎಟಿಎಂ ನಲ್ಲಿ ಹಣ ತುಂಬುವ ಸಮಯದಲ್ಲಿ ಸಿಬ್ಬಂದಿಗಳು ಬಳಸುವ ಪಾಸ್‍ವರ್ಡ್‍ಗಳನ್ನು ನೋಡಿ ನೆನಪಿನಲ್ಲಿಟ್ಟುಕೊಂಡು ತಾನು ಕರ್ತವ್ಯದಲ್ಲಿದ್ದಾಗ ಎಟಿಎಂನ ಪಾಸ್‍ವರ್ಡ್ ಬಳಸಿ 19.96 ಲಕ್ಷ ಹಣವನ್ನು ಕಳವು ಮಾಡಿಕೊಂಡು ಹೋಗಿದ್ದನು.
ಹಣ ಲೂಟಿ ಮಾಡಿ ತನ್ನ ಮೊಬೈಲ್ ಮತ್ತು ಸಿಮ್ ಕಾರ್ಡ್‍ನ್ನು ಬದಲಾಯಿಸಿ ಅಸ್ಸಾಂಗೆ ಪರಾರಿಯಾಗಿ ಅಲ್ಲಿನ ರಾಹ ಜಿಲ್ಲೆಯ ಚಪರ್‍ಮುಖ್ ಗ್ರಾಮಕ್ಕೆ ಹೋಗಿ ತಲೆಮರೆಸಿಕೊಂಡಿದ್ದನು.
ಮಹಾರಾಷ್ಟ್ರ ಸಚಿವರು ಜತ್ ಜನರ ಮನವೊಲಿಸಲಿ: ಹೆಚ್‌ಡಿಕೆ
ಈ ಪ್ರಕರಣದ ಕಾರ್ಯಾಚರಣೆ ಕೈಗೊಂಡಿದ್ದ ಪೊಲೀಸರು ಆರೋಪಿ ಬಗ್ಗೆ ಮಾಹಿತಿ ಕಲೆ ಹಾಕಿ ಅಸ್ಸಾಂ ನಲ್ಲಿ ಪತ್ತೆ ಹಚ್ಚಿ ಬಂಧಿಸಿ, 14.20 ಲಕ್ಷ ಹಣವನ್ನು ವಶಪಡಿಸಿ ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಎಟಿಎಂನಿಂದ ದೋಚಿದ್ದ ಹಣದಲ್ಲಿ ಐದು ಲಕ್ಷ ಹಣವನ್ನು ಖರ್ಚು ಮಾಡಿದ್ದಾನೆ. ಮಾಡಿದ್ದ ಸಾಲ ಹಾಗೂ ಹೋಟೆಲ್ ಮಾಡಲಿಕ್ಕೆ ಆರೋಪಿ ಹಣ ಬಳಸಿದ್ದು ಹೆಚ್ಚಿನ ತನಿಖೆಯಿಂದ ತಿಳಿದುಬಂದಿದೆ.
ಕೇಂದ್ರ ವಿಭಾಗದ ಉಪಪೊಲೀಸ್ ಆಯುಕ್ತ ಶ್ರೀನಿವಾಸ್ ಗೌಡ, ಹಲಸೂರು ಗೇಟ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ನಾರಾಯಣಸ್ವಾಮಿ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ರಾಜು ನೇತೃತ್ವದ ಸಿಬ್ಬಂದಿ ತಂಡ ಆರೋಪಿಯನ್ನು ಬಂಧಿಸಿ ಹಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಧರ್ಮ ದಂಗಲ್: ಪೊಲೀಸ್ ಭದ್ರತೆಯಲ್ಲಿ ಸುಬ್ರಮಣ್ಯಸ್ವಾಮಿ ರಥೋತ್ಸವ
ಈ ಉತ್ತಮ ಕಾರ್ಯವನ್ನು ಮಾಡಿದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಅಪರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ಪ್ರಶಂಶಿಸಿರುತ್ತಾರೆ.
security, guard, robbed, ATM, money,