ಶ್ರೀ ಸಿದ್ದೇಶ್ವರರ ಅಂತಿಮ ದರ್ಶನಕ್ಕೆ ಹರಿದುಬಂದ ಭಕ್ತಸಾಗರ

Social Share

ವಿಜಯಪುರ,ಜ.3- ಜ್ಞಾನಯೋಗಾನಂದ ಆಶ್ರಮಕ್ಕೆ ಹರಿದು ಬಂದ ಭಕ್ತ ಕೋಟಿ. ಮುಗಿಲು ಮುಟ್ಟಿದ ಆಕ್ರಂಧನ, ಓಂ ನಮಃ ಶಿವಾಯದ ಮಂತ್ರ ಪಠಣ, ಶ್ರೀಗಳ ಅಂತಿಮ ದರ್ಶನ ಪಡೆಯಲು ರಾಜ್ಯ ಹಾಗೂ ದೇಶದ ವಿವಿಧೆಡೆಯಿಂದ ಭಾರೀ ಸಂಖ್ಯೆಯಲ್ಲಿ ಆಗಮಿಸಿದ ಭಕ್ತ ಸಮೂಹ, ಆಶ್ರಮದ ಆವರಣದಲ್ಲಿ ಎಲ್ಲೆಲ್ಲೂ ಶೋಕಸಾಗರ.

ಲಿಂಗೈಕ್ಯರಾದ ಜ್ಞಾನಯೋಗಿ ಖ್ಯಾತ ಪ್ರವಚನಕಾರರು, ಶತಮಾನದ ಸಂತ, 2ನೇ ವಿವೇಕಾನಂದರು ಎಂದೇ ಪ್ರಸಿದ್ದರಾದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಅಂತಿಮ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಜನರು ಸಾಗರೋಪಾದಿಯಲ್ಲಿ ಹರಿದುಬಂದರು.

ರಾಜ್ಯದಿಂದಷ್ಟೇ ಅಲ್ಲ ನೆರೆಯ ಮಹಾರಾಷ್ಟ್ರ, ಆಂಧ್ರ, ತಮಿಳುನಾಡು, ಉತ್ತರ ಭಾರತದ ಹಲವು ರಾಜ್ಯಗಳಿಂದಲೂ ಭಕ್ತ ಗಣಸಮೂಹ ಹರಿದುಬಂದಿತ್ತು. ಜ್ಞಾನಯೋಗಾಶ್ರಮದಲ್ಲಿ ಬೆಳಗ್ಗೆ 4.30ರವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬಳಿಕ 6 ಗಂಟೆಗೆ ಹೂಗಳಿಂದ ಅಲಂಕಾರಗೊಂಡಿದ್ದ ತೆರೆದ ವಾಹನದಲ್ಲಿ ಪೂಜ್ಯರ ಪಾರ್ಥಿವ ಶರೀರವನ್ನು ಸೈನಿಕ ಶಾಲೆಯ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದ್ದ ವೇದಿಕೆಗೆ ತರಲಾಯಿತು.

ಪರಮಪೂಜ್ಯರ ಇಚ್ಚೆಯಂತೆಯೇ ಅಂತಿಮ ವಿಧಿವಿಧಾನ : ಸಿಎಂ

ಈ ಸಂದರ್ಭದಲ್ಲಿ ರಸ್ತೆಯುದ್ದಕ್ಕೂ ನಿಂತು ಭಕ್ತರು ಶ್ರೀಗಳಿಗೆ ಪುಷ್ಪಾರ್ಚನೆ ಮಾಡಿದರು. ಗಣ್ಯರು ಹಾಗೂ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಸಾಗರೋಪಾದಿಯಲ್ಲಿ ಬೆಳಂಬೆಳಗ್ಗೆ ಭಕ್ತರ ದಂಡು ವಿಜಯಪುರಕ್ಕೆ ಹರಿದುಬಂದಿತ್ತು. ಎಲ್ಲರಿಗೂ ದರ್ಶನದ ಅವಕಾಶ ನೀಡಲು ಮುಖ್ಯದ್ವಾರದ ಮೂಲಕ ಹಾಗೂ ಪ್ರವೇಶ 2ನೇ ಗೇಟ್‍ನಲ್ಲಿ ನಿರ್ಗಮನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

ಭಕ್ತರನ್ನು ನಿಯಂತ್ರಿಸುವುದು ಪೊಲೀಸರು ಹರಸಾಹಸ ಪಡಬೇಕಾಯಿತು. ಪಾರ್ಥೀವ ಶರೀರವನ್ನು ಯಾವುದೇ ಅಲಂಕಾರ ಮಾಡದೆ ಶ್ರೀಗಳು ದಿನನಿತ್ಯ ಪ್ರವಚನ ಮಾಡುವ ರೀತಿಯಲ್ಲೇ ಕೂರಿಸಲಾಗಿತ್ತು.

ಸಾಗರೋಪಾದಿಯಲ್ಲಿ ಬಂದ ಲಕ್ಷಾಂತರ ಭಕ್ತರು ಶ್ರೀಗಳನ್ನು ನೋಡಿ ಕಣ್ತುಂಬಿಕೊಂಡು ಕಂಬನಿ ಮಿಡಿದರು. ಶ್ರೀಗಳ ಪ್ರವಚನವನ್ನು ನೆನೆದು ಅವರು ಮಾಡುತ್ತಿದ್ದ ಮಾರ್ಗದರ್ಶನಗಳನ್ನು ಸ್ಮರಿಸಿ ಕಣ್ಣೀರ ಧಾರೆ ಹರಿಸಿದರು.
ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ತಮ್ಮ ಪ್ರವಚನದ ಮೂಲಕ ದೇಶ, ವಿದೇಶಗಳಲ್ಲಿ ಅಪಾರ ಭಕ್ತವೃಂದವನ್ನು ಹೊಂದಿದ್ದರು. ಸಂತಶ್ರೇಷ್ಠರು, ಜ್ಞಾನ ಉಪಾಸಕರು ಆದ ಅವರ ಪ್ರವಚನಗಳಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು.

ಆಂಧ್ರ ಪ್ರದೇಶದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಿಗೆ ನಿಷೇಧ

ಸರ್ವಧರ್ಮಗಳ ಸಂತರು ಆಗಿದ್ದ ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನಕ್ಕೆ ಧರ್ಮಾತೀತವಾಗಿ ಭಕ್ತರು ಆಗಮಿಸಿದ್ದರು. ಮಕ್ಕಳು, ವಯೋವೃದ್ಧರು, ಮಹಿಳೆಯರು ಸಹಸ್ರ ಸಂಖ್ಯೆಯಲ್ಲಿ ಬಂದು ಶ್ರೀಗಳ ದರ್ಶನ ಪಡೆದು ಅವರ ನಿಧನಕ್ಕೆ ಕಂಬನಿ ಮಿಡಿದರು.

ಬಂದಂತಹ ಲಕ್ಷಾಂತರ ಭಕ್ತರಿಗೆ ಸೈನಿಕ ಶಾಲೆ ಆವರಣದಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಭಕ್ತರೇ ಸ್ವಯಂ ಪ್ರೇರಿತರಾಗಿ ಎಲ್ಲ ವ್ಯವಸ್ಥೆಯನ್ನು ಕೈಗೊಂಡಿದ್ದು ವಿಶೇಷವಾಗಿತ್ತು.

ಸರಳತೆಯನ್ನು ಸಾರಿದ್ದ ಸರಳವಾಗಿ ಬದುಕಿ ನುಡಿದಂತೆ ನಡೆದ ಶತಮಾನದ ಸಂತನಿಗೆ ನಮನ ಸಲ್ಲಿಸಲು ನಾಡಿನ ಎಲ್ಲ ಮಠಾೀಶರು ಕೂಡ ಆಗಮಿಸಿದ್ದರು. ಶ್ರೀಗಳ ಇಚ್ಛೆಯಂತೆ ಯಾವುದೇ ವಿವಿಧಾನಗಳಿಲ್ಲದೆ ಸಂಜೆ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು.

seer Siddheshwara Swamiji, dies, Vijayapura,

Articles You Might Like

Share This Article