ಶಾಲಾ ಹಂತದಲ್ಲೇ ಆತ್ಮರಕ್ಷಣೆ ತರಬೇತಿ

Social Share

ಬೆಂಗಳೂರು,ಫೆ.21- ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಸಂಬಂಧಪಟ್ಟಂತೆ ಸರ್ಕಾರ ಬಿಗಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಶಾಲಾ ಹಂತದಲ್ಲಿ ಆತ್ಮರಕ್ಷಣಾ ತರಬೇತಿ ನೀಡುತ್ತಿದೆ ಎಂದು ಮಕ್ಕಳ ಮತ್ತು ಮಹಿಳಾ ಅಭಿವೃದ್ದಿ ಸಚಿವ ಆಚಾರ್ ಹಾಲಪ್ಪ ತಿಳಿಸಿದ್ದಾರೆ.

ವಿಧಾನಪರಿಷತ್‍ನಲ್ಲಿ ಸದಸ್ಯರಾದ ಸಲೀಂ ಅಹಮ್ಮದ್ ಪರವಾಗಿ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಕಳೆದ ಮೂರು ವರ್ಷದಲ್ಲಿ ರಾಜ್ಯದಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳ ವಿವರ ನೀಡಿದರು.

2020ರಲ್ಲಿ 479 ಅತ್ಯಾಚಾರ, 4544 ಲೈಂಗಿಕ ದೌರ್ಜನ್ಯ, 176 ವರದಕ್ಷಿಣೆ ಸಾವು, 2026 ವರದಕ್ಷಿಣೆ ಕಿರುಕುಳ, 2166 ಪೋಕ್ಸೋ ಪ್ರಕರಣಗಳು ದಾಖಲಾಗಿವೆ. 2021ರಲ್ಲಿ 519 ಅತ್ಯಾಚಾರ, 4913 ಲೈಂಗಿಕ ದೌರ್ಜನ್ಯ, 157 ವರದಕ್ಷಿಣೆ ಸಾವು, 2289 ವರದಕ್ಷಿಣೆ ಕಿರುಕುಳ, 2863 ಪೋಕ್ಸೋ ಪ್ರಕರಣಗಳು ದಾಖಲಾಗಿವೆ. 2022ರಲ್ಲಿ 539 ಅತ್ಯಾಚಾರ, 5856 ಲೈಂಗಿಕ ದೌರ್ಜನ್ಯ, 163 ವರದಕ್ಷಿಣೆ ಸಾವು, 2796 ವರದಕ್ಷಿಣೆ ಕಿರುಕುಳ, 3097 ಪೋಕ್ಸೋ ಪ್ರಕರಣಗಳು ದಾಖಲಾಗಿವೆ.

BIG NEWS : ಬೀದಿ ಗುದ್ದಾಟಕ್ಕಿಳಿದ ರೋಹಿಣಿ – ರೂಪಾಗೆ ವರ್ಗಾವಣೆ ಶಿಕ್ಷೆ ನೀಡಿದ ಸರ್ಕಾರ

2023ರ ಜನವರಿಗೆ 29 ಅತ್ಯಾಚಾರ, 456 ಲೈಂಗಿಕ ದೌರ್ಜನ್ಯ, 5 ವರದಕ್ಷಿಣೆ ಸಾವು, 116 ವರದಕ್ಷಿಣೆ ಕಿರುಕುಳ, 207 ಪೋಕ್ಸೋ ಪ್ರಕರಣಗಳು ದಾಖಲಾಗಿವೆ. ಅತ್ಯಾಚಾರದ ಆರೋಪಿಗಳಿಗೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ 2021ರಲ್ಲಿ 821, 2023ರ ಜನವರಿಗೆ 30 ಮಂದಿ ಬಂಧಿಸಲಾಗಿದೆ. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಕ್ರಮವಾಗಿ 7838, 8768, 8385, ವರದಕ್ಷಿಣೆ ಸಾವಿನಲ್ಲಿ 8, ವರದಕ್ಷಿಣೆ ಕಿರುಕುಳದಲ್ಲಿ 4475, 5403, 5832, 305 ಪೋಕ್ಸೊ ಪ್ರಕರಣದಲ್ಲಿ 2548 , 3408 3376, 199 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬಲು ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ಶಾಲೆಗಳಲ್ಲಿ ಕರಾಟೆ, ಜೂಡೋ, ಟಕ್ವಾಂಡೊ ಆತ್ಮರಕ್ಷಣಾ ತರಬೇತಿಯನ್ನು ನೀಡಲಾಗುತ್ತಿದೆ. ಈವರೆಗೂ 1754 ಮೆಟ್ರಿಕ್ ಪೂರ್ವ, 25 ಸಾವಿರ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರು ತರಬೇತಿ ಪಡೆದಿದ್ದಾರೆ ಎಂದರು.

ಆದರೆ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಅವರು, ಈ ರೀತಿಯ ತರಬೇತಿಗಳಿಂದ ದೌರ್ಜನ್ಯ ನಿಲ್ಲುವುದಿಲ್ಲ. ಪೊಲೀಸ್ ಠಾಣೆಗಳನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಬೇಕು ಎಂದರು.

ಸದಸ್ಯ ಭಾರತಿ ಶೆಟ್ಟಿ ಅವರು ಸ್ವತಂತ್ರ ನಂತರದಿಂದಲೂ ಈ ರೀತಿಯ ಪ್ರಕರಣದಿಂದ ತಲೆತಗ್ಗಿಸುವ ವಾತಾವರಣವಿದೆ. ಸರ್ಕಾರ ಶಾಲಾ ಶಿಕ್ಷಣದಲ್ಲಿ ನೈತಿಕ ಪಠ್ಯವನ್ನು ಅಳವಡಿಸಬೇಕೆಂದು ಹಲವಾರು ಬಾರಿ ಮನವಿ ಮಾಡಿದ್ದೇವೆ. ಆದರೆ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ದೌರ್ಜನ್ಯ ಪ್ರಕರಣಗಳು ತೀವ್ರಗೊಂಡಿವೆ ಎಂದು ಆಕ್ಷೇಪಿಸಿದರು.

ಜೈಲು ಅಪರಾಧ ಚಟುವಟಿಕೆಗಳಿಗೆ ಪ್ರೋತ್ಸಾಹ : ಎಸ್‍ಪಿ ಮುಖಂಡ ಬಂಧನ

ಸದಸ್ಯ ತಳವಾರ್ ಸಾಬಣ್ಣ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಅಪೌಷ್ಠಿಕತೆ ಇದೆ. ಅದನ್ನು ನಿವಾರಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ. ಪೌಷ್ಟಿಕಾಂಶ ಕೊರತೆ ಇರುವ ಮಗುವಿಗೆ ಅಂಗನವಾಡಿಗಳಲ್ಲಿ 8 ರೂ.ಗಳಲ್ಲಿ , ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ 12 ರೂ. ವೆಚ್ಚದಲ್ಲಿ ಉತ್ತಮ ಆಹಾರ ನೀಡಲಾಗುತ್ತಿದೆ. ಹಾಲು, ಮೊಟ್ಟೆ ಸೇರಿದಂತೆ ಪೋಷ್ಟಿಕಾಂಶಗಳನ್ನು ಒದಗಿಸಲಾಗುತ್ತಿದೆ. ಕಾಲಕಾಲಕ್ಕೆ ಚುಚ್ಚು ಮದ್ದು, ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಮಾತೃಪೂರ್ಣ ಯೋಜನೆಯಲ್ಲಿ ಮಹಿಳೆಯರ ಅಪೌಷ್ಟಿಕತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಸದಸ್ಯ ಬಿ.ಎಸ್.ಅರುಣ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಮಹಿಳಾ ಕಲ್ಯಾಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ 12 ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಇವುಗಳಡಿ 2019-20ರಲ್ಲಿ 2250 ಕೋಟಿ ಮಹಿಳಾ ಸಬಲೀಕರಣಕ್ಕೆ ಅಗತ್ಯವಾದ ಎಲ್ಲ ನೆರವುಗಳನ್ನು ತಮ್ಮ ಸರ್ಕಾರ ನೀಡುತ್ತಿದೆ.

ವಿಜಯಪುರದಲ್ಲಿ ವೈನ್‍ಪಾರ್ಕ್ ನಿರ್ಮಾಣ

ಸ್ಥಳೀಯ ಮಟ್ಟದಲ್ಲಿ ಗ್ರಾಪಂ ಸಮಿತಿಗಳನ್ನು ರಚಿಸಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ಕಾರ್ಯಕ್ರಮಗಳ ಭೌತಿಕ ಪ್ರಗತಿ ಕೂಡ ಉತ್ತಮವಾಗಿದೆ. ಮಾಶಾಸನ ಯೋಜನೆಯಡಿ 52 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದು ವಿವರಿಸಿದರು.

Self defense, training, school, level, Minister, Achar Halappa,

Articles You Might Like

Share This Article