ಸಲಿಂಗ ವಿವಾಹ ಮಸೂದೆಗೆ ಅಮೆರಿಕ ಸೆನೆಟ್ ಅಂಗೀಕಾರ

Social Share

ವಾಷಿಂಗ್ಟನ್, ನ.30- ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವ ಮಸೂದೆಗೆ ಅಮೆರಿಕ ಸೆನೆಟ್ ಅಂಗೀಕಾರ ನೀಡಿದೆ.
ಕಳೆದ 2015ರಲ್ಲೇ ಸಲಿಂಗ ವಿವಾಹಕ್ಕೆ ಅಮೆರಿಕದಲ್ಲಿ ಕಾನೂನು ಬದ್ಧ ಎಂದು ಘೋಷಿಸಲಾಗಿತ್ತು. ಇದನ್ನು ಕೆಲವರು ವಿರೋಧಿಸುತ್ತಾರೆ. ನ್ಯಾಯಾಲಯದ ಮೊರೆ ಹೋಗಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಮಸೂದೆಯನ್ನು ಜಾರಿಗೆ ತರಲಾಗಿತ್ತು.

ಸೆನೆಟ್ ಸಭೆಯಲ್ಲಿ ಮಸೂದೆ ಮಂಡಿಸಿದಾಗ 61 ಮತಗಳು ಪರವಾಗಿ ಮತ್ತು 36 ಮತಗಳು ವಿರುದ್ಧವಾಗಿ ಬಿದ್ದಿವೆ.
ಡೆಮಾಕ್ರಟಿಕ್ ಪಕ್ಷದ 49 ಸೆನೆಟರ್‍ಗಳು ಮತ್ತು ರಿಪಬ್ಲಿಕ್‍ನ 12 ಸೆನೆಟರ್‍ಗಳು ಪರವಾಗಿ ಮತ ಚಲಾಯಿಸಿದ್ದಾರೆ. ಇದರಲ್ಲಿ ಡೆಮಾಕ್ರಟಿಕ್ ಪಕ್ಷದ ಒಬ್ಬರು ಮತ್ತು ರಿಪಬ್ಲಿಕನ್ ಪಕ್ಷದ ಇಬ್ಬರು ಸಭೆಗೆ ಗೈರು ಹಾಜರಾಗಿದ್ದಾರೆ.

ಭಾರಿ ವೈರಲ್ ಆಯ್ತು ಸೈನಿಕರ ಫೈಟಿಂಗ್ ವೀಡಿಯೋ

ಇದು ಒಂದು ದೊಡ್ಡ ಸಮಾನತೆಯ ಮಹತ್ವದ ಹೆಜ್ಜೆ ಎಂದು ಸೆನೆಟ್ ನಾಯಕ ಚುಕ್ ಶೋಮತ್ ಹೇಳಿದ್ದಾರೆ.
ಈ ಮಸೂದೆ ಅಂಗೀಕಾರದಿಂದಾಗಿ ಅಮೆರಿಕದ ಎಲ್ಲ ನಾಗರಿಕರು ಹೊಸ ಹಕ್ಕು ಪಡೆಯಲಿದ್ದಾರೆ. ಯಾರನ್ನೇ ಆಗಲಿ ಪ್ರೀತಿಸಲಿ. ಅವರು ವಿವಾಹ ಮಾಡಿಕೊಳ್ಳಲು ಅರ್ಹರು ಎಂದು ತಿಳಿಸಲಾಗಿದೆ.

ಜೆಡಿಎಸ್ ಪಂಚರತ್ನ ರಥಯಾತ್ರೆಗೆ ವ್ಯಾಪಕ ಜನಬೆಂಬಲ

Senate, passes, bill, protect, same-sex, marriage,

Articles You Might Like

Share This Article