ಹಿರಿಯರಿಗೆ ಮನವೊಲಿಸಿ ಕಿರಿಯರಿಗೆ ಅವಕಾಶ ನೀಡಲು ಮುಂದಾದ ಬಿಜೆಪಿ

Social Share

ಬೆಂಗಳೂರು,ಡಿ.8- ಮುಂದಿನ ಪೀಳಿಗೆಗೆ ಅವಕಾಶ ಕಲ್ಪಿಸಲು 70 ವರ್ಷ ಮೇಲ್ಪಟ್ಟ ತನ್ನ ನಾಯಕರ ಪಟ್ಟಿಯನ್ನು ಸಿದ್ಧಪಡಿಸುತ್ತಿರುವ ಬಿಜೆಪಿ ಚುನಾವಣೆಗೆ ಸ್ಪರ್ಧಿಸದಂತೆ ಮನವೊಲಿಸಲು ಮುಂದಾಗಿದೆ. ಸದ್ಯ ವಿಧಾನಸಭೆಯಲ್ಲಿ ಬಿಜೆಪಿ 120 ಸ್ಥಾನಗಳನ್ನು ಹೊಂದಿದೆ.

ಸವದತ್ತಿ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಆನಂದ ಮಾಮನಿ ಮತ್ತು ಹುಕ್ಕೇರಿ ಶಾಸಕ ಉಮೇಶ ಕತ್ತಿ ನಿಧನರಾಗಿದ್ದಾರೆ. ಶಿರಸಿಯನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿನಿಸುತ್ತಿದ್ದಾರೆ. ಮೂರ್ನಾಲ್ಕು ಅವಧಿಗೆ ಚುನಾಯಿತರಾಗಿ 70 ವರ್ಷ ಮೀರಿದ ಶಾಸಕರು ಅನೇಕರಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆ ನಡೆಯಲು ಇನ್ನು ಕೆಲವೇ ತಿಂಗಳು ಬಾಕಿ ಇದೆ. ಮುಂದಿನವರೆಗೆ ಅವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಬಿಜೆಪಿ ಕೆಲವು ಷರತ್ತುಗಳೊಂದಿಗೆ 70 ವರ್ಷ ಮೇಲ್ಪಟ್ಟ ತನ್ನ ನಾಯಕರ ಪಟ್ಟಿಯನ್ನು ಸಿದ್ಧಪಡಿಸುತ್ತಿದೆ.

ಡಬಲ್ ಇಂಜಿನ್ ಸರ್ಕಾರವೆಂದು ಎದೆ ಬಡಿದುಕೊಳ್ಳಬೇಡಿ, ಗಡಿ ವಿವಾದ ಬಗೆ ಹರಿಸಿ: ಸಿದ್ದರಾಮಯ್ಯ

ಕೆಲವು ತಿಂಗಳ ಹಿಂದೆ, 79 ವರ್ಷದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮುಂಬರುವ ಚುನಾವಣೆಯಲ್ಲಿ ಸ್ರ್ಪಧಿಸುವುದಿಲ್ಲ ಎಂದು ಬಹಿರಂಗವಾಗಿ ಹೇಳಿದ್ದರು.

ಇನ್ನು ಕೆಲವು ಬಿಜೆಪಿ ಶಾಸಕರು ಕೂಡ ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವ ಸಾಧ್ಯತೆ ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಆರೋಗ್ಯ ಸೇರಿದಂತೆ ನಾನಾ ಕಾರಣಗಳಿಂದ ಸ್ರ್ಪಧಿಸುವುದಿಲ್ಲ ಎಂದು ಕೆಲವು ಹಿರಿಯ ನಾಯಕರು ಹೇಳಿದ್ದಾರೆ.

ಚುನಾವಣೆಯಿಂದ ದೂರ ಉಳಿಯುವಂತ ನಾಯಕರ ಪಟ್ಟಿಯನ್ನು ಸಿದ್ಧಪಡಿಸುತ್ತಿದ್ದೇವೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ. ಗೆಲುವಿಗಾಗಿ, ಜಾತಿಯ ಅಂಶ ಮತ್ತು ಜನಪ್ರಿಯ ಅವಶ್ಯಕತೆಯಿರುವುದರಿಂದ ಕೆಲವರು ನಾಯಕರ ಸ್ರ್ಪಧಿಯನ್ನು ತಡೆಯಲು ಅಸಾಧ್ಯ.

ಮಹಾರಾಷ್ಟ್ರ : ಗುಂಡು ಹಾರಿಸಿ ಗುತ್ತಿಗೆದಾರನ ಕೊಲೆ

ಕೆಲವು ಹಿರಿಯ ನಾಯಕರು 70 ವರ್ಷ ಮೇಲ್ಪಟ್ಟವರಾಗಿದ್ದರೂ ದೈಹಿಕವಾಗಿಯೂ ಸದೃಢರಾಗಿದ್ದಾರೆ. ನಾವು ಕೆಲವು ನಾಯಕರನ್ನು ಆಯ್ಕೆ ಮಾಡಬಹುದು ಮತ್ತು ಹೊಸಬರಿಗೆ ಅವಕಾಶ ನೀಡುವಂತೆ ಮನವೊಲಿಸಬಹುದು. ಆದರೆ ಅದೇ ಸಮಯದಲ್ಲಿ, ಈ ಹಿರಿಯ ನಾಯಕರನ್ನು ಸ್ಪರ್ಧೆಯಿಂದ ಬಲವಂತವಾಗಿ ಹೊರದೂಡಲಾಗದು ಎಂದು ಹೇಳಲಾಗಿದೆ.

ಇತ್ತೀಚೆಗಷ್ಟೇ ನಡೆದ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಲವು ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿ, ಹೊಸಬರಿಗೆ ಸ್ರ್ಪಧಿಸಲು ಅವಕಾಶ ಮಾಡಿಕೊಟ್ಟಿತ್ತು. ಕರ್ನಾಟಕ ಬಿಜೆಪಿ ಕೂಡ ಇಲ್ಲಿ ಇಂತಹದ್ದೇ ಕಾರ್ಯ ವಿಧಾನವನ್ನು ನಿರೀಕ್ಷಿಸುತ್ತಿದೆ.

ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶ(LiVE)

ಹಿರಿಯರಿಗೆ ಟಿಕೆಟ್ ನೀಡದಿರುವ ಸಂಬಂಧ ಕರ್ನಾಟಕ ಮತ್ತು ದೆಹಲಿಯಲ್ಲಿ ಚರ್ಚೆ ನಡೆಯುತ್ತಿವೆ. ಈ ಪಟ್ಟಿಯನ್ನು ಈಗ ಪ್ರಕಟಿಸುವುದಿಲ್ಲ ಏಕೆಂದರೆ ಇದು ಪಕ್ಷದ ಭವಿಷ್ಯದ ಮೇಲೆ ಪರಿಣಾಮ ಬೀರಬಹುದು.
ಬಸವರಾಜ ಬೊಮ್ಮಾಯಿ ಸಂಪುಟದ ಕೆಲವು ಸಚಿವರಿಗೂ ಟಿಕೆಟ್ ನಿರಾಕರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

senior, BJP leaders, election, Karnataka,

Articles You Might Like

Share This Article