ಈ ಹಿಂದೆ ಪಡೆದ ಲಸಿಕೆಯನ್ನೇ ಬೂಸ್ಟರ್ ಡೋಸ್ ಆಗಿ ನೀಡಲಾಗುವುದು : ಗೌರವ್ ಗುಪ್ತಾ

Social Share

ಬೆಂಗಳೂರು,ಜ.10-ಈ ಹಿಂದೆ ಪಡೆದ ಲಸಿಕೆಯನ್ನೇ ಬೂಸ್ಟರ್ ಡೋಸ್ ಆಗಿ ನೀಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಇಂದಿಲ್ಲಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲನೆ ಹಾಗೂ ಎರಡನೆ ಡೋಸ್ ನೀಡಿಕೆ ಸಂದರ್ಭದಲ್ಲಿ ಆಯೋಜಿಸಿದ್ದ ಶಿಬಿರಗಳ ಮಾದರಿಯಲ್ಲೇ ಬೂಸ್ಟರ್ ಡೋಸ್ ನೀಡಿಕೆಗೂ ಶಿಬಿರಗಳನ್ನು ಆಯೋಜಿಸಲಾಗುವುದು ಎಂದು ಅವರು ವಿವರಣೆ ನೀಡಿದರು.
ನಗರದಲ್ಲಿ ಶಿಬಿರಗಳನ್ನು ಆಯೋಜಿಸಿ 60 ವರ್ಷ ಮೇಲ್ಪಟ್ಟ ಹಿರಿಯರು, ಅದರಲ್ಲೂ ಕೊಮರ್ಬಿಟಿಸ್‍ನಿಂದ ನರಳುತ್ತಿರುವವವರಿಗೆ ಆಧ್ಯತೆ ಮೇಲೆ ಬೂಸ್ಟರ್ ಲಸಿಕೆ ಹಾಕಲಾಗುವುದು. ನಂತರ ಹೆಲ್ತ್‍ಕೇರ್ ಸಿಬ್ಬಂದಿಗಳು ಹಾಗೂ ಫ್ರಂಟ್‍ಲೈನ್ ವಾರಿಯರ್ಸ್‍ಗಳಾದ ಪೊಲೀಸರು, ಬಿಬಿಎಂಪಿ ಸಿಬ್ಬಂದಿಗಳು, ಸಿವಿಕ್ ಏಜನ್ಸಿಯ ಸಿಬ್ಬಂದಿಗಳಿಗೆ ಬೂಸ್ಟರ್ ಲಸಿಕೆ ನೀಡಲಾಗುವುದು ಎಂದು ಅವರು ವಿವರಣೆ ನೀಡಿದರು.
ಕೊರೊನಾ ಸೋಂಕು ಹಲವಾರು ರೂಪಾಂತರಗೊಳ್ಳುತ್ತಿದೆ.ಹೀಗಾಗಿ ಸೋಂಕಿನ ತೀವ್ರತೆಯಿಂದ ಪಾರಾಗಬೇಕಾದರೆ ಪ್ರತಿಯೊಬ್ಬರು ಲಸಿಕೆ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿಕೊಂಡರು. ಈಗಾಗಲೇ ಶೇ.94ರಷ್ಟು ಮಂದಿಗೆ ಮೊದಲ ಡೋಸ್, ಶೇ.80ಕ್ಕೂ ಹೆಚ್ಚು ಮಂದಿಗೆ ಎರಡನೆ ಡೋಸ್ ಹಾಕಲಾಗಿದೆ. ಉಳಿದವರು ಅದಷ್ಟು ಶೀಘ್ರ ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರಬೇಕು ಎಂದು ಅವರು ಕರೆ ನೀಡಿದರು.
ನಗರದಲ್ಲಿ ಸೋಂಕಿನ ತೀವ್ರತೆ ಹೆಚ್ಚಾಗುತ್ತಿದ್ದರೂ ಇದುವರೆಗೂ ಆಸ್ಪತ್ರೆಗಳಲ್ಲಿ ಬೆಡ್‍ಗಳ ಕೊರತೆ ಕಂಡು ಬಂದಿಲ್ಲ. ಸೋಂಕು ತಗುಲಿರುವ ಬಹುತೇಕ ಮಂದಿ ಮನೆಗಳಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾರಿಗೆ ಬೆಡ್‍ಗಳ ಅವಶ್ಯಕತೆ ಇದೆ ಎನ್ನುವುದನ್ನು ವೈದ್ಯರು ತಿಳಿಸಲಿದ್ದಾರೆ. ನಿಮ್ಮ ಮನೆ ಬಾಗಿಲಿಗೆ ಬರುವ ಮೊಬೈಲ್ ಟ್ರಯಾಜಿಂಗ್ ಸೆಂಟರ್‍ನ ವೈದ್ಯರು ತಪಾಸಣೆ ನಡೆಸಿ ಆಸ್ಪತ್ರೆಗೆ ದಾಖಲಾಗಬೇಕೆ ಅಥವಾ ಮನೆಯಲ್ಲೇ ಚಿಕಿತ್ಸೆ ಪಡೆಯಬೇಕೆ ಎಂಬುದನ್ನು ನಿರ್ಧರಿಸಲಿದ್ದಾರೆ. ಹೀಗಾಗಿ ಬೆಡ್ ಬಗ್ಗೆ ಯಾರು ಚಿಂತನೆ ಮಾಡುವ ಅವಶ್ಯಕತೆ ಇಲ್ಲ ಎಂದರು.
ಆದರೂ ಬಿಬಿಎಂಪಿಯವರು ಅಗತ್ಯ ಬೆಡ್ ಸಂಗ್ರಹ ಮಾಡಿಕೊಳ್ಳುವ ಪೂರ್ವ ಸಿದ್ದತೆ ಆರಂಭಿಸಿದ್ದೇವೆ. ಖಾಸಗಿ ಆಸ್ಪತ್ರೆಯವರಿಗೆ ಬೆಡ್ ಮೀಸಲಿರಿಸುವಂತೆ ಈಗಾಗಲೆ ಮನವಿ ಮಾಡಿಕೊಂಡಿದ್ದೇವೆ. ಅದಷ್ಟು ಶೀಘ್ರ ಅಗತ್ಯ ಬೆಡ್ ವ್ಯವಸ್ಥೆ ಮಾಡಿಕೊಳ್ಳುವ ಭರವಸೆ ನೀಡಿದರು. ಕೊರೊನಾ ಸೋಂಕು ಹೆಚ್ಚಳವಾಗದಂತೆ ನಾವು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ.
ಕೊರೊನ ತಪಾಸಣಾ ಸಾಮಥ್ರ್ಯವನ್ನು 35 ಸಾವಿರದಿಂದ 70 ಸಾವಿರಕ್ಕೆ ಹೆಚ್ಚಳ ಮಾಡಿದ್ದೇವೆ. ಅವಶ್ಯಕತೆ ಬಿದ್ದರೆ ತಪಾಸಣಾ ಸಾಮಥ್ರ್ಯ ಮತ್ತಷ್ಟು ಹೆಚ್ಚಿಸಲು ನಾವು ಸಿದ್ದರಿದ್ದೇವೆ ಎಂದು ಗೌರವ್ ಗುಪ್ತಾ ವಿವರಣೆ ನೀಡಿದರು. ಕೊರೊನಾ ಸೋಂಕಿನಿಂದ ಮುಕ್ತರಾಗಬೇಕಾದರೆ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಳ್ಳುವತ್ತ ಗಮನ ಹರಿಸಬೇಕು ಎಂದು ಗುಪ್ತಾ ಮನವಿ ಮಾಡಿಕೊಂಡರು.

Articles You Might Like

Share This Article