ಬೆಂಗಳೂರು.ಅ.11- ಹಿರಿಯ ನಟ ಲೋಹಿತಾಶ್ವ ಅವರಿಗೆ ಜೀವರಕ್ಷಕ ಸಾದನ (ವೆಂಟಿಲೇಟರ್) ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಪರಿಸ್ಥಿತಿ ಗಂಭೀರವಾಗಿದೆ. ಹೃದಯಾಘಾತದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇಂದು ಆಸ್ಪತ್ರೆ ಬಳಿ ಪುತ್ರ ಶರತ್ ಲೋಹಿತಾಶ್ವ ಮಾತನಾಡಿ ತಂದೆಯ ಸ್ಥಿತಿ ತುಂಬ ಗಂಭೀರವಾಗಿದೆ ಶೀಘ್ರದಲ್ಲೇ ವೈದ್ಯರು ಹೆಚ್ಚಿನ ಮಾಹಿತಿ ನೀಡುತ್ತಾರೆ ಹೇಳಿದ್ದಾರೆ.
ಕೆಲವೇ ದಿನಗಳ ಹಿಂದೆ ಲೋಹಿತಾಶ್ವ ಅವರಿಗೆ ಆರೋಗ್ಯದಲ್ಲಿ ಸಣ್ಣ ಸಮಸ್ಯೆ ಉಂಟಾಗಿತ್ತು ಅದಕ್ಕೆ ಚಿಕಿತ್ಸೆ ನೀಡುತ್ತಿರುವಾಗಲೇ ಪರಿಸ್ಥಿತಿ ಗಂಭೀರ ಆಯಿತು. ಉಸಿರಾಟದ ತೊಂದರೆ ಕೂಡ ಕಾಣಿಸಿಕೊಂಡಿತು. ನನ್ನ ಕಣ್ಣ ಮುಂದೆಯೇ ಅವರಿಗೆ ಹೃದಯಾಘಾತ ಎಂದು ಆ ಘಟನೆಯನ್ನು ಶರತ್ ಲೋಹಿತಾಶ್ವ ಭಾವುಕರಾಗಿದ್ದಾರೆ.