BIG NEWS : ಬೀದಿ ಗುದ್ದಾಟಕ್ಕಿಳಿದ ರೋಹಿಣಿ – ರೂಪಾಗೆ ವರ್ಗಾವಣೆ ಶಿಕ್ಷೆ ನೀಡಿದ ಸರ್ಕಾರ

Social Share

ಬೆಂಗಳೂರು,ಫೆ.21-ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ ಸೃಷ್ಟಿಸಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ರೂಪ ಅವರನ್ನು ವರ್ಗಾವಣೆಗೊಳಿಸಿ ಅವರಿಗೆ ಯಾವುದೇ ಸ್ಥಳವನ್ನು ನಿಯೋಜಿಸದೆ ರಜೆ ಮೇಲೆ ತೆರಳಲು ಸೂಚಿಸಿದೆ.

ಜೊತೆಗೆ ಕಂದಾಯ ಇಲಾಖೆಯಲ್ಲಿ ಭೂ ದಾಖಲೆ ಮತ್ತು ಸರ್ವೆ ಇಲಾಖೆಯ ಆಯುಕ್ತರಾಗಿದ್ದ ಮೌನೀಶ್ ಮೌದ್ಗಿಲ್ ಅವರನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಿದೆ.

ಭದ್ರಾವತಿಯಿಂದ ಪಂಚರತ್ನ ರಥಯಾತ್ರೆ ಪುನಾರಂಭ

ರಾಜ್ಯ ಸರ್ಕಾರ ಇಂದು ಐವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕಿ ನಿರ್ದೇಶಕಿಯಾಗಿದ್ದ ಐಜಿಪಿ ರೂಪ ಮೌದ್ಗಿಲ್ ಸ್ಥಾನಕ್ಕೆ ಭಾರತಿ.ಡಿ ಅವರನ್ನು ವರ್ಗಾವಣೆ ಮಾಡಲಾಗಿದೆ.

ಮುಜರಾಯಿ ಇಲಾಖೆ ಆಯುಕ್ತಯಾಗಿದ್ದ ರೋಹಿಣಿ ಸಿಂಧೂರಿ ಸ್ಥಾನಕ್ಕೆ ಬಸವರಾಜೇಂದ್ರ.ಎಚ್ ವರ್ಗಾವಣೆ ಮಾಡಲಾಗಿದ್ದು, ಮೌನಿಶ್ ಮೌದ್ಗಿಲ್ ಸ್ಥಾನಕ್ಕೆ ಸಿ.ಎನ್.ಶ್ರೀಧರ್ ಅವರನ್ನು ಹಾಗೂ ತುಮಕೂರು ನಗರ ಮಹಾನಗರ ಪಾಲಿಕೆ ಆಯುಕ್ತರಾಗಿ ದರ್ಶನ್ ಎಚ್.ಪಿ ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ.

ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿ ಹೃದಯಾಘಾತದಿಂದ ಸಾವು

ರೋಹಿಣಿ ಸಿಂಧೂರಿ ಮತ್ತು ರೂಪ ಮೌದ್ಗಿಲ್ ಅವರಿಗೆ ಸರ್ಕಾರ ಯಾವುದೇ ಹುದ್ದೆ ತೋರಿಸಿಲ್ಲ.

Senior, officers, D Roopa, Rohini Sindhuri, transfer,

Articles You Might Like

Share This Article