ಪ್ಯಾರಿಸ್ ತಲುಪಿದ ಬಿಕನಿ ಕಿಲ್ಲರ್ ಚಾಲ್ಸ್ ಶೋಭರಾಜ್

Social Share

ಪ್ಯಾರಿಸ್,ಡಿ.23- ಜೀವಾವಧಿ ಶಿಕ್ಷೆಯ ನಡುವೆ ಸನ್ನಡೆತೆಗಾಗಿ ಬಿಡುಗಡೆಯಾಗಿರುವ ಬಿಕನಿ ಕಿಲ್ಲರ್ ಚಾಲ್ರ್ಸ್ ಶೋಭರಾಜ್ ಪ್ರಾನ್ಸ್ ಪ್ರವೇಶಿಸಿದ್ದಾನೆ. ವಿಯೆಟ್ನಾಂನ ತಾಯಿ ಹಾಗೂ ಭಾರತೀಯ ತಂದೆಗೆ ಜನಿಸಿದ ಚಾಲ್ರ್ಸ್ ಶೋಭರಾಜ್ ಪ್ರಾನ್ಸ್ ಪ್ರಜೆಯಾಗಿದ್ದಾನೆ.

1970ರಲ್ಲಿ ಸರಣಿ ಕೊಲೆಗಳನ್ನು ಮಾಡಿದ ಆರೋಪಕ್ಕೆ ಗುರಿಯಾಗಿದ್ದ. ಆಫ್ಘಾನಿಸ್ತಾನ, ಭಾರತ, ಥೈಲ್ಯಾಂಡ್, ಟರ್ಕಿ, ನೆಪಾಲ್, ಇರಾನ್ ಹಾಗೂ ಹಾಂಗ್‍ಕಾಂಗ್‍ನ 20ಕ್ಕೂ ಹೆಚ್ಚು ಮಹಿಳೆಯರನ್ನು ಹತ್ಯೆ ಮಾಡಿದ ಆರೋಪದಿಂದಾಗಿ ಎರಡು ದಶಕಗಳ ಹಿಂದೆ ದೆಹಲಿಯಲ್ಲಿ ಬಂಧನಕ್ಕೆ ಒಳಗಾಗಿದ್ದ. ಆದರೆ ತಿಹಾರ್ ಜೈಲಿನಿಂದ ಪರಾರಿಯಾಗಿದ್ದ.

2003ರಲ್ಲಿ ಕಠ್ಮಂಡುವಿನಲ್ಲಿ ಸಿಕ್ಕಿ ಬಿದಿದ್ದ. ಅಮೆರಿಕಾ ಮತ್ತು ಕೆನಡಾದ ಪ್ರಜೆಗಳನ್ನು ಹತ್ಯೆ ಮಾಡಿದ ಪ್ರಕರಣಗಳಲ್ಲಿ ಆತನಿಗೆ ಜೀವಾವಧಿ ಶಿಕ್ಷೆಯಾಗಿತ್ತು. ನೇಪಾಳದ ಜೈಲಿನಲ್ಲಿ 20 ವರ್ಷ ಕಳೆದ 78 ವರ್ಷದ ಆತನನ್ನು ಕಳೆದ ವಾರ ಬಿಡುಗಡೆ ಮಾಡಲಾಗಿತ್ತು. ಈಗಾಗಲೇ ಶಿಕ್ಷೆಯಲ್ಲಿ ಆತ ಶೇ.75ರಷ್ಟು ಪೂರೈಸಿದ್ದಾನೆ.

ಇನ್ನೂ ಗುಟ್ಟಾಗೇ ಉಳಿದ ಹಾಸನ ಜಿಲ್ಲೆಯ ಜೆಡಿಎಸ್ ಅಭ್ಯರ್ಥಿಗಳ ಹೆಸರು

ಹೃದ್ರೋಗದಿಂದ ಬಳಲುತ್ತಿರುವ ಚಾಲ್ರ್ಸ್ ಜೈಲಿನಲ್ಲಿ ಆತ ಉತ್ತಮ ನಡವಳಿಕೆ ಹೊಂದಿದ್ದಾನೆ ಎಂದು ಉಲ್ಲೇಖಿಸಿದ ನ್ಯಾಯಾೀಧಿಶರು ಶಿಕ್ಷಾ ಬಂಧಿ ಖೈದಿಯ ಬಿಡುಗಡೆಗೆ ಆದೇಶಿಸಿದರು. ಬಿಡುಗಡೆಯಾದ 15 ದಿನದ ಒಳಗೆ ನೇಪಾಳ ತೊರೆಯುವಂತೆ ಆದೇಶಿಸಲಾಗಿತ್ತು. ಅದರ ಪ್ರಕಾರ ಆತನ ಪ್ರಾನ್ಸ್ ಪ್ರವಾಸಕ್ಕೆ ಸ್ನೇಹಿತರು ಹಣದ ಸಹಾಯ ಮಾಡಿದರು.

ಸ್ನೇಹಿತರು ಕಳುಹಿಸಿದ ಹಣದಲ್ಲಿ ವಿಮಾನದ ಟಿಕೆಟ್‍ಗಳನ್ನು ಖರೀದಿಸಿದ್ದ. ಕಠ್ಮಂಡುವಿನಲ್ಲಿದ್ದ ಪ್ರೆಂಚ್ ಎಂಬೇಸ್ಸಿ ಪ್ರಯಾಣಕ್ಕೆ ಅಗತ್ಯ ದಾಖಲೆಗಳನ್ನು ಒದಗಿಸಿತ್ತು. ಕೊನೆಗೆ ಆತ ಖತ್ತಾರ್ ಮಾರ್ಗವಾಗಿ ವಿಮಾನ ಪ್ರಯಾಣದ ಮೂಲಕ ಶನಿವಾರ ಪ್ಯಾರಿಸ್‍ನ ಗೌಲ್ಲೆ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾನೆ.

ಮಾಲ್ ಆಫ್ ಅಮೆರಿಕಾದಲ್ಲಿ ಗುಂಡಿನ ದಾಳಿ, ಯುವಕನ ಹತ್ಯೆ

ಪ್ರೆಂಚ್‍ನಲ್ಲಿನ ಆತನ ವಕೀಲೆ ಸಾಬೆಲ್ಲೆ ಕೌಂಟಂಟ್ ಪೆಯ್ರೆ ಪ್ರತಿಕ್ರಿಯಿಸಿದ್ದು, ಇದು ನನಗೆ ಸಂತೋಷ ತಂದಿದೆ. ಜೊತೆಗೆ ಆಘಾತವೂ ಇದೆ. ನನ್ನ ಕಕ್ಷಿದಾರ ಸ್ವತಂತ್ರ್ಯ ಜೀವನಕ್ಕೆ ಮರಳಲು 19 ವರ್ಷ ಬೇಕಾಯಿತು. ನೇಪಾಳದಲ್ಲಿ ನಕಲಿ ಮಾಡಲಾದ ಹಾಗೂ ತಪ್ಪು ಮಾಹಿತಿಯಿಂದ ಕೂಡಿದ ದಾಖಲೆಗಳ ಆಧಾರದ ಮೇಲೆ ಶಿಕ್ಷೆ ವಿಸಲಾಗಿತ್ತು ಎಂದು ದೂರಿದ್ದಾರೆ.

ಪ್ರಾನ್ಸ್‍ನಲ್ಲಿ ಚಾರ್ಲ್‍ನ್ಯಾಯಾಂಗದ ಸವಾಲುಗಳನ್ನು ಎದುರಿಸಬೇಕಾಗಬಹುದೇ ಎಂಬ ಪ್ರಶ್ನೆಗೆ ಪ್ರೆಂಚ್ ಸರ್ಕಾರ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿಲ್ಲ.

Serial Killer, Charles, Sobhraj, Arrives, France,

Articles You Might Like

Share This Article