ನ್ಯೂಜೆರ್ಸಿ,ಮೇ.27- ಜಸ್ಟಿನ್ ಎಂಬ ಸೇವಾ ನಾಯಿ ಡಿಫ್ಲೋಮಾ ಪದವಿ ಪಡೆದುಕೊಳ್ಳುವ ಮೂಲಕ ವಿಶ್ವದ ಗಮನ ಸೆಳೆದಿದೆ.ನ್ಯೂಜೆರ್ಸಿಯ ಸೆಟಾನ್ ಹಾಲ್ ವಿಶ್ವವಿದ್ಯಾನಿಲಯದಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಜಸ್ಟಿನ್ ಎಂಬ ಸೇವಾ ನಾಯಿಯು ವೇದಿಕೆಯಲ್ಲಿ ಡಿಫ್ಲೋಮಾ ಪ್ರಮಾಣ ಪತ್ರ ಪಡೆದುಕೊಂಡಿದೆ.
ಸೇವಾ ನಾಯಿ ಡಿಫ್ಲೋಮಾ ಪದವಿ ಪ್ರಮಾಣ ಪತ್ರ ಪಡೆದುಕೊಳ್ಳುತ್ತಿರುವ ವೀಡಿಯೊ ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಶ್ವಾನಪ್ರಿಯರ ಗಮನ ಸೆಳೆಯುತ್ತಿದೆ.ಸೆಟಾನ್ ಹಾಲ್‍ನ ಜೋಸೆಫ್ ಇ. ನೈರ್ ಗ್ರೇಸ್ ಮರಿಯಾನಿ ಅವರು ತಮ್ಮ ಸೇವಾ ನಾಯಿ ಜಸ್ಟಿನ್‍ನೊಂದಿಗೆ ತಮ್ಮ ಪದವಿ ಪಡೆದುಕೊಂಡಿದ್ದಾರೆ.
24 ಮಂದಿ ನೂತನ ಸಚಿವರ ಪ್ರಮಾಣವಚನ ಸ್ವೀಕಾರ, ಸಂಪುಟ ಭರ್ತಿ
ವಿಕಲಚೇತನರಾಗಿರುವ ಮರಿಯಾನಿ ಅವರ ಎಲ್ಲಾ ಕಾರ್ಯಗಳಿಗೂ ಜಸ್ಟಿನ್ ಸಹಕರಿಸುತ್ತಿದ್ದು, ಅವರ ಪದವಿ ಪ್ರಮಾಣ ಪತ್ರವನ್ನು ಪಡೆದುಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದೆ.ಲಾಂಗ್ ಐಲ್ಯಾಂಡ್‍ನಲ್ಲಿ ಸ್ವಾತಂತ್ರಕ್ಕಾಗಿ ಲಾಭೋದ್ದೇಶವಿಲ್ಲದ ಕ್ಯಾನೈನ್ ಕಂಪ್ಯಾನಿಯನ್ಸï ಮೂಲಕ ಜಸ್ಟಿನ್ ಅವರನ್ನು ಸ್ವೀಕರಿಸಿದಾಗಿನಿಂದಲೂ ಜಸ್ಟಿನ್ ಅವರ ಜತೆಯಲ್ಲೇ ಇರುವುದು ವಿಶೇಷ.
ಮರಿಯಾನಿ ಜತೆಗೆ ಜಸ್ಟಿನ್ ಕ್ಯಾನೈನ್ ಕಂಪ್ಯಾನಿಯನ್ಸ್‍ನಲ್ಲಿ ಅದೇ ತರಬೇತಿ ತರಗತಿಯಲ್ಲಿದ್ದದ್ದು ಅದ್ಭುತವಾಗಿದೆ! ಎಂತಹ ಅದ್ಭುತ ಕ್ಷಣ ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಇದು ನಾನು ನೋಡಿದ ಅತ್ಯಂತ ಮಧುರವಾದ ವಿಷಯವಾಗಿರಬೇಕು! ನಾನು ಎಲ್ಲರೊಂದಿಗೆ ಹುರಿದುಂಬಿಸಿದೆ! ಶ್ಲಾಘನೆಗೆ ಯೋಗ್ಯವಾಗಿದೆ! ಅಭಿನಂದನೆಗಳು, ಗ್ರೇಸ್ ಮತ್ತು ಜಸ್ಟಿನï! ಇನ್ನೊಬ್ಬ ಬಳಕೆದಾರ ಬರೆದಿದ್ದಾರೆ.
#ServiceDog, #receives, #diploma, #collegegraduation,