ಲಾಸ್ ಏಂಜಲೀಸ್,ಜೂನ್.18- ಅಮೆರಿದ ಇತಿಹಾಸದಲ್ಲೇ ಅತಿ ದೊಡ್ಡದೆನ್ನಲಾದ ದರೋಡೆ ಪ್ರಕರಣದಲ್ಲಿ ಲಾಸ್ ಏಂಜಲೀಸ್‌ನ ಉತ್ತರ ಭಾಗದ ಹೆದ್ದಾರಿ ಯಲ್ಲಿ ಶಸ್ತ್ರಸಜ್ಜಿತ ಭದ್ರತೆಯಲ್ಲಿದ್ದ ಟ್ರಕ್ ವಶಕ್ಕೆ ಪಡೆದು ಅದಲ್ಲಿದ್ದ ಸುಮಾರು 100 ಮಿಲಿಯನ್ ಡಾಲರ್ ಮೌಲ್ಯದ ವಜ್ರಗಳು, ಪಚ್ಚೆಗಳು ಮತ್ತು ಹೆಚ್ಚಿನ ಚಿನ್ನಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ಯಾಬ್ಲೊ ರೌಲ್ ಲುಗೊ ಲಾರೊಯಿಗ್ ಮತ್ತು ಜೆಸನ್ ನೆಲಾನ್ ಪ್ರೆಸಿಲ್ಲಾ ಫ್ಲೋರ್ಸ್ ಎಂಬ ಇಬ್ಬರನ್ನುಬಂಧಿಸಲಾಗಿದ್ದು ,ನಾಲ್ವರು ಪಾರಾರಿಯಾದಿದ್ದಾರೆ.ಕಳೆದ ಜುಲೈ 2022 ರಲ್ಲಿ, ಸ್ಯಾನ್ ಫ್ರಾನ್ಸಿಸ್ಕೋ ಬಳಿ ನಡೆದ ಅಂತರರಾಷ್ಟ್ರೀಯ ಆಭರಣ ಪ್ರದರ್ಶನದಿಂದ 73 ಚೀಲಗಳ ಆಭರಣಗಳೊಂದಿಗೆ ಹೊರಟಿದ್ದ ಟ್ರಕ್ ಅನ್ನು ದರೋಡೆ ಮಾಡಲಾಗಿತ್ತು.
ಇದರ ಬಗ್ಗೆ ತನಿಖೆ ನಡೆಸಿದ್ದ ಪೊಲೀಸರು ಗುಪ್ತಚರ ಮಾಹಿತಿ ಅನ್ವ ಲಾಸ್ ಏಂಜಲೀಸ್‌ನ ಉತ್ತರದಲ್ಲಿ ಸುಮಾರು 300 ಮೈಲಿ ದೂರ ಟ್ರಕ್ ಅನ್ನು ಹಿಂಬಾಲಿಸಿ ಚಿನ್ನ, ಮಾಣಿಕ್ಯಗಳು ಮತ್ತು ಐಷಾರಾಮಿ ಕೈಗಡಿಯಾರಗಳನ್ನು ಒಳಗೊಂಡಿದ್ದ 24 ಚೀಲಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಕೆಲವು ಶಂಕಿತರ ಮೇಲೆ ಇತರ ದರೋಡೆಗಳ ಆರೋಪ ಹೊರಿಸಲಾಗಿದೆ, ಇದರಲ್ಲಿ ಮಾರ್ಚ್ 2022 ರಲ್ಲಿ ಟ್ರಕ್‌ನಿಂದ 240,000 ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳನ್ನು ಕದ್ದೊಯ್ದ ಪ್ರಕರಣವೂ ಸೇರಿದೆ.ಕೆಲವು ಆರೋಪಿಗಳ ಪತ್ತೆಗೆ ಲುಕ್‌ಔಟ್ ನೋಟೀಸ್ ಹೊರಡಿಸಲಾಗಿದೆ.
- ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (11-07-2025)
- ಸಿದ್ದರಾಮಯ್ಯನವರೇ ಸಿಎಂ ಆಗಿ ಸಿದ್ದು ಮುಂದುವರೆಯುತ್ತಾರೆ : ಪುತ್ರ ಯತೀಂದ್ರ
- ಪಾಲಿಕೆಗಳ ನೌಕರರ ಕಷ್ಟಗಳನ್ನೂ ಕೇಳಿಸಿಕೊಳ್ಳಿ : ರಾಜ್ಯ ಸರ್ಕಾರಕ್ಕೆ HDK ಆಗ್ರಹ
- ಬೆಂಗಳೂರಿನ ಬೀದಿ ನಾಯಿಗಳಿಗೆ ನಿತ್ಯ ಬಾಡೂಟದ ಭಾಗ್ಯ
- ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಮೊಬೈಲ್ ಕಳವು ಮಾಡುತ್ತಿದ್ದ ಚೋರನ ಬಂಧನ