ಜರ್ಮನಿಯಲ್ಲಿ ಗುಂಡಿನ ದಾಳಿ, 10 ಮಂದಿ ಬಲಿ

Social Share

ಹ್ಯಾಂಬರ್ಗ,ಮಾ.10- ಜರ್ಮನಿಯ ಹ್ಯಾಂಬರ್ಗ್‍ನ ಜೆಹೋವಾಹ್ಸ್ ವಿಟ್ನೆಸ್ ಸೆಂಟರ್‍ನಲ್ಲಿ ನುಗ್ಗಿದ ಬಂದೂಕುಧಾರಿಯೊಬ್ಬ ನಡೆಸಿದ ಭೀಕರ ಗುಂಡಿನ ದಾಳಿಯಲ್ಲಿ 10 ಜನರು ಬಲಿಯಾಗಿದ್ದಾರೆ.

ಇನ್ನು ಹಲವರು ಗಾಯಗೊಂಡಿದ್ದು ಕೆಲವರ ಸ್ಥಿತಿ ಚಿಂತಾಜನಕವಾಗಿದೆ.ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಜರ್ಮನ್ ಪೊಲೀಸರು ದಾಳಿಕೋರನ್ನು ಸದೆಬಡಿದಿದ್ದಾರೆ. ಉತ್ತರದ ಗ್ರಾಸ್ ಬಾರ್‍ಸ್ಟೆಲ್ ಜಿಲ್ಲೆಯಪ್ರಮಖ ನಗರ ಜೆಹೋವಾಹ್ಸ್ ನಲ್ಲಿ ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಯುತ್ತಿದ್ದಾಗ ಗುಂಡಿನ ಸದ್ದು ಕೇಳಿದೆ,ತರ್ತು ಕರೆಗಳು ಪೊಲೀಸರಿಗೆ ಬಂದಿದ್ದು ಎಚ್ಚರಿಕೆಯ ಸೈರನ್ ಮೊಳಗಿದ್ದು ಜನರು ತಮ್ಮ ಮನೆಗಳಿಂದ ಹೊರಗೆ ಬರದಂತೆಮನವಿ ಮಾಡಲಾಯಿತು.

BIG NEWS : ಕರ್ನಾಟಕ, ಹರಿಯಾಣದಲ್ಲಿ H3N2ಗೆ ಇಬ್ಬರು ಬಲಿ

ಕೆಲವೇ ಕ್ಷಣದಲ್ಲಿ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಹಾಗು ಭಧ್ರತಾ ಸಿಬ್ಬಂ ಕಟ್ಟಡ ಸುತ್ತುವರೆದು ಕಾರ್ಯಾಚರನೆ ಕೈಗೊಂಡರು ಎಂದು ಅಕಾರಿಗಳು ತಿಳಿಸಿದ್ದಾರೆ. ಈ ಕೃತ್ಯದ ಹಿಂದಿನ ಉದ್ದೇಶ ಏನು ಎಂಬುದು ಸದ್ಯಕ್ಕೆ ಮಾಹಿತಿ ಇಲ್ಲ ಎಂದಿರುವ ಪೊಲೀಸರು, ಈ ಬಗ್ಗೆ ಊಹಾಪೋಹಗಳನ್ನು ಹರಡಬೇಡಿ ಎಂದು ಮನವಿ ಮಾಡಿದ್ದಾರೆ.

ರುದ್ರಪ್ರಯಾಗ, ತೆಹ್ರಿಗಳಲ್ಲಿ ಹೆಚ್ಚು ಭೂ ಕುಸಿತ ಸಂಭವಿಸಲಿವೆಯಂತೆ

ಹ್ಯಾಂಬರ್ಗ್‍ನಲ್ಲಿ 3,800 ಜನರು ವಾಸಿಸುತ್ತಿದ್ದು ಜೆಹೋವಾಹ್ಸ ವಿಟ್ನೆಸೆಸ್ ಎನ್ನುವುದು 19ನೇ ಶತಮಾನದ ಅಂತ್ಯದಲ್ಲಿ ಆರಂಭವಾದ ಅಮೆರಿಕನ್ ಕ್ರೈಸ್ತ ಚಳವಳಿಯಾಗಿದೆ. ಇಲ್ಲಿ ಅಹಿಂಸೆಯನ್ನು ಉಪದೇಶಿಸುತ್ತದೆ ಮತ್ತು ಮನೆಯಿಂದ ಮನೆಗೆ ಧರ್ಮ ಪ್ರಚಾರ ನಡೆಸುತ್ತದೆ ಎಂದು ವರದಿಯಾಗಿದೆ.

Several, Dead, Shooting, Jehovah, Germany,

Articles You Might Like

Share This Article