ಸ್ಯಾಂಟ್ರೋ ರವಿ ಬಂಧನಕ್ಕೆ ತೀವ್ರಗೊಂಡ ಶೋಧ

Social Share

ಮೈಸೂರು, ಜ. 7- ಅತ್ಯಾಚಾರ ಪ್ರಕರಣ ದಾಖಲಾಗಿ 5 ದಿನ ಕಳೆದರೂ ಸ್ಯಾಂಟ್ರೋ ರವಿಯ ಸುಳಿವು ಪೊಲೀಸರಿಗೆ ಸಿಕ್ಕಿಲ್ಲ. ಸ್ಯಾಂಟ್ರೋ ರವಿ ಪತ್ತೆಗೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಮುತ್ತುರಾಜ್ ನೇತೃತ್ವದಲ್ಲಿ ಎರಡು ವಿಶೇಷ ತಂಡ ರಚನೆ ಮಾಡಿ ಪೊಲೀಸರು ಶೋಧಕಾರ್ಯ ಮುಂದುವರಿಸಿದ್ದಾರೆ.

ಒಂದೊಂದು ಬಾರಿ ಒಂದೊಂದು ಕಡೆ ಲೋಕೆಷನ್ ಪತ್ತೆ ಆಗಿದೆ. ಮೈಸೂರು, ರಾಮನಗರ, ಬೆಂಗಳೂರು, ಬೆಂಗಳೂರು ಹೊರವಲಯದಲ್ಲಿ ಸ್ಯಾಂಟ್ರೋ ರವಿ ಲೋಕೇಷನ್ ಈ ತಂಡಕ್ಕೆ ದೊರೆತಿದೆ.

ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ಪ್ರಕರಣ ಕುರಿತು ಮೈಸೂರು ನಗರ ಪೊಲೀಸ್ ಕಮೀಷನರ್ ರಮೇಶ್ ಅವರು ಹೇಳಿಕೆ ನೀಡಿ, ಸ್ಯಾಂಟ್ರೋ ರವಿ ಪ್ರಕರಣ ಸಂಬಂಧ ಈಗಾಗಲೇ ವಿಚಾರಣೆ ಆರಂಭವಾಗಿದೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತನ ಎರಡನೇ ಪತ್ನಿ ದೂರು ನೀಡಿದ್ದಾರೆ. ಅವರು ಕೇವಲ ದೂರನ್ನಷ್ಟೇ ನೀಡಿದ್ದಾರೆ. ಈ ಕಾರಣದಿಂದ ಅಗತ್ಯ ದಾಖಲೆಗಳ ಹುಡುಕಾಟದಲ್ಲಿದ್ದೇವೆ ಎಂದು ತಿಳಿಸಿದ್ದಾರೆ.

ವಿಷಾಹಾರ ಸೇವನೆ : ಕೇರಳದ ಯುವತಿ ಮಂಗಳೂರಿನಲ್ಲಿ ನಿಧನ

ಆತನ ವಿರುದ್ಧ ದೂರು ದಾಖಲಾಗಿರುವ ಕಾರಣ ಶೀಘ್ರವಾಗಿ ಆತನನ್ನು ಬಂಧಿಸಲಾಗುವುದು. ಕಾನೂನಿನ ಅಡಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದವರು ತಿಳಿಸಿದ್ದಾರೆ. ಆತ ಬೇರೆ – ಬೇರೆಯವರ ಜೊತೆ ಇರುವ ಫೋಟೋಗಳನ್ನ ನೋಡಿದ್ದೇವೆ. ಸಾಮಾಜಿಕ ಜಾಲತಾಣದಲ್ಲಿಯೂ ಆತ ಏನೆಲ್ಲಾ ಮಾಡುತ್ತಿದ್ದ ಎಂಬ ಮಾಹಿತಿ ಸಿಕ್ಕಿದೆ. ಶೀಘ್ರದಲ್ಲೇ ಆತನ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದೆಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ವರ್ಗಾವಣೆ ವಿಚಾರದಲ್ಲಿ ರವಿ ಹೆಸರು:
ವರ್ಗಾವಣೆ ವಿಚಾರದಲ್ಲಿ ಡಿವೈಎಸ್‍ಪಿ ಜೊತೆಗಿನ ಮಾತುಕತೆಯ ಆಡಿಯೋ ವೈರಲ್ ಆದ ನಂತರ ಸ್ಯಾಂಟ್ರೊ ರವಿ ಹೆಸರು ಕೇಳಿ ಬಂದಿತು. ತದ ನಂತರ ಹಲವು ಪ್ರಭಾವಿ ರಾಜಕಾರಣಿಗಳ ಜೊತೆ ತೆಗೆಸಿಕೊಂಡಿರುವ ಫೋಟೋಗಳು ಹಾಗೂ ಚಾಟಿಂಗ್ ನಡೆಸಿರುವುದು ಬಹಿರಂಗವಾಗಿತ್ತು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಆರಗ ಜ್ಞಾನೇಂದ್ರ, ಎಸ್.ಟಿ. ಸೋಮಶೇಖರ್, ಸುಧಾಕರ್ ಮಾತ್ರವಲ್ಲದೇ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳೊಂದಿಗೂ ವಾಟ್ಸಾಪ್ ಚಾಟ್ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಜಾರ್ಖಾಂಡ್‍ನಲ್ಲಿ ಮತ್ತೆ ಬುಗಿಲೇದ್ದ ಪರಸ್ನಾಥ್ ಬೆಟ್ಟದ ವಿವಾದ

ಈ ವಿಷಯವನ್ನೇ ಅಸ್ತ್ರವನ್ನಾಗಿಸಿಕೊಂಡಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮುಖಂಡರು ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿದ್ದಾರೆ.

ಈ ನಡುವೆ ತಮಗೆ ಸ್ಯಾಂಟ್ರೋ ರವಿ ಯಾರೆಂಬುದೇ ಗೊತ್ತಿಲ್ಲ ಎಂದು ಸಿಎಂ ಸೇರಿದಂತೆ ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ. ಆತ ಸಿಕ್ಕಿದ ನಂತರವೇ ಎಲ್ಲವೂ ಗೊತ್ತಾಗಲಿದೆ.

Sexual, assault case, Santro Ravi,

Articles You Might Like

Share This Article