ನವದೆಹಲಿ,ಜ.18- ವಿಶ್ವದ ಎಂಟು ಶ್ರೀಮಂತ ನಟರ ಪೈಕಿ ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ಅವರು ನಾಲ್ಕನೆ ಸ್ಥಾನ ಪಡೆದುಕೊಂಡಿದ್ದಾರೆ. ಖಾನ್ ಅವರ ನಿವ್ವಳ ಮೌಲ್ಯ 770 ಮಿಲಿಯನ್ ಡಾಲರ್ ಆಗಿದ್ದು ಅವರು ವಿಶ್ವದ ನಾಲ್ಕನೆ ಸಿರಿವಂತ ನಟರಾಗಿ ಗುರುತಿಸಿಕೊಂಡಿದ್ದಾರೆ ಎಂಬುದು ವಲ್ರ್ಡ್ ಆಫ್ ಸ್ಟಾಟಿಸ್ಟಿಕ್ ವರದಿಯಲ್ಲಿ ಬಹಿರಂಗಗೊಂಡಿದೆ.
ಹಾಲಿವುಡ್ ಸ್ಟಾರ್ ಟಾಮ್ ಕ್ರೂಸ್ ಅವರಿಗಿಂತ ಹೆಚ್ಚು ಶ್ರೀಮಂತ ನಟ ಶಾರೂಖ್ ಖಾನ್ ಎಂಬುದು ಇಲ್ಲಿ ಉಲ್ಲೇಖಾರ್ಹವಾಗಿದೆ.
ಜಮ್ಮುವಿನಲ್ಲಿ ಶಂಕಿತ ಉಗ್ರರ ಎನ್ಕೌಂಟರ್ ಪ್ರಕರಣ : ನ್ಯಾಯಾಂಗ ತನಿಖೆಗೆ ಆದೇಶ
ನಾನು ದೆಹಲಿಯಿಂದ ಮುಂಬೈಗೆ ಬಂದವನು ದೆಹಲಿಯಲ್ಲಿ ಬಂಗಲೆಯಲ್ಲಿ ವಾಸಿಸುವುದು ಮಾಮೂಲು ಆದರೆ, ಮುಂಬೈನಲ್ಲಿ ಆಪಾರ್ಟ್ಮೆಂಟ್ನಲ್ಲಿ ವಾಸಿಸುವ ಪರಿಕಲ್ಪನೆ ಇದೆ. ನಾನು ಇಲ್ಲಿಗೆ ಬಂದಾಗ ಗೌರಿಖಾನ್ ಅವರೊಂದಿಗೆ ಸಣ್ಣ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದೆ ನಂತರ ನಾನು ದೆಹಲಿ ಮಾದರಿ ಬಂಗಲೆಯಂತಿದ್ದ ಮನ್ನತ್ ನಿವಾಸವನ್ನು ಖರೀದಿಸಿದ್ದೇ ಎಂದು ನೆನಪಿಸಿಕೊಂಡಿದ್ದ ಶಾರುಖ್ ಇಂದು ವಿಶ್ವದ ನಾಲ್ಕನೆ ಶ್ರೀಮಂತ ನಟರಾಗಿ ಗುರುತಿಸಿಕೊಂಡಿದ್ದಾರೆ.
ವೈರಲ್ ಆಯ್ತು ಬಿಜೆಪಿ ಮುಖಂಡನ ಪುತ್ರನ ರೌಡಿಸಂ ವಿಡಿಯೋ
ನಾನು ಖರೀದಿಸಿದ ಅತ್ಯಂತ ದುಬಾರಿ ವಸ್ತು ಎಂದರೆ ನನ್ನ ಮನೆ ಮನ್ನತ್ ಅಲ್ಲಿ ನಾನು ಪ್ರತಿವರ್ಷ ನನ್ನ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತೇನೆ ಆಭಿಮಾನಿಗಳೊಂದಿಗೆ ಸಂಭ್ರಮಾಚರಣೆ ಮಾಡುವುದು ಅದೇ ಮನೆಯಲ್ಲೇ ಎಂದು ಅವರು ಸ್ಮರಿಸಿಕೊಂಡಿದ್ದಾರೆ.
Shah Rukh Khan, world, richest, actors,