ಕರೋನಾ ಕಾಲದಲ್ಲಿ ಪರೋಲ್ ಮೇಲೆ ಬಿಡುಗಡೆಯಾಗಿದ್ದ 16 ಕೈದಿಗಳು ನಾಪತ್ತೆ..!

Social Share

ಶಹಜಹಾನ್‍ಪುರ, ಜು.12- ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಪೆರೋಲ್‍ನಲ್ಲಿ ಹೊರಗಿದ್ದ 16 ಶಹಜಹಾನ್‍ಪುರ ಜಿಲ್ಲಾ ಜೈಲು ಕೈದಿಗಳು ಗಡುವು ಮುಗಿದ ನಂತರವೂ ಹಿಂತಿರುಗಲಿಲ್ಲ ಎಂದು ಜೈಲು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2021 ರಲ್ಲಿ ಕೋವಿಡ್-19 ಸೋಂಕು ವೇಗವಾಗಿ ಹರಡುತ್ತಿರುವಾಗ, ಸಣ್ಣ ಅಪರಾಧಗಳಿಗಾಗಿ ಜೈಲಿನಲ್ಲಿರುವ ಅಪರಾಗಳು ಮತ್ತು ಹಿರಿಯ ಕೈದಿಗಳನ್ನು ಜೈಲುಗಳ ದಟ್ಟಣೆಯನ್ನು ಕಡಿಮೆ ಮಾಡಲು ಉನ್ನತ ಮಟ್ಟದ ಸಮಿತಿಯ ನಿರ್ದೇಶನದ ಮೇರೆಗೆ ಪೆರೋಲ್‍ನಲ್ಲಿ ಬಿಡುಗಡೆ ಮಾಡಲಾಯಿತು ಎಂದು ಜೈಲು ಅೀಧಿಕ್ಷಕ ಮಿಜಾಜಿ ಲಾಲ್ ತಿಳಿಸಿದ್ದಾರೆ.

ಒಟ್ಟು 39 ಕೈದಿಗಳನ್ನು ಬಿಡುಗಡೆ ಮಾಡಲಾಗಿತ್ತು, ಈ ವರ್ಷದ ಮೇ ತಿಂಗಳ ಒಳಗೆ ಹಿಂತಿರುಗಲು ಬಿಡುಗಡೆಯಾದವರಿಗೆ ಸೂಚಿಸಲಾಗಿದೆ. ಈ ಪೈಕಿ 23 ಮಂದಿ ಹಿಂತಿರುಗಿದ್ದಾರೆ. 16 ಕೈದಿಗಳು ನಾಪತ್ತೆಯಾಗಿದ್ದಾರೆ. ಅವರ ಕುಟುಂಬ ಸದಸ್ಯರನ್ನು ಸಂಪರ್ಕಿಸಲಾಗಿದೆ. ಅವರು ಇನ್ನೂ ಹಿಂತಿರುಗದಿದ್ದರೆ, ಬಂಧಿಸಲು ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ.

ಬಂಧಿಖಾನೆ ಇಲಾಖೆ ಈಗಾಗಲೇ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದಿದೆ ಎಂದು ತಿಳಿಸಿದ್ದಾರೆ. ಈ ಕೈದಿಗಳಲ್ಲಿ ಐದು ವರ್ಷದಿಂದ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಹಲವರಿದ್ದಾರೆ ಎನ್ನಲಾಗಿದೆ.

Articles You Might Like

Share This Article