ತಿರಂಗಗಾಗಿ ಬಡವರಿಂದ ಹಣ ವಸೂಲಿ : ವರುಣ್ ಗಾಂಧಿ ಆಕ್ಷೇಪ

Social Share

ನವದೆಹಲಿ, ಆ.10- ನ್ಯಾಯಬೆಲೆ ಅಂಗಡಿಯಲ್ಲಿ ಬಲವಂತವಾಗಿ ತ್ರಿವರ್ಣ ಧ್ವಜ ಹಾರಾಟ ಮಾಡುತ್ತಿರುವುದು, ಅದಕ್ಕಾಗಿ ಬಡ ಜನರಿಂದ ಹಣ ವಸೂಲಿ ಮಾಡುವುದು ನಾಚಿಕೆಗೇಡು ಎಂದು ಬಿಜೆಪಿಯ ಸಂಸದ ವರುಣ್ಗಾಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನ್ಯಾಯಬೆಲೆ ಅಂಗಡಿ ಮುಂದೆ ಬಡವರ ಅಸಹಾಯಕ ಹೇಳಿಕೆಗಳ ಮಾಧ್ಯಮ ವರದಿಯನ್ನು ಟ್ವೀಟರ್ನಲ್ಲಿ ಪೊೀಸ್ಟ್ ಮಾಡಿರುವ ಅವರು, 75ನೇ ವರ್ಷದ ಸ್ವಾತಂತ್ರ್ಯೋತ್ಸವ ಬಡವರಿಗೆ ಹೊರೆಯಾಗುತ್ತಿರುವುದು ದುರಾದೃಷ್ಟ ಎಂದಿದ್ದಾರೆ.

ನ್ಯಾಯಬೆಲೆ ಅಂಗಡಿಯಲ್ಲಿ 20ರೂ.ಗೆ ರಾಷ್ಟ್ರಧ್ವಜವನ್ನು ಮಾರಾಟ ಮಾಡಲಾಗುತ್ತಿದೆ.ಧ್ವಜ ಖರೀದಿ ಮಾಡದೇ ಇರುವವರಿಗೆ ಪಡಿತರ ನೀಡುವುದಿಲ್ಲ ಎಂದು ಅಂಗಡಿಯವನು ಹೇಳಿಕೆ ನೀಡಿದ್ದಾನೆ.

ಆಹಾರ ಇಲಾಖೆಯ ಇನ್ಸ್ಪೆಕ್ಟರ್ ಅವರು ನೀಡಿರುವ ಸೂಚನೆ ಪ್ರಕಾರ ಪಡಿತರ ಬೇಕಾದರೆ ಧ್ವಜ ಖರೀದಿಸಲೇ ಬೇಕು ಎಂದಿದ್ದಾನೆ. ಆದರೆ, ನಮಗೆ ಕಷ್ಟ ಕಲಾದಲ್ಲಿ ಆಹಾರ ಖರೀದಿಸಲೇ ಹಣವಿಲ್ಲ. ಇನ್ನು ಧ್ವಜಕ್ಕೆ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವುದು ದುಬಾರಿಯಾಗಿದೆ ಎಂದು ಕೂಲಿಕಾರ್ಮಿಕರು ಹೇಳಿಕೆ ನೀಡಿದ್ದಾರೆ.

ಇದನ್ನು ಪೊೀಸ್ಟ್ ಮಾಡಿರುವ ವರುಣ್ಗಾಂ ತಿರಂಗಗಾಗಿ ಹಣ ವಸೂಲಿ ಮಾಡುವುದು ನಾಚಿಕೆಗೇಡು. ಜೀವನ ನಿರ್ವಹಣೆ ಮಾಡಲು ಸಮಸ್ಯೆ ಎದುರಿಸುತ್ತಿರುವ ಬಡವರ ಬಳಿ ಆಹಾರ ಖರೀದಿಸಲೇ ಹಣವಿಲ್ಲ. ಅವರ ಬಳಿ 20 ರೂ. ಹೆಚ್ಚುವರಿ ಬಲವಂತದ ವಸೂಲಿ ಸರಿಯಲ್ಲ ಎಂದಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಆ.13ರಿಂದ 15ರ ನಡುವೆ ಪ್ರತಿಯೊಂದು ಮನೆಯ ಮೇಲೆ ರಾಷ್ಟ್ರಧ್ವಜ ಹಾರಿಸಬೇಕು ಎಂದು ಮನವಿ ಮಾಡಿದ್ದಾರೆ. ಹರ್ ಘರ್ ತಿರಂಗಾ ಅಭಿಯಾನಕ್ಕಾಗಿ ಧ್ವಜಗಳನ್ನು ಮಾರಾಟ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಕಾರ್ಯಕ್ರಮವನ್ನು ಅದೇ ಪಕ್ಷದ ಸಂಸದರು ಟೀಕಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

Articles You Might Like

Share This Article