ಚೀನಾದಲ್ಲಿ ಮತ್ತೆ ಅಬ್ಬರಿಸುತ್ತಿದೆ ಕೊರೊನಾ..!

ಬೀಜಿಂಗ್, ಏ.19- ಚೀನಾದ ಆರ್ಥಿಕ ಕೇಂದ್ರ ಶಾಂಘೈನಲ್ಲಿ ಕೋವಿಡ್-19 ಸೋಂಕಿನ ಪ್ರಕರಣಗಳು ಏಕಾಏಕಿ ಹೆಚ್ಚುತ್ತಿರುವ ನಡುವೆ, ಏಳು ಸಾವಿನ ಪ್ರಕರಣಗಳು ವರದಿಯಾಗಿವೆ. ಚೀನಾದಲ್ಲಿ ದೈನಂದಿನ ಸೋಂಕು 21,400ರಷ್ಟಾಗಿದ್ದು, ಅವುಗಳಲ್ಲಿ ಬಹುತೇಕ ಶಾಂಘೈ ನಗರದಿಂದಲೇ ವರದಿಯಾಗಿವೆ. ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 4,648 ಕ್ಕೇರಿಕೆಯಾಗಿದೆ. ಸೋಮವಾರ ಶಾಂಘೈನಲ್ಲಿ ಏಳು ಹೊಸ ಸಾವುಗಳು ಸಂಭವಿಸಿವೆ.

ಮಂಗಳವಾರ ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ ಓಮಿಕ್ರಾನ್ ರೂಪಾಂತರ ಉಲ್ಬಣ ಅಡೆತಡೆಯಿಲ್ಲದೆ ಮುಂದುವರೆಯುತ್ತಿದೆ. ಶಾಂಘೈ ಹೊರತುಪಡಿಸಿ, ಇತರ 18 ಪ್ರಾಂತೀಯ ಭಾಗದಲ್ಲಿ ಸೋಂಕು ಹೆಚ್ಚುತ್ತಿದೆ. ಚೀನಾದಲ್ಲಿ ಪ್ರಸ್ತುತ 30,384 ಸಕ್ರಿಯ ಪ್ರಕರಣಗಳಿವೆ. ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಠಿಣ ನಿಯಮಗಳನ್ನು ಸಡಿಲಗೊಳಿಸಲು ಕಮ್ಯೂನಿಸ್ಟ್ ಆಡಳಿತ ನಿರಾಕರಿಸಿದೆ.

ಐದು ವರ್ಷಗಳಿಗೊಮ್ಮೆ ನಡೆಯುವ ಸಮಾವೇಶ ಈ ವರ್ಷದ ಕೊನೆಯಲ್ಲಿ ನಡೆಯಲಿದ್ದು, 68 ವರ್ಷದ ಕ್ಸಿ ಮಿಲಿಟರಿ ಮತ್ತು ಪಕ್ಷದ ಮುಖ್ಯಸ್ಥರಾಗಿ ಮೂರನೇ ಐದು ವರ್ಷಗಳ ಅಧಿಕಾರಾವಧಿಗೆ ಅನುಮೋದನೆಯನ್ನು ಪಡೆಯುವ ನಿರೀಕ್ಷೆಯಿದೆ. ಹಿಂದಿನ ಎಲ್ಲರೂ ಎರಡು ಅವಧಿಗೆ ನಿವೃತ್ತರಾಗಿದ್ದಾರೆ. ಕ್ಸಿ 3 ನೆ ಅವಧಿಗೆ ಮುಂದುವರೆಯಲು ಬಯಸಿದ್ದಾರೆ. ಪಕ್ಷದ ಸಂಸ್ಥಾಪಕ ಮಾವೋ ಝೆಡಾಂಗ್‍ರ ಹೆಸರಿನ ಬಿರುದನ್ನು ಪಡೆದಿರುವ ಕ್ಸಿ ಜೀವನದುದ್ದಕ್ಕೂ ಅಧಿಕಾರವನ್ನು ಮುಂದುವರೆಸುವ ನಿರೀಕ್ಷೆಯಿದೆ.

ಹೆಚ್ಚು ಟೀಕೆಗೊಳಗಾದ ಶೂನ್ಯ ಕೋವಿಡ್ ನೀತಿಯನ್ನು ಮುಂದುವರಿಸುವುದಾಗಿ ಪ್ರತಿ ಜ್ಞಾ ಮಾಡಿದ್ದಾರೆ. ದೇಶದ ಜನ ಕ್ರಿಯಾತ್ಮಕ ಶೂನ್ಯ ನೀತಿಗೆ ಅಂಟಿಕೊಳ್ಳುವಂತೆ ಮತ್ತು ಸಹಬಾಳ್ವೆಯ ತಪ್ಪು ಆಲೋಚನೆಗಳ ವಿರುದ್ಧ ಸ್ಪಷ್ಟವಾದ ನಿಲುವನ್ನು ತೆಗೆದುಕೊಳ್ಳುವಂತೆ ದೇಶದ ಜನರನ್ನು ಅವರು ಒತ್ತಾಯಿಸಿದ್ದಾರೆ.