ಶಂಕರ ಬಿದರಿ ಅವರ ಇ-ಮೇಲ್ಹ್ಯಾಕ್ ಮಾಡಿದ್ದ ಮೂವರ ಸೆರೆ
ಬೆಂಗಳೂರು, ಮಾ.10- ನಿವೃತ್ತ ಪೆಪೊಲೀಸ್ ಮಹಾನಿರ್ದೇಶಕರ ಇ-ಮೇಲ್ ಖಾತೆಯನ್ನು ಹ್ಯಾಕ್ ಮಾಡಿ ಹಣ ಕಳುಹಿಸುವಂತೆ ಸ್ನೇಹಿತರಿಗೆ ಸಂದೇಶ ಕಳುಹಿಸಿ ಹಣ ಪಡೆದು ವಂಚಿಸಿದ್ದ ನಾಗಾಲ್ಯಾಂಡ್ ಮೂಲದ ಮೂವರನ್ನು ಸಿಇಎನ್ ಠಾಣೆ ಪೊಲೀಸರು ಬಂಸಿದ್ದಾರೆ. ಥಿಯಾ (31), ಸೆರೋಪಾ (27) ಮತ್ತು ಇಸ್ಪರ್ ಕೊನ್ಸಾಕ್ (28) ಬಂತರು.
ಆರೋಪಿಗಳಿಂದ 4 ಮೊಬೈಲ್, ವಿವಿಧ ಹೆಸರಿನ 13 ಪ್ಯಾನ್ಕಾರ್ಡ್, 6 ಆಧಾರ್ ಕಾರ್ಡ್, 2 ಎಟಿಎಂ ಕಾರ್ಡ್ ಹಾಗೂ ಸಂಬಂಸಿದ ಸುಮಾರು 20ಕ್ಕೂ ಹೆಚ್ಚು ವಿವಿಧ ಬ್ಯಾಂಕ್ಗಳ ಖಾತೆಗಳಲ್ಲಿನ ಸುಮಾರು 2 ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದಾರೆ.
ನಿವೃತ್ತ ಪೊಲೀಸ್ ನಿರ್ದೇಶಕ ಶಂಕರ ಬಿದರಿ ಅವರ ಇ-ಮೇಲ್ ಖಾತೆಯನ್ನು ಆರೋಪಿಗಳು ಹ್ಯಾಕ್ ಮಾಡಿ ಸ್ನೇಹಿತರಿಗೆ ಹಣ ಕಳುಹಿಸುವಂತೆ ಸಂದೇಶ ಕಳುಹಿಸಿದ್ದರು. ಈ ಸಂದೇಶ ನೋಡಿದ ಸ್ನೇಹಿತರೊಬ್ಬರು ಶಂಕರ ಬಿದರಿ ಅವರೇ ಕಳುಹಿಸಿರಬಹುದೆಂದು 25 ಸಾವಿರ ಹಣ ಹಾಕಿದ್ದರು.
ತದನಂತರದಲ್ಲಿ ವಂಚನೆ ಆಗಿರುವುದು ತಿಳಿದು ಸಿಇಎನ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಹಣ ವರ್ಗಾವಣೆಗೊಂಡಿರುವ ಬ್ಯಾಂಕ್ ಖಾತೆದಾರರನ್ನು ಪತ್ತೆಮಾಡಲು ತನಿಖೆ ನಡೆಸುತ್ತಿದ್ದಾಗ ಪದೇ ಪದೇ ಮನೆ ಖಾಲಿ ಮಾಡುತ್ತಿದ್ದುದು ಕಂಡುಬಂದಿದೆ.
ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಥಿಯಾ ಮತ್ತು ಸೆರೋಪಾ ಎಂಬುವವರನ್ನು ಬಂಸಿ ತೀವ್ರ ವಿಚಾರಣೆಗೊಳಪಡಿಸಿದಾಗ ನೀಡಿದ ಹೇಳಿಕೆ ಮೇರೆಗೆ ಹೊರಮಾವಿನಲ್ಲಿ ವಾಸವಾಗಿದ್ದ ಇಸ್ಪರ್ ಕೊನ್ಸಾಕ್ ಎಂಬಾಕೆಯನ್ನು ಬಂಸುವಲ್ಲಿ ಯಶಸ್ವಿಯಾಗಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ನಾಗಾಲ್ಯಾಂಡ್ನಿಂದ ಈ ಮೂವರು ಬೆಂಗಳೂರಿಗೆ ಬಂದು ಬ್ಯೂಟಿ ಪಾರ್ಲರ್ಗಳಲ್ಲಿ ಮತ್ತು ಸೇಲ್ಸ್ಗರ್ಲ್ ಕೆಲಸ ಮಾಡಿಕೊಂಡಿದ್ದರು. ಆರೋಪಿತೆ ಕೊನ್ಯಾಕ್ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ಮುಖಾಂತರ ಜೇಮ್ಸ್ ಮತ್ತು ಪೀಟರ್ ಎಂಬುವವರೊಂದಿಗೆ ಸಂಪರ್ಕ ಬೆಳೆಸಿಕೊಂಡಿದ್ದಳು.
ಸಾರ್ವಜನಿಕರ ಹಣವನ್ನು ಆನ್ಲೈನ್ ಮುಖಾಂತರ ವಂಚಿಸುವ ಉದ್ದೇಶದಿಂದ ಜೇಮ್ಸ್ ಮತ್ತು ಪೀಟರ್ರೊಂದಿಗೆ ಶಾಮೀಲಾಗಿ ಸಾರ್ವಜನಿಕರಿಗೆ ವಂಚಿಸಿದ ಹಣವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಿಕೊಳ್ಳಲು ಸಂಚು ರೂಪಿಸುತ್ತಾಳೆ.
ಅದರಂತೆ ನಾಗಾಲ್ಯಾಂಡ್ ಮೂಲದ ನಿರುದ್ಯೋಗಿ ಯುವಕರನ್ನು ಸಂಪರ್ಕಿಸಿ ಹಣದ ಆಮಿಷವೊಡ್ಡಿ ಅವರನ್ನು ಸಹ ಶಾಮೀಲು ಮಾಡಿಕೊಂಡು ಅವರ ಆಧಾರ್ ಕಾರ್ಡ್, ಬಾಡಿಗೆ ಕರಾರು ಪತ್ರ, ಪ್ಯಾನ್ಕಾರ್ಡ್ಗಳನ್ನು ಮೂಲವಾಗಿಟ್ಟುಕೊಂಡು ನವೆಂಬರ್ನಿಂದ ಇದುವರೆಗೂ ಸುಮಾರು 60ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ತೆರೆದಿರುವುದು ವಿಚಾರಣೆಯಿಂದ ಗೊತ್ತಾಗಿದೆ.
ಎಟಿಎಂ ಕಾರ್ಡ್ ಮತ್ತು ಪಾಸ್ಬುಕ್ಗಳನ್ನು ಸೈಬರ್ ಅಪರಾಧ ಜಾಲದ ಪ್ರಮುಖ ಆರೋಪಿಗಳಿಗೆ ನೀಡುತ್ತಿದ್ದುದು ವಿಚಾರಣೆ ವೇಳೆ ತಿಳಿದುಬಂದಿದೆ. ಪ್ರಮುಖ ಆರೋಪಿಗಳಾದ ಜೇಮ್ಸ್ ಮತ್ತು ಪೀಟರ್ ತಲೆಮರೆಸಿಕೊಂಡಿದ್ದು, ಶೋಧಕಾರ್ಯ ಮುಂದುವರಿದಿದೆ.
ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀನಾಥ್ ಮಹದೇವ ಜೋಷಿ ಮಾರ್ಗದರ್ಶನದಲ್ಲಿ ಸಿಇಎನ್ ಠಾಣೆ ಇನ್ಸ್ಪೆಕ್ಟರ್ ಎಲ್.ವೈ.ರಾಜೇಶ್, ಮಹಿಳಾ ಪಿಎಸ್ಐ ಲಕ್ಷ್ಮಿ ಮಂಡಿಗೇರಿ, ಎಎಸ್ಐ ಶ್ರೀನಿವಾಸ್ಬಾಬು ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಸುವಲ್ಲಿ ಯಶಸ್ವಿಯಾಗಿದ್ದಾರೆ.