ನಾಳೆ ಶಾಂತವೇರಿ ಸಮಾಜವಾದದ ಸಹ್ಯಾದ್ರಿ ಕೃತಿ ಲೋಕಾರ್ಪಣೆ

Social Share

ಬೆಂಗಳೂರು, ಫೆ.8- ಕಿಗ್ಗ ರಾಜಶೇಖರ್ ಎಸ್.ಜಿ. ಸಂಪಾದಿಸಿರುವ ಶತಮಾನದ ಶಾಂತವೇರಿ ಸಮಾಜವಾದದ ಸಹ್ಯಾದ್ರಿ ಎಂಬ ಕೃತಿ ನಾಳೆ ಬಾಪೂಜಿ ಸಭಾಂಗಣದ ಗಾಂಧಿಭವನದಲ್ಲಿ ಲೋಕಾರ್ಪಣೆಯಾಗಲಿದೆ.

ನಾಳೆ ಸಂಜೆ 4.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಜನಪ್ರಕಾಶನ ಈ ಕೃತಿಯನ್ನು ಲೋಕಾರ್ಪಣೆ ಮಾಡಲಿದೆ.
ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾ. ಹೆಚ್.ಎನ್. ನಾಗಮೋಹನ್‍ದಾಸ್ ಅವರು ಅಧ್ಯಕ್ಷತೆ ವಹಿಸಲಿದ್ದು, ಸಾಹಿತಿ ಬಿ.ಟಿ. ಲಲಿತ ನಾಯಕ್ ಅವರು ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಬ್ರಾಹ್ಮಣ ಸಮುದಾಯಕ್ಕೆ ಬಿಜೆಪಿ ಕೊಡುಗೆ ಏನು?: ಕುಮಾರಸ್ವಾಮಿ

ಮುಖ್ಯ ಅತಿಥಿಗಳಾಗಿ ಹಿರಿಯ ಲೇಖಕ ಎಸ್.ಜಿ. ಸಿದ್ದರಾಮಯ್ಯ, ದಸಂಸ ರಾಜ್ಯ ಸಂಚಾಲಕರಾದ ಮಾವಳ್ಳಿ ಶಂಕರ್, ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕರ ಡಾ. ಸತೀಶ್ ಕುಮಾರ್ ಎಸ್. ಹೊಸಮನಿ ಪಾಲ್ಗೊಳ್ಳಲಿದ್ದಾರೆ.
ಗ್ರಾಮ ಭಾರತ ಸಾಂಸ್ಕøತಿಕ ವೇದಿಕೆ ರಾಜ್ಯ ಸಂಚಾಲಕರಾದ ಕಿಗ್ಗ ರಾಜಶೇಖರ್ ಎಸ್.ಜಿ., ರಾಮಮನೋಹರ ಶಾಂತವೇರಿ ಉಪಸ್ಥಿತರಿರುತ್ತಾರೆ.

ಜನಪ್ರಕಾಶನದ ಬಿ. ರಾಜಶೇಖರ್‍ಮೂರ್ತಿ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಲಾಗಿದೆ.

Shantaveri, Book, Release, Gandhi Bhavan, Bangalore,

Articles You Might Like

Share This Article