ಬಿಲ್ಲು-ಬಾಣದ ಚಿಹ್ನೆ ಚಿಂತೆ ಬಿಡಿ : ಉದ್ಧವ್‍ಗೆ ಪವಾರ್ ಸಲಹೆ

Social Share

ಪೂನಾ,ಫೆ.18- ಶಿವಸೇನೆ ಪಕ್ಷದ ಬಿಲ್ಲು-ಬಾಣದ ಗುರುತು ಶಿಂಧೆ ಬಣದ ಪಾಲಾಗಿರುವುದು ನಿಮ್ಮ ಮೇಲೆ ಯಾವುದೆ ದೊಡ್ಡ ಪರಿಣಾಮ ಬೀರುವುದಿಲ್ಲ ಹೀಗಾಗಿ ಹೊಸ ಚಿಹ್ನೆಯೊಂದಿಗೆ ನಿಮ್ಮ ಪಕ್ಷನ್ನು ಮುನ್ನಡೆಸಿ ಎಂದು ಎನ್‍ಸಿಪಿ ಮುಖ್ಯಸ್ಥೆ ಶರದ್ ಪವಾರ್ ಅವರು ಉದ್ಧವ್ ಠಾಕ್ರೆ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ನಿಮ್ಮ ಪಕ್ಷಕ್ಕೆ ನೀಡಿರುವ ಹೊಸ ಚಿಹ್ನೆ ಆಧಾರದ ಮೇಲೆ ರಾಜ್ಯದ ಜನತೆ ನಿಮ್ಮ ಪರ ನಿಲ್ಲಲಿದ್ದಾರೆ ಅದರ ಬಗ್ಗೆ ಚಿಂತೆ ಮಾಡಬೇಡಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ. ಅತಿ ಹೆಚ್ಚು ಸದಸ್ಯರ ಬೆಂಬಲ ಹೊಂದಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ ಶಿವಸೇನೆಯ ಬಿಲ್ಲು-ಬಾಣದ ಗುರುತು ನೀಡಲಾಗಿದೆ ಎಂದು ಚುನಾವಣಾ ಆಯೋಗ ಹೇಳುತ್ತಿದ್ದಂತೆ ಮಿತ್ರ ಪಕ್ಷದ ಮುಖಂಡ ಉದ್ಧವ್ ಠಾಕ್ರೆ ಅವರಿಗೆ ಪವಾರ್ ಸಮಾಧಾನ ಹೇಳಿದ್ದಾರೆ.

ಹಾವೇರಿ ಜಿಲ್ಲೆಯ ಸವಣೂರಿನಲ್ಲಿ ತಾಯಿ-ಮಕ್ಕಳ ಆಸ್ಪತ್ರೆ

ಚುನಾವಣಾ ಆಯೋಗ ತೀರ್ಮಾನದ ವಿರುದ್ಧ ಮಾತನಾಡುವುದರಲ್ಲಿ ಯಾವುದೆ ಆರ್ಥವಿಲ್ಲ. ಹೊಸ ಚಿಹ್ನೆಯೊಂದಿಗೆ ನಿಮ್ಮ ಪಕ್ಷವನ್ನು ಮುನ್ನಡೆಸಿ ಅದು ನಿಮ್ಮ ಪಕ್ಷದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ಎಂದು ಅವರು ಸಲಹೆ ನೀಡಿದ್ಧಾರೆ.

ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷ ಕೂಡ ಎರಡು ಎತ್ತುಗಳೊಂದಿಗೆ ನೋಗ ಹಿಡಿದು ನಿಂತಿರುವ ವ್ಯಕ್ತಿಯ ಚಿಹ್ನೆ ಇತ್ತು. ಆ ಚಿಹ್ನೆ ಹೋದ ನಂತರ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಕೈ ಚಿಹ್ನೆ ಪಡೆದು ತಮ್ಮ ಪಕ್ಷವನ್ನು ಮುನ್ನಡೆಸಿದ್ದರು ಅದೇ ರೀತಿ ನೀವು ಮುನ್ನುಗ್ಗಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಶಾಲೆ ಬಿಟ್ಟವರಿಗಾಗಿ ಬದುಕುವ ದಾರಿ ಯೋಜನೆ

ಈ ಮಧ್ಯೆ ಚುನಾವಣಾ ಆಯೋಗದ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ತೀರ್ಮಾನಿಸಿರುವ ಉದ್ಧವ್ ಠಾಕ್ರೆ ಅವರು ಇಂದು ತಮ್ಮ ಪಕ್ಷದ ಪದಾಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಲು ನಿರ್ಧರಿಸಿದ್ದಾರೆ.

Sharad Pawar, Advice, Uddhav Thackeray, Loses, Shiv Sena, Symbol,

Articles You Might Like

Share This Article