ಶಾಸಕರ ಭವನದಲ್ಲಿ ಮೊಟ್ಟೆ ನಿರ್ಬಂಧ

Social Share

ಬೆಂಗಳೂರು,ಆ.20- ಮಡಿಕೇರಿ ಪ್ರವಾಸದ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದ ಪರಿಣಾಮ ಶಾಸಕರ ಭವನಕ್ಕೆ ಮೊಟ್ಟೆ ತೆಗೆದುಕೊಂಡು ಹೋಗುವುದನ್ನು ನಿರ್ಬಂಧಿಸಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಮೊಟ್ಟೆ ತೆಗೆದುಕೊಂಡು ಶಾಸಕರ ಭವನಕ್ಕೆ ದಾಳಿ ನಡೆಸಬಹುದೆಂಬ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರಕ್ಕೆ ಬರಲಾಗಿದೆ.

ಶಾಸಕರ ಭವನದಲ್ಲಿ ಬಿಜೆಪಿಯ ಕೆ.ಜೆ.ಬೋಪಯ್ಯ ಮತ್ತು ಅಪ್ಪಚ್ಚರಂಜನ್ ಸೇರಿದಂತೆ ಕೆಲವು ಶಾಸಕರು ಇಲ್ಲಿಯೇ ವಾಸ್ತವ್ಯ ಹೂಡುತ್ತಾರೆ. ಅವರ ಮೇಲೆ ದಾಳಿ ನಡೆಯುವ ಸಾಧ್ಯತೆ ಇರುವುದರಿಂದ ಕೊಠಡಿಗಳಿಗೆ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ.

ಕಳೆದೆರಡು ದಿನಗಳಿಂದ ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ತಮ್ಮ ನಾಯಕರ ವಾಹನದ ಮೇಲೆ ಮೊಟ್ಟೆ ಎಸೆದಿದ್ದರಿಂದ ಕುಪಿತಗೊಂಡಿರುವ ಕೈ ಪಡೆ ಬಿಜೆಪಿಯವರಿಗೆ ಮೊಟ್ಟೆಗಳನ್ನು ಪಾರ್ಸಲ್ ಕಳುಹಿಸಿಕೊಡುವ ಮೂಲಕ ತಿರುಗೇಟು ನೀಡುತ್ತಿದ್ದಾರೆ.

ಯುವ ಕಾಂಗ್ರೆಸ್‍ನ ಕಾರ್ಯಕರ್ತರು ಶಾಸಕರ ಭವನಕ್ಕೆ ಮುತ್ತಿಗೆ ಹಾಕಬಹುದೆಂಬ ಹಿನ್ನೆಲೆಯಲ್ಲಿ ಕೆ.ಜೆ.ಬೋಪಯ್ಯ ಮತ್ತು ಅಪ್ಪಚ್ಚರಂಜನ್ ಭದ್ರತೆ ಹಾಗೂ ಮೊಟ್ಟೆಗೆ ನಿರ್ಬಂಧ ವಿಧಿಸಲಾಗಿದೆ.

Articles You Might Like

Share This Article