ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ರೇಸ್ ನಲ್ಲಿ ಶಶಿ ತರೂರ್..?

Social Share

ನವದೆಹಲಿ, ಆ.30- ಕಾಂಗ್ರೆಸ್‍ನಲ್ಲಿ ಹಿರಿಯ ನಾಯಕ ಗುಲಾಂನಬಿ ಆಜಾದ್ ಅವರ ನಿರ್ಗಮನದ ಬಳಿಕ ಮತ್ತೊಬ್ಬ ನಾಯಕ ಗಮನ ಸೆಳೆದಿದ್ದಾರೆ. ಆದರೆ ಆತ ಪಕ್ಷದಿಂದ ಹೊರ ಹೋಗುವ ಬಗ್ಗೆ ಚರ್ಚೆ ಹುಟ್ಟು ಹಾಕಿಲ್ಲ. ಆದರ್ಶಪ್ರಾಯವಾದ ಚುನಾವಣೆ ಮತ್ತು ಮುಂದಿನ ನಾಯಕತ್ವದ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಹಿರಿಯ ನಾಯಕರಾಗಿರುವ ಕೇರಳದ ತಿರುವನಂತಪುರಂನ ಸಂಸದ ಶಶಿತರೂರು ಮಲಯಾಳಂನ ಮಾತೃಭೂಮಿ ಪತ್ರಿಕೆಯಲ್ಲಿ ಲೇಖನ ಬರೆದಿದ್ದು, ಮುಂದಿನ ದಿನಗಳಲ್ಲಿ ನಡೆಯುವ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುವ ಮುನ್ಸೂಚನೆ ನೀಡಿದ್ದಾರೆ.

ತಮ್ಮ ಲೇಖನದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿರುವ ಅವರು, ನಾನು ಈ ಬಗ್ಗೆ ಮಾತನಾಡಲು ಬಯಸುವುದಿಲ್ಲ. ಆದರೆ ನಾನು ಬರೆದಿರುವ ಲೇಖನದಲ್ಲಿನ ಎಲ್ಲಾ ಅಂಶಗಳನ್ನು ಒಪ್ಪಿಕೊಳ್ಳುತ್ತೇನೆ ಮತ್ತು ಅದಕ್ಕೆ ಬದ್ಧವಾಗಿದ್ದೇನೆ ಎಂದಿದ್ದಾರೆ.

ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆಗಳು ಮುಂದಿನ ವಾರ ಆರಂಭವಾಗಲಿದ್ದು, ಅಕ್ಟೋಬರ್ 17ರಂದು ಮತದಾನ ನಡೆಯಲಿದೆ, ಅಕ್ಟೋಬರ್ 19ರಂದು ಮತ ಎಣಿಕೆಯಾಗಲಿದೆ. ಪ್ರಜಾಪ್ರಭುತ್ವ ಮಾರ್ಗದಲ್ಲಿ ಪಕ್ಷದ ಅಧ್ಯಕ್ಷನ ಆಯ್ಕೆಗೆ ನಿರ್ಧರಿಸಲಾಗಿದೆ.

ಕೆಲವು ನಾಯಕರು ರಾಹುಲ್‍ಗಾಂ ಮತ್ತೆ ಅಧ್ಯಕ್ಷರಾಗ ಬೇಕು ಎಂದು ಬಯಸುತ್ತಿದ್ದಾರೆ. ಆದರೆ ಜಿ-23 ಬಣದ ನಾಯಕರು ಪಕ್ಷದಲ್ಲಿ ನಾಯಕತ್ವವನ್ನು ಪ್ರಜಾಸತಾತ್ಮಕ ನೆಲೆಯಲ್ಲಿ ನಿರ್ಧರಿಸಬೇಕು ಎಂದು ಬಯಸುತ್ತಿದ್ದಾರೆ.

ಜಿ-23 ಬಣದಲ್ಲಿ ಗುರುತಿಸಿಕೊಂಡಿರುವ ಶಶಿತರೂರು ಈಗ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಮಾತ್ರವಲ್ಲ, ಕಾರ್ಯಕಾರಿ ಸಮಿತಿಯ 12ಕ್ಕೂ ಹೆಚ್ಚು ಸ್ಥಾನಗಳಿಗೂ ಚುನಾವಣೆಯ ಮೂಲಕವೇ ಸದಸ್ಯರ ಆಯ್ಕೆಯಾಗುವುದು ಆದರ್ಶಪ್ರಾಯವಾಗಿದೆ ಎಂದು ಲೇಖನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚೆಗೆ ಕಾಂಗ್ರೆಸ್ ತೊರೆದ ಗುಲಾಂ ನಬಿ ಆಜಾದ್ ಅವರು, ಕಾರ್ಯಕಾರಿ ಸಮಿತಿ ಎಂಬುದು ಅರ್ಥ ಹೀನ, ಅದರಲ್ಲಿ 12 ಮಂದಿ ಸದಸ್ಯರಿದ್ದರೆ, 50ಕ್ಕೂ ಹೆಚ್ಚು ಮಂದಿ ವಿಶೇಷ ಆಹ್ವಾನಿತರಿದ್ದಾರೆ. ಸದಸ್ಯರಾದವರೆ ಪದೇ ಪದೇ ಸದಸ್ಯರಾಗುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು.

ಈಗ ಶಶಿತರೂರು ಕೂಡ ಕಾರ್ಯಕಾರಿ ಸಮಿತಿ ಸದಸ್ಯತ್ವಗಳ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಚುನಾವಣೆ ಮೂಲಕವೇ ಪಕ್ಷದ ನಿರ್ಣಾಯಕ ಸ್ಥಾನಕ್ಕೆ ಆಯ್ಕೆಯಾಗಬೇಕು. ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಗಂಭೀರವಾದ ಚಿಂತನೆ ನಡೆಸಿರುವುದಾಗಿ ಹೇಳಿದ್ದಾರೆ.

Articles You Might Like

Share This Article