ನವದೆಹಲಿ,ಅ.2- ಕಾಂಗ್ರೆಸ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಗಳ ನಡುವೆ ಬಹಿರಂಗವಾದ ಚರ್ಚೆ ನಡೆಯಬೇಕು ಎಂದು ಕೇಂದ್ರ ಮಾಜಿ ಸಚಿವ ಶಶಿ ತರೂರ್ ಹೇಳಿದ್ದಾರೆ. ಪಿಟಿಐ ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ಅವರು, ವಿದೇಶದ ಮಾದರಿಯಲ್ಲಿ ಚುನಾವಣೆಯಲ್ಲಿ ಸ್ರ್ಪಸುವ ಅಭ್ಯರ್ಥಿಗಳ ನಡುವೆ ತಮ್ಮ ಭವಿಷ್ಯದ ಯೋಜನೆಗಳು, ಆಲೋಚನೆಗಳು, ಹೊಸ ಕಾರ್ಯಕ್ರಮಗಳ ಬಗ್ಗೆ ಪರಸ್ಪರ ಸಮಾಲೋಚನೆಯಾಗಬೇಕು. ಹೀಗಾಗಿ ಅಭ್ಯರ್ಥಿಗಳು ಸಾರ್ವಜನಿಕ ವೇದಿಕೆಯಲ್ಲಿ ಮುಖಾಮುಖಿಯಾಗಿ ಸಂವಾದ ನಡೆಸಬೇಕು ಎಂದಿದ್ದಾರೆ.
ತಮಗೆ ಪಕ್ಷವನ್ನು ಸಂಘಟಿಸುವ ಸಾಮಥ್ರ್ಯ ಮತ್ತು ದೃಢ ಆಲೋಚನೆಗಳಿವೆ. ವಿಶ್ವಸಂಸ್ಥೆಯ ಪ್ರಭಾರ ಅೀಧಿನ ಮಹಾ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಅನುಭವವಿದೆ. ವಿಶ್ವಾದ್ಯಂತ 800 ಸಿಬ್ಬಂದಿಗಳು 77 ದೇಶಗಳ ಕಚೇರಿಗಳನ್ನು ನಿಭಾಯಿಸಿದ್ದೇನೆ. ಸಂಘಟನಾತ್ಮಕವಾಗಿ ಆಯವ್ಯಯ, ಸ್ವರೂಪ ಎಲ್ಲವನ್ನು ಸಮಗ್ರವಾಗಿ ಕ್ರಮಗೊಳಿಸಿದ್ದೆ. ಪಕ್ಷದ ವಿಷಯದಲ್ಲಿ ಅದೇ ರೀತಿಯ ಕಾರ್ಯ ದಕ್ಷತೆಯನ್ನು ಪ್ರದರ್ಶಿಸಲು ತಾವು ಬದ್ದವಾಗಿರುವುದಾಗಿ ಹೇಳಿದ್ದಾರೆ.
ಯಾವುದೇ ಸ್ವಹಿತಾಸಕ್ತಿ ಅಥವಾ ಪಟ್ಟಭದ್ರ ಹಿತಾಸಕ್ತಿಗಳ ಉದ್ದೇಶ ತಮಗಿಲ್ಲ. ಪಕ್ಷ ಬಲಪಡಿಸುವುದು, ಬಿಜೆಪಿಯನ್ನು ಸೋಲಿಸುವುದು ಸಿದ್ದಾಂತಗಳ ಆಧಾರದ ಮೇಲೆ ಭವಿಷ್ಯದ ಯೋಜನೆ ರೂಪಿಸುವುದು ತಮ್ಮ ಆದ್ಯತೆಯಾಗಿದೆ ಎಂದು ಹೇಳಿದರು. ಗಾಂಧಿ ಕುಟುಂಬದೊಂದಿಗೆ ನಮಗೆ ಅವಿನಾಭಾವ ಸಂಬಂಧವಿದೆ.
ಅವರ ಹೃದಯದಲ್ಲಿ ತಮಗೆ ವಿಶೇಷ ಮಾನ್ಯತೆ ಇದೆ ಎಂದು ತರೂರು ಹೇಳಿಕೊಂಡರು. ಎಐಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ನಡೆಯುತ್ತಿರುವ ಚುನಾವಣೆಯಲ್ಲಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಕಣದಲ್ಲಿದ್ದಾರೆ.
ನಿನ್ನೆ ನಾಮಪತ್ರ ಪರಿಶೀಲನೆ ಬಳಿಕ ಜಾರ್ಖಂಡ್‍ನ ಕಾಂಗ್ರೆಸ್ ನಾಯಕ ಕೆ.ಎನ್.ತ್ರಿಪಾಠಿ ಅವರ ಉಮೇದುವಾರಿಕೆ ವಜಾಗೊಂಡಿದೆ. ಹೀಗಾಗಿ ಅಂತಿಮವಾಗಿ ಖರ್ಗೆ ಮತ್ತು ತರೂರ್ ಕಣದಲ್ಲಿದ್ದಾರೆ. ತರೂರ್ ಯಾವುದೇ ಕಾರಣಕ್ಕೂ ತಾವು ನಾಮಪತ್ರ ಹಿಂಪಡೆಯುವುದಿಲ್ಲ ಎಂದು ಹೇಳಿದ್ದು, ಸ್ಪರ್ಧೆಯಲ್ಲಿ ಮುಂದುವರೆಯುವುದಾಗಿ ತಿಳಿಸಿದ್ದಾರೆ. ನಮ್ಮ ನಡುವೆ ಸೈದ್ದಾಂತಿಕ ಭಿನ್ನಮತಗಳಿಲ್ಲ. ಆತಂರಿಕ ಪ್ರಜಾಪ್ರಭುತ್ವಕ್ಕೆ ಅನುಗುಣವಾಗಿ ನಡೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.