ಆಕೆ ನನ್ನ ಸಹೋದರಿ ಇದ್ದಂತೆ : ಶ್ರೀಕಾಂತ್ ತ್ಯಾಗಿ

Social Share

ನವದೆಹಲಿ, ಆ.10- ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ ಹೈಡ್ರಾಮಾ ಸೃಷ್ಟಿಯಾದ ಬಳಿಕ ಬಂಧನಕ್ಕೆ ಒಳಗಾಗಿರುವ ಬಿಜೆಪಿ ನಾಯಕ ಶ್ರೀಕಾಂತ್ ತ್ಯಾಗಿ, ಘಟನೆ ಕುರಿತು ಕ್ಷಮೆಯಾಚಿಸಿದ್ದು, ತೊಂದರೆಗೆ ಒಳಗಾದ ಮಹಿಳೆ ತನ್ನ ಸಹೋದರಿ ಇದ್ದಂತೆ ಎಂದಿದ್ದಾನೆ.

ಆಗಸ್ಟ್ 5ರಂದು ಉತ್ತರ ಪ್ರದೇಶದ ನೋಯಿಡಾದ ಗ್ರಾಂಡ್ ಒಮೆಕ್ಸ್ ಹೌಸಿಂಗ್ ಸೊಸೈಟಿಯ ಸೆಕ್ಷರ್ 93ಬಿರಲ್ಲಿ ಸ್ಥಳೀಯ ಮಹಿಳೆಯಿಂದಿಗೆ ಅನುಚಿತವಾಗಿ ವರ್ತಿಸಿದ್ದರು. ಸೊಸೈಟಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಕ್ಕೆ ತಕರಾರು ವ್ಯಕ್ತವಾದಾಗ ಶ್ರೀಕಾಂತ್ ತ್ಯಾಗಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ, ಅಸಭ್ಯ ಭಾಷೆ ಬಳಸಿದ್ದರು.

ಈ ಕುರಿತ ವಿಡಿಯೋ ಭಾರಿ ವೈರಲ್ ಆದಾಗ ಉತ್ತರ ಪ್ರದೇಶದ ಪೊಲೀಸರು ಪ್ರಕರಣ ದಾಖಲಿಸಿದ್ದರು. ಎರಡು ದಿನಗಳ ಹಿಂದೆ ತ್ಯಾಗಿಯ ಅಕ್ರಮ ನಿರ್ಮಾಣವನ್ನು ಧ್ವಂಸಗೊಳಿಸಿದರು. ತಲೆ ಮರೆಸಿನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದೆ. ನ್ಯಾಯಾದೀಶರು ಆರೋಪಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ನ್ಯಾಯಾಲಯಕ್ಕೆ ಹಾಜರು ಪಡಿಸುವ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿರುವ ತ್ಯಾಗಿ, ಮಹಿಳೆ ನನ್ನ ಸಹೋದರಿ ಇದ್ದಂತೆ. ಇಡೀ ಘಟನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಗಿದೆ. ನನ್ನ ವಿರುದ್ಧ ಷ್ಯಡ್ಯಂತ್ರ ನಡೆದಿದೆ ಎಂದಿದ್ದಾರೆ.

Articles You Might Like

Share This Article