ಶೆಡ್‍ನ ಗೋಡೆ ಕುಸಿದು ಇಬ್ಬರ ಮಕ್ಕಳ ಸಾವು

Social Share

ಮಾಗಡಿ,ಆ.7- ರಾತ್ರಿ ಸುರಿದ ಮಳೆಗೆ ಶೆಡ್‍ನ ಗೋಡೆ ಕುಸಿದ ಪರಿಣಾಮ ನೇಪಾಳ ಮೂಲದ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ಕುದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಗಂಡು ಮಗು ಫರ್ಬಿನ್(4), ಹೆಣ್ಣು ಮಗು ಇಷಿಕಾ(3) ಮೃತಪಟ್ಟ ಮಕ್ಕಳು.

ನೇಪಾಳ ಮೂಲದ ದಂಪತಿ ಇಬ್ಬರು ಮಕ್ಕಳೊಂದಿಗೆ ಕೆಲಸ ಹರಿಸಿಕೊಂಡು ಮಾಗಡಿ ತಾಲ್ಲೂಕಿಗೆ ಬಂದಿದ್ದು, ಹೋಟೆಲ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಸೋಲೂರಿನ ಕೂಡ್ಲೂರು ಕ್ರಾಸ್ ಬಳಿಯ ಮೊಬಿನ್ ಶರೀಫ್ ಎಂಬುವರಿಗೆ ಸೇರಿದ ಶೆಡ್‍ನಲ್ಲಿ ಈ ಕುಟುಂಬ ವಾಸವಾಗಿದೆ.

ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿದ ಮಳೆಯಿಂದಾಗಿ ಇವರ ಮನೆಯ ಶೆಡ್ ಮೇಲೆ ಪಕ್ಕದ ಮನೆಯ ಗಂಗರಂಗಮ್ಮ ಎಂಬುವರಿಗೆ ಸೇರಿದ ದನದ ಕೊಟ್ಟಿಗೆ ಕುಸಿದು ಇಬ್ಬರು ಮಕ್ಕಳ ಮೇಲೆ ಬಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ.

ಘಟನೆಯಲ್ಲಿ ಇನ್ನಿಬ್ಬರು ಗಾಯಗೊಂಡಿದ್ದು, ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುದ್ದಿ ತಿಳಿದು ಕುದೂರು ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Articles You Might Like

Share This Article