ನವದೆಹಲಿ, ಜ. 30- ದಕ್ಷಿಣ ಆಫ್ರಿಕಾದಲ್ಲಿ ನಡೆದ ಅಂಡರ್ 19 ವಿಶ್ವಕಪ್ ಗೆದ್ದಿರುವುದು ನನಗೆ ಸಂತಸವಾಗಿಲ್ಲ, ಬದಲಿಗೆ ಹಿರಿಯರ ಟಿ 20 ವಿಶ್ವಕಪ್ ಟೂರ್ನಿಯಲ್ಲಿ ಟ್ರೋಫಿ ಜಯಿಸಿದಾಗ ನಿಜವಾದ ಆನಂದವಾಗುತ್ತದೆ, ತಂಡಕ್ಕೆ ವಿಶ್ವ ಚಾಂಪಿಯನ್ ಪಟ್ಟ ದಕ್ಕಿಸಿಕೊಡುವುದೇ ನನ್ನ ಮುಂದಿನ ಗುರಿ ಎಂದು ಭಾರತ ತಂಡದ ಅಂಡರ್ 19 ತಂಡದ ನಾಯಕಿ ಶೆಫಾಲಿ ವರ್ಮಾ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶೆಫಾಲಿ ವರ್ಮಾ, ಕಳೆದ ಶನಿವಾರ ನನಗೆ 19 ವರ್ಷಗಳು ತುಂಬಿದ್ದು, ಫೆಬ್ರವರಿ 10 ರಿಂದ 26ರವರೆಗೆ ದಕ್ಷಿಣ ಆಫ್ರಿಕಾದಲ್ಲೇ ನಡೆಯಲಿರುವ ಹಿರಿಯರ ಮಹಿಳೆಯರ ಟಿ 20 ವಿಶ್ವಕಪ್ ಟೂರ್ನಿ ನಡೆಯುತ್ತಿದ್ದು, ತಂಡಕ್ಕೆ ಆಯ್ಕೆಯಾಗಿದ್ದು ಅಲ್ಲೂ ಉತ್ತಮ ಪ್ರದರ್ಶನ ತೋರಿ ತಂಡವನ್ನು ವಿಶ್ವ ಚಾಂಪಿಯನ್ ಆಗಿಸುತ್ತೇನೆ' ಎಂದು ಹೇಳಿದರು.
ಮುಂದುವರೆದ ಅದಾನಿ – ಹಿಡನ್‍ಬರ್ಗ್ ಜುಗಲ್ ಬಂದಿ
ಕಳೆದ ರಾತ್ರಿ ದಕ್ಷಿಣ ಆಫ್ರಿಕಾದ ಗ್ರೇಸ್ ಸ್ಕ್ರಿವೆನ್ಸ್ ಕ್ರೀಡಾಂಗಣದಲ್ಲಿ ನಡೆದ ಅಂಡರ್ 19 ವಿಶ್ವ ಕಪ್ ಟೂರ್ನಿಯಲ್ಲಿ ಶೆಫಾಲಿ ವರ್ಮಾ ಪಡೆಯು ಬಲಿಷ್ಠ ಇಂಗ್ಲೆಂಡ್ ವಿರುದ್ಧ 8 ವಿಕೆಟ್‍ಗಳ ಭರ್ಜರಿ ಗೆಲುವು ಸಾಸಿ ಚೊಚ್ಚಲ ವಿಶ್ವಕಪ್ ಟೂರ್ನಿಯಲ್ಲೇ ಟ್ರೋಫಿ ಗೆದ್ದು ಸಂಭ್ರಮಿಸಿದೆ. ಇದು ಈ ವರ್ಷ ಶೆಫಾಲಿ ಗೆದ್ದ ಮೊದಲ ಟ್ರೋಫಿ ಆಗಿದೆ. ಪೆÇೀಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಅಂಡರ್ 19 ತಂಡದ ನಾಯಕ ಶೆಫಾಲಿ ವರ್ಮಾ ಅವರು ಮಾತನಾಡಿ ತಮ್ಮ ಸಂಭ್ರಮ ವ್ಯಕ್ತಪಡಿಸಿದರು.
ತಂಡದ ಆಟಗಾರ್ತಿಯರು ಒಬ್ಬರಿಗೊಬ್ಬರು ಬೆಂಬಲ ನೀಡಿದ್ದರಿಂದ ನಮ್ಮ ಯೋಜನೆಗಳು ಕೈಗೂಡಿ ವಿಶ್ವಕಪ್ ಗೆಲ್ಲಲು ಸಹಕಾರಿ ಆಯಿತು. ತಂಡದ ಸದಸ್ಯರಾದ ಅರ್ಚನಾ, ಸೌಮ್ಯ ಸೇರಿದಂತೆ ಎಲ್ಲಾ ಆಟಗಾರ್ತಿಯರಿಗೆ ವಿಶ್ವಕಪ್ ಗೆದ್ದ ಶ್ರೇಯ ಸಲ್ಲಿಸುತ್ತೇನೆ, ಹಾಗೂ ನಮಗೆ ಸಹಕಾರ ನೀಡಿದ ತಂಡದ ತರಬೇತುದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಶೆಫಾಲಿ ವರ್ಮಾ ಹೇಳಿದರು.
ಅಂಡರ್ 19 ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ 68 ರನ್ ಗಳಿಸಿತ್ತು. ನಂತರ ಈ ಗುರಿಯನ್ನು ಬೆನ್ನಟ್ಟಿ ಶೆಫಾಲಿ ವರ್ಮಾ ಪಡೆ ಇನ್ನೂ 36 ಎಸೆತಗಳನ್ನು ಉಳಿಸಿಕೊಂಡು ವಿಶ್ವ ಚಾಂಪಿಯನ್ ಟ್ರೋಫಿ ಗೆದ್ದು ಸಂಭ್ರಮಿಸಿತು.
ಕೇಂದ್ರ ಸಚಿವ ಸಂಪುಟ ಪುನಾರಚನೆಯ ಗುಸುಗುಸು
ಫೆಬ್ರವರಿ 12 ರಂದು ಟೀಮ್ ಇಂಡಿಯಾ ಸಾಂಪ್ರದಾಯಿಕ ವೈರಿ ಪಾಕಿಸ್ತಾನದ ಸವಾಲನ್ನು ಎದುರಿಸುವ ಮೂಲಕ ಹಿರಿಯರ ಮಹಿಳಾ ವಿಶ್ವಕಪ್ ಟೂರ್ನಿಯ ಅಭಿಯಾನ ಆರಂಭಿಸಲಿದೆ.
Shefali Verma, T20, World Cup,