ಗಡಿಯಿಂದ ಉಗ್ರರನ್ನು ಸಾಗಿಸುತ್ತಿದ್ದ ಇಬ್ಬರ ಬಂಧನ

ಜಮ್ಮು, ಏ.24 – ಇಲ್ಲಿನ ಸುಂಜ್ವನ್‍ನಲ್ಲಿ ನಡೆದ ಎನ್ಕೌಂಟರ್‍ನಲ್ಲಿ ಹತರಾದ ಇಬ್ಬರು ಭಯೋತ್ಪಾದಕರಿಗೆ ನೆರವಾಗಿದ್ದ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಇಬ್ಬರನ್ನು ಬಂಸಿದ್ದಾರೆ. ಚಾಲಕ ವೃತಿಯ ಬಿಲಾಲ್ ಅಹ್ಮದ್ ವಾಗೆ ಮತ್ತು ಆತನ ಸಹಾಯಕ ಇಶಾಕ್ ಚೋಪಾನ್ ಅವರನ್ನು ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲಾಯಿಂದ ಬಂಧಿಸಲಾಗಿದೆ.

ಸಾಂಬಾ ಜಿಲ್ಲಾಯ ಸುಪ್ವಾಲಿನಿ ಗಡಿ ಬಳಿ ಭಾರತದೊಳಗೆ ಒಳನುಸುಳುವಿಕೆಯ ನಂತರ, ಜಮ್ಮುವಿನ ಸುಂಜ್ವನ್ಗ್ ಇವರನ್ನು ತಮ್ಮ ವಾಹನದಲ್ಲಿ ಸಾಗಿಸಿದ್ದರು ಕಳೆದ ಶುಕ್ರವಾರ ನಡೆದ ಎನ್ಕೌಂಟರ್‍ನಲ್ಲಿ ಆತ್ಮಹತ್ಯಾ ಉಡುಪುಗಳು ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಇಬ್ಬರೂ ಭಯೋತ್ಪಾದಕರು ಹತರಾಗಿದ್ದರು ಇದರಿಂದ ದೊಡ್ಡ ಆತ್ಮಹತ್ಯಾ ದಾಳಿಯನ್ನು ಭದ್ರತಾ ಪಡೆಗಳು ತಪ್ಪಿಸಿದ್ದವು.

ಎಂದು ಜಮ್ಮು ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.ಶೇಖ್ನ ಸಹೋದರ ಆಸಿಫ್ — ಪ್ರಕರಣದ ಪ್ರಮುಖ ಸಂಚುಕೋರ — ಇನ್ನೂ ತಲೆಮರೆಸಿಕೊಂಡಿದ್ದಾನೆ ಮತ್ತು ಅವನನ್ನು ಹಿಡಿಯಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಕೆಲವರು ತಲೆಮರೆಸಿಕೊಂಡಿದ್ದು ಅವರ ಸೆರೆಗೆ ಬಲೆ ಬೀಸಲಾಗಿದೆ ಎಂದು ತಿಳಿಸಿದ್ದಾರೆ.