ಆಸ್ಪತ್ರೆಯಲ್ಲಿ ಬಾಲಕಿ ಮೇಲೆ ಗ್ಯಾಂಗ್ ರೇಪ್..!

ಶಿವಮೊಗ್ಗ, ಡಿ.6- ಕೊರೊನಾ ಸೋಂಕಿತ ತಾಯಿಯ ಕಾಳಜಿಗಾಗಿ ಆಸ್ಪತ್ರೆಯಲ್ಲಿದ್ದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ದುರ್ಘಟನೆ ಮುಖ್ಯಮಂತ್ರಿ ಯಡಿಯೂರಪ್ಪ ಆವರ ತವರು ಜಿಲ್ಲಾ ಶಿವಮೊಗ್ಗದ ನಡೆದಿದೆ. ಶನಿವಾರ ರಾತ್ರಿ ಮೆಗ್ಗಾನ್ ಬೋಧನಾ ಆಸ್ಪತ್ರೆ (ಸಿಮ್ಸï)ನಲ್ಲಿ ಅತ್ಯಾಚಾರ ಪ್ರಕರಣ ನಡೆದಿರುವುದು ವರದಿಯಾಗಿದ್ದು, ಆರೋಪಿಗಳಾದ ವಾರ್ಡ್‍ಬಾಯ್ ಮನೋಜ್, ಆತನ ಸ್ನೇಹಿತರಾದ ಪ್ರಜ್ವಲ್, ವಿನಯ್‍ನನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ಇದ್ದು, ಪೋಲೀಸರು ತನಿಖೆ ಮುಂದುವರೆಸಿದ್ದಾರೆ.

ಕೋವಿಡ್-19 ಪೀಡಿತ ತಾಯಿಯನ್ನು ನೋಡಿಕೊಳ್ಳುವ ಸಲುವಾಗಿ ಕಳೆದ ಒಂದು ತಿಂಗಳಿಂದ ಸಂತ್ರಸ್ತ ಬಾಲಕಿ ಮೆಗ್ಗಾನ್ ಆಸ್ಪತ್ರೆಯಲ್ಲಿದ್ದಳು. ವಾರ್ಡ್ ಬಾಯ್ ಮನೋಜ್ ಪರಿಚಯವಾಗಿದ್ದು, ಆತ ಹೋಟೆಲ್‍ನಿಂದ ಬಾಲಕಿಗೆ ಊಟ, ಉಪಹಾರ ತಂದುಕೊಡುತ್ತಿದ್ದ.  ಕೋಮು ಗಲಭೆಯಿಂದಾಗಿ ಶಿವಮೊಗ್ಗ ನಗರ ಮೂರು ದಿನದಿಂದ ಸಂಪೂರ್ಣ ಬಂದ್ ಆಗಿತ್ತು. ಹಾಗಾಗಿ ಶನಿವಾರ ರಾತ್ರಿ ಊಟಕ್ಕೆ ಹೊರಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದಿದ್ದಾನೆ.

ಆತನನ್ನು ನಂಬಿದ ಬಾಲಕಿ ಜತೆಯಲ್ಲಿ ಹೋಗಿದ್ದು, ದುಷ್ಕøತ್ಯಕ್ಕೆ ಸಿಲುಕಿದ್ದಾಳೆ. ಆರೋಪಿ ಮನೋಜ್ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ. ಅದಾದ ಬಳಿಕ ಆತನ ಮೂವರು ಸ್ನೇಹಿತರಾದ ಪ್ರಜ್ವಲ್, ವಿನಯ್ ಹಾಗೂ ಮತ್ತೊಬ್ಬ ನಿರಂತರವಾಗಿ ಅತ್ಯಾಚಾರ ಎಸಗಿದ್ದಾರೆ.

ಘಟನೆ ಬೆಳಕಿಗೆ ಬಂದಿದ್ದರಿಂದ ಶಿವಮೊಗ್ಗ ಜಿಲ್ಲೆಯ ಜನತೆ ಬೆಚ್ಚಿಬಿದ್ದಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಶಿವಮೊಗ್ಗ ಮಹಿಳಾ ಪೋಲಿಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.