ಚಿಕ್ಕಮಗಳೂರು, ಫೆ.25- ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಿಸಿರುವುದು ಬಿಜೆಪಿ ಕೊಡುಗೆಯಲ್ಲ. ನಾಡಿನ ರೈತರು ಕೊಟ್ಟ ಭೂಮಿಯಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಶೃಂಗೇರಿಯ ವೈಕುಂಠಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಮೈಸೂರು ರಸ್ತೆ ಲೋಕಾರ್ಪಣೆಗೆ ಪ್ರಧಾನಿ ಆಗಮಿಸಲಿದ್ದಾರೆ. ಈ ರಸ್ತೆ ನಿರ್ಮಾಣಕ್ಕೆ ರೈತರ ಜೊತೆ ನಾನು 9 ಸಭೆ ಮಾಡಿರುವೆ. ಆ ರಸ್ತೆ ನಿರ್ಮಾಣಕ್ಕೆ ನಾನು ಸಹ ಶ್ರಮ ಪಟ್ಟಿರುವೆ ಎಂದು ಹೇಳಿದರು.
ಬಿಜೆಪಿಯವರು ದೇಶ ಅಭಿವೃದ್ಧಿ ಮಾಡಿದ್ದಾರಾ ಎಂದು ಪ್ರಶ್ನಿಸಿದ ಅವರು, ಪಂಡಿತ್ ಜವಾಹರ್‍ಲಾಲ್ ನೆಹರು ಕಾಲದಿಂದಲೂ ದೇಶ ಅಭಿವೃದ್ಧಿಯಾಗಿದೆ. ಪಂಚವಾರ್ಷಿಕ ಯೋಜನೆಗಳಿಂದ ದೇಶ ಅಭಿವೃದ್ಧಿಯಾಗಿದೆ. ಗುಜರಾತ್ ಹೇಗೆ ಅಭಿವೃದ್ಧಿ ಆಗಿದೆ ಎಂಬುದನ್ನು ಅಲ್ಲಿನ ಹಳ್ಳಿಗಳಿಗೆ ಹೋಗಿ ನೋಡಿ ಗೊತ್ತಾಗುತ್ತದೆ ಎಂದು ಟೀಕಿಸಿದರು.
ಸೋನಿಯಾ ಗಾಂಧಿ ರಾಜಕೀಯ ನಿವೃತ್ತಿ..?
ರಾಜ್ಯದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಚುನಾವಣೆ ತಯಾರಿಯಲ್ಲಿವೆ. ಚುನಾವಣಾ ಪೂರ್ವ ಸಮೀಕ್ಷೆ ಏನೆಂಬುದು ಗೊತ್ತಿದೆ. ಸರ್ಕಾರ ಯಾವ ಕಾರ್ಯಕ್ರಮ ಘೋಷಣೆ ಮಾಡಿದರೂ ಅನುಷ್ಠಾನಕ್ಕೆ ಬರಲ್ಲ. ಚುನಾವಣೆ ಸಮಯದ ಬಜೆಟ್ ಮಂಡಿಸಿದ್ದಾರೆ. ಕಳೆದ ಮೂರು ವರ್ಷ ಬಿಜೆಪಿ ಆಡಳಿತ ಬಗ್ಗೆ ಜನರ ಮನಸ್ಸಿನಲ್ಲಿ ದಾಖಲಾಗಿದೆ. ಅಂತಿಮ ಅಧಿವೇಶನದಲ್ಲಿ ವಿಧಾಯ ಸಮಯದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನಸ್ಸು ಬಿಚ್ಚಿ ಮಾತನಾಡಿದರೆ ಚೆನ್ನಾಗಿರುತ್ತಿತ್ತು ಎಂದರು.
ಮನಸ್ಸಿನ ಪರಾಮರ್ಶೆ ಮಾಡಿಕೊಂಡ ಮೊದಲ ಅಧಿವೇಶನ ನನ್ನ ರಾಜಕೀಯ ಜೀವನದಲ್ಲಿ ನೋಡಿದ್ದು, ಕರ್ನಾಟಕದ ಜನರನ್ನು ಮೆಚ್ಚಿಸಿವುದು ಸುಲಭವಲ್ಲ.
ಮುಗಿಯದ ಮೆಟ್ರೋ ಅವಾಂತರ : ಅದೃಷ್ಟವಶಾತ್ ತಪ್ಪಿದ ಮತ್ತೊಂದು ದುರಂತ
ನೂರು ಸುಳ್ಳು ಹೇಳಿ ಮೂರು ಕೆಲಸ ಮಾಡುತ್ತಾರೆ. ಭ್ರಷ್ಟಾಚಾರ ಮುಕ್ತ ರಾಜ್ಯ ಮಾಡುತ್ತೇವೆ ಎಂದ ಮೇಲೆ ಕಳೆದ ಮೂರು ವರ್ಷದ ಬಿಜೆಪಿ ಆಡಳಿತಕ್ಕೆ ಭ್ರಷ್ಟಾಚಾರದ ಸರ್ಟಿಫಿಕೇಟ್ ಕೊಟ್ಟಿದ್ದಾರೆ ಕೇಂದ್ರ ಸಚಿವ ಅಮಿತ್ ಷಾ ಎಂದು ಆರೋಪಿಸಿದರು.
Shimoga Airport, PM Modi, HD Kumaraswamy,