ಬೆಂಗಳೂರು, ಸೆ.15- ಶಿವಮೊಗ್ಗದಲ್ಲಿ ಇತ್ತೀಚೆಗೆ ನಡೆದ ಚೂರಿ ಇರಿತ ಪ್ರಕರಣದಲ್ಲಿ ಆರೋಪಿ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆ ಜೊತೆ ಸಂಪರ್ಕದಲ್ಲಿರುವುದು ಪತ್ತೆಯಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.
ವಿಧಾನ ಪರಿಷತ್‍ನಲ್ಲಿ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ರಾಜ್ಯದ ಆಂತರಿಕ ಭದ್ರತೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮತಾಂತರ, ಜಾತಿ ಗಲಭೆ, ಕೋಮುಗಲಭೆ ಸೇರಿದಂತೆ ವಿವಿಧ ಸಮಸ್ಯೆಗಳು ಪದೇ ಪದೇ ವರದಿಯಾಗುವ ಸ್ಥಳಗಳನ್ನು ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಿ ಭದ್ರತೆ ಒದಗಿಸಲಾಗುತ್ತಿದೆ. ಅಗತ್ಯ ಇರುವ ಕಡೆ ಯುಎಪಿಎ ಕಾಯ್ದೆಯನ್ನು ಬಳಕೆ ಮಾಡಲಾಗುತ್ತಿದೆ. ಜೊತೆ ಹಲವು ಕಾನೂನುಗಳನ್ನು ಬಳಕೆ ಮಾಡಿಕೊಂಡು ಸಮಾಜದಲ್ಲಿ ಶಾಂತಿ ಪಾಲನೆಗೆ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದರು.
ಇದನ್ನೂ ಓದಿ : BIG NEWS : ಉಕ್ರೇನ್ ಅಧ್ಯಕ್ಷ ಝೆಲೆನ್‍ಸ್ಕಿ ಕಾರು ಅಪಘಾತ, ಗಂಭೀರ ಗಾಯ
ಭಾರತಿ ಶೆಟ್ಟಿ ಅವರು, ನಮ್ಮ ರಾಜ್ಯದ ಪೊಲೀಸರನ್ನು ಅಸ್ಸಾಂ, ಉತ್ತರ ಪ್ರದೇಶಕ್ಕೆ ಕಳುಹಿಸಿ ಯುಎಪಿಎ ಕಾಯ್ದೆ ಬಳಕೆ ಕುರಿತು ತರಬೇತಿ ಕೊಡಿಸಿ ಎಂದು ಸಲಹೆ ನೀಡಿದಾಗ, ನಮ್ಮ ಪೊಲೀಸರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ತರಬೇತಿ ಅಗತ್ಯ ಇಲ್ಲ. ಒಂದು ವೇಳೆ ಅಗತ್ಯ ಎಂದಾದರೆ ತರಬೇತಿಗೂ ಕಳುಹಿಸಲಾಗುವುದು. ಈಗಾಗಲೇ ಗುಜರಾತ್ ಸೇರಿ ಹಲವು ಕಡೆ ಪೊಲೀಸರು ತರಬೇತಿ ಪಡೆದಿದ್ದಾರೆ ಎಂದರು.
ಶಿವಮೊಗ್ಗದ ಪ್ರಕರಣದಲ್ಲಿ ಬಂತನಾದ ಆರೋಪಿಯ ಫೆÇೀನ್ ಪರಿಶೀಲಿಸಿದಾಗ ಆತ ಅಂತರ ರಾಷ್ಟ್ರೀಯ ಉಗ್ರ ಸಂಘಟನೆಯ ಜೊತೆ ಸಂಪರ್ಕದಲ್ಲಿರುವುದು ಪತ್ತೆಯಾಗಿದೆ. ತನಿಖೆ ಮುಂದುವರೆದಿದೆ ಎಂದರು.