ಹಾಸನ, ಜು.17- ಜಿಲ್ಲಾಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಹಲವು ಕಡೆ ವಾಸದ ಮನೆಯ ಗೋಡೆಗಳು ಕುಸಿತ ಕಂಡು ಸಾಕಷ್ಟು ಹಾನಿಯಾಗಿದೆ. ತಾಲೂಕಿನ ಹಾವಿನ ಮಾರನಹಳ್ಳಿ ರಾತ್ರಿ ಸುರಿದ ಭಾರಿ ಮಳೆಗೆ ಅರ್ಚಕ ಮುದ್ದಯ್ಯ ಎಂಬುವರಿಗೆ ಸೇರಿದ ಮನೆಯ ಗೋಡೆ ಕುಸಿದ ಶಬ್ಧಕ್ಕೆ ಹೊರಗೋಡಿ ಬಂದ ಕುಟುಂಬ ಸದಸ್ಯರು ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ.
ವಿಪರೀತ ಮಳೆಯಿಂದ ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದು, ಯಾವುದೇ ಸಮಯದಲ್ಲಾದರೂ ಇಡೀ ಮನೆಯೇ ಕುಸಿದ ಆತಂಕದಲ್ಲಿ ಕುಟುಂಬಸ್ಥರು ಇದ್ದು, ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ ಮುದ್ದಯ್ಯ ಮನವಿ ಮಾಡಿದ್ದಾರೆ.
ಮತ್ತೊಂದೆಡೆ ಆಲೂರು ತಾಲೂಕಿನ ಮೂಡಲ ಕೊಪ್ಪಲು ಹಾಗೂ ನಿಲುವಾಗಿಲು ಗ್ರಾಮದಲ್ಲಿ ಭಾರೀ ಮಳೆಗೆ ಎರಡು ಮನೆಗಳು ಕುಸಿದಿದ್ದು, ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಾಗಮ್ಮ ಎಂಬುವವರಿಗೆ ಸೇರಿದ ಮನೆಯ ವಸ್ತುಗಳು ಹಾನಿಯಾಗಿದ್ದು, ಅದೃಷ್ಟ ವಶಾತ್ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಮೂಡಲಕೊಪ್ಪಲು ಗ್ರಾಮದ ಈರೇಗೌಡ ಎಂಬುವರಿಗೆ ಸೇರಿದ ಮನೆ ಕುಸಿದಿದೆ.
ಭಾರೀ ಮಳೆ ಉಕ್ಕಿದ ಜೀವ ಜಲ: ಜಿಲ್ಲಾಯಲ್ಲಿ ಕಳೆದ ಹಲವು ದಿನಗಳಿಂದ ಭಾರೀ ಮಳೆಯಾಗುತ್ತಿರುವುದರಿಂದ ಮಲೆನಾಡು ಭಾಗದ ಸಕಲೇಶಪುರ, ಆಲೂರು, ಬೇಲೂರಿನಲ್ಲಿ ಕೆರೆಕಟ್ಟೆಗಳಿಗೆ ಜೀವಕಳೆ ಬಂದಿದೆ. ಮತ್ತೊಂದೆಡೆ ಸಕಲೇಶಪುರ ತಾಲೂಕಿನ ಜಾನೆಕೆರೆ ಗ್ರಾಮದಲ್ಲಿ ಮಳೆಯ ಹಿನ್ನೆಲೆಯಲ್ಲಿ ಗುಡ್ಡದ ಮಣ್ಣಿನ ಗೆರೆಗಳಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ನಲ್ಲಿಯಲ್ಲಿ ನೀರು ಬಂದ ರೀತಿಯಲ್ಲಿ ಹರಿಯುತ್ತಿದೆ.
ಜುಲೈ 18ರ ವರೆಗೂ ಯಲ್ಲೋ ಅಲರ್ಟ್: ಹಾಸನ ಜಿಲ್ಲಾಯಲ್ಲಿ ಮುಂದಿನ ಜುಲೈ 18ರವರೆಗೂ ಯಲ್ಲಾ¯್ಲÉೂೀ ಅಲರ್ಟ್ ಸೂಚನೆ ನೀಡಲಾಗಿದೆ. ಹವಾಮಾನ ಇಲಾಖೆಯಿಂದ ವರದಿ ಬಿಡುಗಡೆ ಮಾಡಲಾಗಿದ್ದು, ಇಂದು, ನಾಳೆ ಮತ್ತೆ ನಾಡಿದ್ದು ಜಿಲ್ಲಾಯಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಗಳಿದ್ದು, ಜುಲೈ 21ರ ವರೆಗೆ ಹೆಚ್ಚಿನ ಮಳೆಯಾಗುವ ಸಂಭವ ಕಡಿಮೆ ಎಂದು ಹವಾಮಾನ ಇಲಾಖೆ ವರದಿ ಬಿಡುಗಡೆ ಮಾಡಿದೆ.
ಹೊಳೆ ಮಲ್ಲೇಶ್ವರಸ್ವಾಮಿಗೆ ಜಲಕಂಟಕ: ಸಕಲೇಶಪುರ ಪಟ್ಟಣ ಸಮೀಪ ಹರಿಯುವ ಹೇಮಾವತಿ ಜಲಾಶಯ ಅಪಾಯ
ಮೀರಿ ಹರಿಯುತ್ತಿದ್ದು, ನದಿ ಸಮೀಪದ ಹೊಳೆ ಮಲ್ಲೇಶ್ವರ ದೇವಾಲಯದ ಮೆಟ್ಟಿಲು ಸಂಪೂರ್ಣ ನೀರಿನಿಂದ ಆವೃತವಾಗಿದೆ.ಪ್ರತಿ ವರ್ಷ ಹೆಚ್ಚು ಮಳೆಯಾದರೆ ಹೇಮಾವತಿ ನದಿ ಉಕ್ಕಿ ಹರಿಯುವುದರಿಂದ ಹೊಳೆ ಮಲ್ಲೇಶ್ವರ ದೇವಾಲಯದ ಮೆಟ್ಟಿಲು ಭರ್ತಿಯಾಗಿ ಗರ್ಭಗುಡಿ ಪ್ರವೇಶಿಸುವುದು ಸಾಮಾನ್ಯವಾಗಿದೆ.
ಈ ಬಾರಿಯೂ ಹೊಳೆ ಮಲ್ಲೇಶ್ವರ ದೇವಾಲಯ ಗರ್ಭಗುಡಿ ಪ್ರವೇಶಿಸಿರುವ ಹೇಮಾವತಿ ನದಿ ನೀರು ಜೀವ ಕಳೆ ತುಂಬಿಕೊಂಡಿದೆ. ಮತ್ತೊಂದೆಡೆ ಹೇಮಾವತಿ ಜಲಾಶಯಕ್ಕೆ 50,000 ಕ್ಯುಸೆಕ್‍ಗೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.
ಹೆದ್ದಾರಿಯಲ್ಲಿ ನಿಂತ ಟ್ಯಾಂಕರ್-ಲಾರಿಗಳು: ಸಕಲೇಶಪುರ ಸಮೀಪದ ದೋಣಿಗಾಲ್ ಬಳಿ ಹೆದ್ದಾರಿ ಭೂಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಯಾವುದೇ ಭಾರೀ ವಾಹನಗಳನ್ನು ಸಂಚರಿಸಿದಂತೆ ನಿರ್ಬಂಧ ಹೇರಿದೆ.
ಮುಂದಿನ ಆದೇಶದವರೆಗೂ ನಿರ್ಬಂಧ ಹೇರಿರುವ ಜಿಲ್ಲಾಡಳಿತ ಮಳೆಯ ಪ್ರಮಾಣ ಕಡಿಮೆಯಾದ ನಂತರ ಹಾಗೂ ಹೆದ್ದಾರಿ ದುರಸ್ತಿ ಮಾಡಿದ ಬಳಿಕವೇ ನಿರ್ಬಂಧ ತೆರವು ಮಾಡುವ ಹಿನ್ನೆಲೆಯಲ್ಲಿ ಲಾರಿ ಮಾಲೀಕರು ಹೆದ್ದಾರಿಯಲ್ಲಿಯೇ ಕಾದು ನಿಂತಿದ್ದಾರೆ. ನಿನ್ನೆಯಿಂದಲೂ ಹಲವಾರು ಕಿಲೋ ಮೀಟರ್‍ಗಟ್ಟಲೆ ಭಾರೀ ಲಾರಿ ಹಾಗೂ ಟ್ಯಾಂಕರ್‍ಗಳು ಹೆದ್ದಾರಿಯಲ್ಲಿ ಒಂದು ಬದಿಯಲ್ಲಿ ನಿಂತಿವೆ.