ಶಿವಮೊಗ್ಗ,ಅ.6- ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣದಲ್ಲಿ ಭೂಮಿ ಕಂಪಿಸಿದ್ದು ಜನ ಆತಂಕಕ್ಕೆ ಒಳಗಾಗಿದ್ದಾರೆ. ಪಟ್ಟಣದ 3 ಕಿಮೀ ವ್ಯಾಪ್ತಿಯಲ್ಲಿ ಬೆಳಗಿನ ಜಾವ 3.55ರ ಹೊತ್ತಿಗೆ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಹೇಳಲಾಗುತ್ತಿದೆ.
ಶಿರಾಳಕೊಪ್ಪ ಪಟ್ಟಣ ಮತ್ತು ಸುತ್ತಮುತ್ತಲ ಒಂದು ಕಿಮೀ ಸುತ್ತಮುತ್ತ ಈ ಅನುಭವವಾಗಿದೆ ಎಂದು ಜನ ತಿಳಿಸಿದ್ದಾರೆ. ಭೂಮಿ ಕಂಪನದ ಅನುಭವ ಆಗುತ್ತಿದ್ದಂತೆ ಜನರು ಮನೆಯಿಂದ ಹೊರಗೆ ಬಂದಿದ್ದಾರೆ. ಕೆಲವರು ಜೋರು ಶಬ್ದವಾಯಿತು ಎಂದೂ ತಿಳಿಸಿದ್ದು, ಬೆಳಗಿನ ಜಾವ ಗಾಢ ನಿದ್ರೆಯಲ್ಲಿದ್ದವರಿಗೆ ಕಂಪನದ ಅನುಭವದಿಂದ ಆತಂಕಗೊಂಡಿದ್ದಾರೆ.
ಮೊದಲ ಸಲ ಜೋರಾಗಿ ಭೂಮಿ ಕಂಪಿಸಿದ ಅನುಭವ ಆಗಿದೆ. ಎರಡನೇ ಸಲ ಕಂಪಿಸಿದ ಪ್ರಮಾಣ ಕಡಿಮೆ ಎನ್ನಿಸಿದೆ. ಆದರೆ, ಯಾವುದೇ, ಹಾನಿಯಾದ ಬಗ್ಗೆ ಇನ್ನೂ ವರದಿಯಾಗಿಲ್ಲ. 4.1ರ ಪ್ರಮಾಣದಲ್ಲಿ ಭೂಮಿ ಕಂಪಿಸಿದೆ.
ಶಿರಾಳಕೊಪ್ಪ ಪಟ್ಟಣದ 3 ಕಿಮೀ ಸುತ್ತಳತೆಯಲ್ಲಿ ಭೂಕಂಪನ ಕೇಂದ್ರಿತವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹರಿದಾಡುತ್ತಿದೆ. ಈ ಬಗ್ಗೆ ಭೂಗರ್ಭ ಶಾಸ್ತ್ರಜ್ಞರು ಸ್ಪಷ್ಟನೆ ನೀಡಬೇಕಾಗಿದೆ. ಭೂಕಂಪದ ಜೊತೆ ಜನರಿಗೆ ಭಾರಿ ಶಬ್ಧ ಕೇಳಿಸಿದೆ. ಇದರಿಂದ ಜನರಲ್ಲಿ ಆತಂಕ ಎದುರಾಗಿದೆ.