ದುಬೈನಲ್ಲಿ ಶಿವಸೇನೆ ಶಾಸಕ ಹೃದಯಾಘಾತದಿಂದ ನಿಧನ

ಮುಂಬೈ, ಮೇ 12- ಮಹಾರಾಷ್ಟ್ರದ ಶಿವಸೇನೆ ಶಾಸಕ ರಮೇಶ್ ಲಟ್ಕೆ (52) ಅವರು ದುಬೈನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ತಮ್ಮ ಕುಟುಂಬದೊಂದಿಗೆ ದುಬೈಗೆ ಪ್ರವಾಸಕ್ಕೆ ಹೋಗಿದ್ದಾಗ ಹೋಟಲ್‍ನ ಕೊಠಡಿಯಲ್ಲಿ ಕಳೆದ ರಾತ್ರಿ ಎದೆನೋವು ಕಾಣಿಸಿಕೊಂಡಿದೆ ತಕ್ಷಣ ಅವರಿಗೆ ಚಿಕಿತ್ಸೆ ನೀಡಲಾಯಿತಾದರು ಹೃದಯಾಘಾತದಿಂದ ಅಸುನೀಗಿದ್ದಾರೆ ಎಂದು ಶಿವಸೇನೆ ಮುಖಂಡರು ತಿಳಿಸಿದ್ದಾರೆ.

ಮಹಾರಾಷ್ಟ್ರದ ರಾಜಧಾನಿ ಮುಂಬೈ ನಗರದ ಅಂಧೇರಿ ಪೂರ್ವ ವಿಧಾನಸಭಾ ಕ್ಷೇತ್ರದಿಂದ ರಮೇಶ್‍ಲಟ್ಕೆ ಎರಡನೇ ಬಾರಿ ಶಿವಸೇನಾ ಶಾಸಕರಾಗಿದ್ದರು.

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತದೇಹವನ್ನು ಭಾರತಕ್ಕೆ ತರಲು ಕಾರ್ಯವಿಧಾನವನ್ನು ಪ್ರಾರಂಭಿಸಲಾಗಿದೆ ಇಂದು ಸಂಜೆ ವೇಳೆಗೆ ಬರುವ ಸಾಧ್ಯತೆ ಇದೆ. ಕುಟುಂಬ ಸದಸ್ಯರು ಕೂಡ ಅಲ್ಲೇ ಇದ್ದು ಎನಾಯಿತು ಎಂಬುದರ ಬಗ್ಗೆ ಇನ್ನು ಸರಿಯಾದ ಮಾಹಿತಿ ಸಿಗುತ್ತಿಲ್ಲ