ಜೆಡಿಯು ಪಕ್ಷಕ್ಕೆ ಸೇರಿದ ಉದ್ಯಮಿ ಶಿವಕುಮಾರ್ ಬದ್ರಯ್ಯ

Social Share

ಬೆಂಗಳೂರು,ಫೆ.11- ಬೆಂಗಳೂರಿನ ಬಾಳೆ ಎಲೆ ಹಾಗೂ ಗ್ರಂದಿಗೆ ಮಳಿಗೆಯ ಮಾಲೀಕರಾದ ಆರ್ ವಿ ಬದ್ರಯ್ಯ ಪುತ್ರ ಶಿವಕುಮಾರ್ ರಾಜಾಜಿನಗರ ಕ್ಷೇತ್ರದಿಂದ ಜನತಾದಳ (ಸಂಯುಕ್ತ) ಪಕ್ಷದಿಂದ ಸ್ಪರ್ಧಿಸುವುದಾಗಿ ಇಂದು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಇವರು, ಜನತಾದಳ (ಸಂಯುಕ್ತ) ಈ ಪಕ್ಷವು ಭ್ರಷ್ಟಾಚಾರ ಮುಕ್ತವಾಗಿದ್ದು ದೇಶದಲ್ಲಿ ಉತ್ತಮ ದೇಯೋದ್ದೇಶಗಳನ್ನು ಇಟ್ಟುಕೊಂಡಿರುವ ಪಕ್ಷ. ಇದರ ಸಿದ್ದಾಂತಗಳನ್ನು ಒಪ್ಪಿ ನಾನು ಈ ಪಕ್ಷಕ್ಕೆ ಬಂದಿದ್ದೇನೆ. ನಮ್ಮ ತಂದೆಯವರೊಂದಿಗೆ ಸೇರಿ ಅನೇಕ ವರ್ಷಗಳಿಂದ ಸುಮಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದೇವೆ.

25 ವರ್ಷಗಳಿಂದ ಅನಾಥ ಶವಗಳಿಗೆ ಶವ ಸಂಸ್ಕಾರ, ಹೋಟೆಲ್ ಛತ್ರಗಳಲ್ಲಿ ಉಳಿದ ಆಹಾರವನ್ನು ನಗರದ ವಿವಿಧ ಭಾಗಗಳಲ್ಲಿ ಇರುವ ಬಡವರಿಗೆ ಹಂಚುವ ಕಾರ್ಯಕ್ರಮ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಆರ್ಥಿಕ ಸಹಾಯ ಸೇರಿದಂತೆ ಅನೇಕ ಸೇವೆಗಳನ್ನ ಮಾಡುತ್ತಾ ಬಂದಿದ್ದೇವೆ. ಮತ್ತಷ್ಟು ಸೇವೆಗಳನ್ನು ಮಾಡಲು ರಾಜಕೀಯ ವೇದಿಕೆ ಬೇಕಿತ್ತು ಆದ್ದರಿಂದ ಉತ್ತಮ ಸಿದ್ಧಾಂತಗಳನ್ನು ಹೊಂದಿರುವ ಈ ಪಕ್ಷವನ್ನು ಆಯ್ದುಕೊಂಡಿದ್ದೇನೆ ಎಂದರು.

ಮುಂಬೈನಲ್ಲಿ 2 ವಂದೇ ಭಾರತ್ ರೈಲುಗಳಿಗೆ ಮೋದಿ ಚಾಲನೆ

ನಮ್ಮ ಕ್ಷೇತ್ರವನ್ನು ಪ್ರಪಂಚದಲ್ಲೇ ಮಾದರಿ ಕ್ಷೇತ್ರವನ್ನಾಗಿ ಮಾಡಲು ಪ್ರತಿಜ್ಞಾವಿಧಿ ಕೈಗೊಂಡಿದ್ದು ಇದರ ಶಿಲನ್ಯಾಸ ಕಾರ್ಯಕ್ರಮಕ್ಕೆ ತಮಿಳುನಾಡಿನ ಸಮಾಜ ಸೇವಕ ಆರ್ ಷಣ್ಮುಗಂ ಅವರನ್ನು ಕರೆತರಲಾಗುವುದು ಎಂದರು.

ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಬೆಂಗಳೂರು ಜೆಡಿಯು ಅಧ್ಯಕ್ಷ ರಮೇಶ್ ಗೌಡ ಶಿವಕುಮಾರ್ ನಿಷ್ಠಾವಂತ ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿ. ನಮ್ಮ ಪಕ್ಷದ ಸಿದ್ಧಾಂತಗಳು ಅವರನ್ನು ಕೇಳಿದ್ದೇವೆ. ರಾಜಾಜಿನಗರ ಕ್ಷೇತ್ರದಿಂದ ನಮ್ಮ ಪಕ್ಷದಿಂದಲೇ ಸ್ಪರ್ಧಿಸಲಿದ್ದು ಜನರು ಅವರಿಗೆ ಆಶೀರ್ವಾದ ಮಾಡಲಿ ಎಂದರು.

ಬಿಬಿಎಂಪಿಯಲ್ಲಿ ಮತ್ತೊಂದು ಬ್ರಹ್ಮಾಂಡ ಭ್ರಷ್ಟಾಚಾರ

ಪತ್ರಿಕಾಗೋಷ್ಠಿಯಲ್ಲಿ ಸಂಸದೀಯ ಮಂಡಳಿ ಅಧ್ಯಕ್ಷ ಚಂದ್ರಶೇಖರ್ ಗಂಗೂರ್, ತ್ರಿಶೂಲ್ ಪಾಟೀಲ್, ಮುಂತಾದರೂ ಉಪಸ್ಥಿತರಿದ್ದರು.

Shivakumar, Rajajinagar, JDU, Assembly elections,

Articles You Might Like

Share This Article