ಶಿವಲಿಂಗೇಗೌಡ ವಿರುದ್ಧ ಎಚ್‍ಡಿಕೆ ವಾಗ್ದಾಳಿ

Social Share

ಹಾಸನ,ಫೆ.12- ಶಾಸಕ ಕೆ.ಎಂ.ಶಿವಲಿಂಗೇಗೌಡರಿಗೆ ಜೆಡಿಎಸ್ ಪಕ್ಷದ ಚಿಹ್ನೆ ಎಂದರೆ ಅಲರ್ಜಿ. ಜೆಡಿಎಸ್ ಚಿಹ್ನೆ ಇರುವ ಕಾರ್ಯಕ್ರಮಕ್ಕೆ ಅವರು ಬರಲು ಸಾಧ್ಯವಾಗುತ್ತದೆಯೇ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಹೊಳೆನರಸೀಪುರ ತಾಲ್ಲೂಕಿನ ನಗರ್ತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ವರ್ಷದಿಂದ ಶಿವಲಿಂಗೇಗೌಡರಿಗೆ ಜೆಡಿಎಸ್ ಚಿಹ್ನೆ ಅಲರ್ಜಿಯಾಗಿದ್ದು, ಕಾರ್ಯಕ್ರಮಕ್ಕೆ ಅವರನ್ನು ಕರೆಯುವ ಅವಶ್ಯಕತೆ ಏನಿದೆ? ಅರಸೀಕೆರೆಯಲ್ಲಿ ಹಲವು ಕಾರ್ಯಕ್ರಮ ಮಾಡಿದ್ದರೂ ನಮ್ಮನ್ನು ಕರೆಯಲಿಲ್ಲ. ಅಲ್ಲದೆ ಪಕ್ಷದ ಚಿಹ್ನೆಯಡಿ ಕಾರ್ಯಕ್ರಮ ಮಾಡಿಲಿಲ್ಲ ಎಂದು ಆರೋಪಿಸಿದರು.

ಹೆಂಡತಿ ಮೇಲಿನ ಕೋಪಕ್ಕೆ ಮಕ್ಕಳಿಬ್ಬರ ಕತ್ತು ಹಿಸುಕಿ ಕೊಂದ ಪಾಪಿ ತಂದೆ

ಪಂಚರತ್ನ ಯಾತ್ರೆ ಕೆಲ ತಿಂಗಳ ಹಿಂದೆಯೇ ಆರಂಭಿಸಲಾಯಿತು. ಮುಂದೂಡಿ ಎಂದು ಅವರು ದೂರವಾಣಿ ಕರೆ ಮಾಡಿದ್ದರು. ಎಲ್ಲಿಯವರೆಗೆ ಮುಂದೂಡುವುದು, ಚುನಾವಣೆ ಘೋಷಣೆಯಾಗುವವರೆಗೂ ಮುಂದುವರೆಯಬೇಕೆ? ಎಲ್ಲವನ್ನು ಸರಿ ಮಾಡಿಕೊಂಡು ಕಾಂಗ್ರೆಸ್ ಸೇರುವ ಯೋಜನೆಯೇ ಎಂದು ಕಿಡಿಕಾರಿದರು.

ರೈತರ ಸರ್ಕಾರ ಅಧಿಕಾರಕ್ಕೆ:
ನಗರ್ತಿಯಲ್ಲಿ ಭೈರವೇಶ್ವರ ಹಾಗೂ ಈಶ್ವರ ದೇವಸ್ಥಾನದ ಕುಂಭಾಬಿಷೇಕ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರೋಗ್ಯದ ಸಮಸ್ಯೆಯಿಂದಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಬಂದಿಲ್ಲ. ನಿಮ್ಮ ಕುಟುಂಬದ ಮಕ್ಕಳ ರೀತಿ ನಮ್ಮನ್ನು ಬೆಳೆಸಿದ್ದು, ನಮ್ಮ ಉಸಿರು ಇರುವ ತನಕ ನಿಮ್ಮ ಕಷ್ಟಕ್ಕೆ ಆಗುತ್ತೇವೆ ಎಂದು ಹೇಳಿದರು.

ದೇವೇಗೌಡರು ಹಳ್ಳಿಯಲ್ಲಿ ಹುಟ್ಟಿ ದೆಹಲಿಗೆ ಹೋಗಬೇಕಾದರೆ ಆಸ್ತಿ ಮಾಡಲಿಲ್ಲ. ನಾವು ಆಸ್ತಿ ಮಾಡಲಿಲ್ಲ. ರೈತರ ಸರ್ಕಾರವನ್ನು ನೋಡಬೇಕು ಎಂಬುದು ದೇವೇಗೌಡರ ಹಂಬಲವಾಗಿದೆ. ಹೀಗಾಗಿ ಜೆಡಿಎಸ್ ಅಧಿಕಾರಕ್ಕೆ ತರಲು ಹೋರಾಟ ಮಾಡುತ್ತಿದ್ದೇವೆ ಎಂದರು.

ರಾಜ್ಯಪಾಲರ ನಿರ್ಗಮನವನ್ನು ಸ್ವಾಗತಿಸಿ ಮಹಾರಾಷ್ಟ್ರ ನಾಯಕರು

ದೈವಾನುಗ್ರಹದಿಂದ ಹಾಗೂ ತಂದೆ-ತಾಯಿ ಪುಣ್ಯದಿಂದ ಎರಡು ಬಾರಿ ಮುಖ್ಯಮಂತ್ರಿಯಾಗಿ ಜನರ ನಿರೀಕ್ಷೆಗೆ ಅನುಗುಣವಾಗಿ ಕೆಲಸ ಮಾಡಿದ್ದೇನೆ. ಸರಾಯಿ ಹಾಗೂ ಲಾಟರಿ ನಿಷೇಧವನ್ನು ಮಾಡಲಾಗಿತ್ತು. ನಾನು ಮುಖ್ಯಮಂತ್ರಿ ಯಾಗಬೇಕೆಂದು ಜೆಡಿಎಸ್‍ಅನ್ನು ಅಧಿಕಾರಕ್ಕೆ ತರಬೇಕೆಂದು ಮನವಿ ಮಾಡುತ್ತಿಲ್ಲ. ನಾಡಿನ ಜನರ ಸಮಸ್ಯೆ ಪರಿಹಾರಕ್ಕಾಗಿ ಜೆಡಿಎಸ್‍ನ್ನು ಅಧಿಕಾರಕ್ಕೆ ತರಬೇಕಿದೆ ಎಂದು ಹೇಳಿದರು.

ಮಾಜಿ ಸಚಿವ ಎಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಹಾಗೂ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರು ಒಟ್ಟಿಗೆ ವೇದಿಕೆಯಲ್ಲಿ ಇದದ್ದು ವಿಶೇಷವಾಗಿತ್ತು.

Shivalinge Gowda, HD Kumaraswamy, JDS, Hassan,

Articles You Might Like

Share This Article