ಮುಸ್ಲಿಂ ಮುಖಂಡರೆ ಯುವಕರಿಗೆ ಬುದ್ಧಿ ಹೇಳಿ : ಈಶ್ವರಪ್ಪ ವಾರ್ನಿಂಗ್

Social Share

ಬೆಂಗಳೂರು,ಆ.16- ಹಿಂದೂ ಸಮಾಜ ಸಿಡಿದೆದ್ದರೆ ಮುಸ್ಲಿಮರು ಎಲ್ಲಿರುತ್ತಾರೆ ಎಂಬುದನ್ನು ನೋಡಿಕೊಳ್ಳಬೇಕು ಎಂದಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಹಿಂದೂ ಸಮಾಜ ಎದ್ದರೆ ಮುಸ್ಲಿಂರ ಕಥೆ ಏನಾಗುತ್ತದೆ? ಅದಕ್ಕಾಗಿ ಶಿವಮೊಗ್ಗದ ಮುಸ್ಲಿಂ ಮುಖಂಡರು ನಿಮ್ಮ ಯುವಕರಿಗೆ ಬುದ್ಧಿ ಹೇಳಿ. ಇಲ್ಲವಾದಲ್ಲಿ ಸರ್ಕಾರದಿಂದಲೇ ಅವರ ವಿರುದ್ಧ ಕ್ರಮ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮುಸ್ಲಿಂ ಮುಖಂಡರಲ್ಲಿ ಮನವಿ ಮಾಡುತ್ತೇನೆ. ಕೆಲವು ಯುವಕರು ದಾರಿ ತಪ್ಪಿ ಇಂತಹ ದುಷ್ಕøತ್ಯ ನಡೆಸುತ್ತಾರೆ. ಕೂಡಲೇ ಹಿರಿಯರು ಇಂಥವರನ್ನು ಕರೆದು ಬುದ್ದಿ ಹೇಳಬೇಕು. ಇಲ್ಲದಿದ್ದರೆ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ. ಯಾರು ಏನೂ ಬೇಕಾದರೂ ಮಾಡಬಹುದೆಂಬ ಪರಿಸ್ಥಿತಿ ನಿರ್ಮಾಣವಾಗಬಹುದೆಂದು ಆತಂಕ ವ್ಯಕ್ತಪಡಿಸಿದರು.

ಹಿಂದೂಗಳ ಗಣಪತಿ ಉತ್ಸವದ ಅಡ್ಡ ಬಂದರೆ ಸರಿ ಇರಲ್ಲ. ನೀವು ನಿಮ್ಮ ಹಬ್ಬ ಮಾಡುವುದಿಲ್ಲವೇ? ನಾವು ಬೆಂಬಲ ಕೊಡುವುದಿಲ್ಲವೇ? ನಮ್ಮ ಹಬ್ಬದ ತಂಟೆಗೆ ಬರಬೇಡಿ. ಮುಸಲ್ಮಾನ ಗೂಂಡಾಗಳ ಮನಸ್ಥಿತಿ ಇನ್ನೂ ಬದಲಾಗಿಲ್ಲ. ಹಿಂದೂಗಳ ಮೇಲಿನ ಅವರ ಭಾವನೆ ಇನ್ನೂ ಬದಲಾಗಿಲ್ಲ. ವರ ಚಟುವಟಿಕೆ ಜಾಸ್ತಿಯಾಗಿದೆ, ಹೀಗಾಗಿ ಕೊಲೆ, ಗಲಭೆ ಹೆಚ್ಚಾಗಿದೆ. ನಮ್ಮ ಸರ್ಕಾರ ಶಾಂತಿ ಕಾಪಾಡಲು ಎಲ್ಲ ಪ್ರಯತ್ನ ಮಾಡುತ್ತಿದೆ ಎಂದರು.

ಶಿವಮೊಗ್ಗದಲ್ಲಿ ಫ್ಲೆಕ್ಸ್ ಹಾಕುವ ವಿಚಾರದಲ್ಲಿ ಯುವಕ ಪ್ರೇಮ್ ಸಿಂಗ್‍ಗೆ ಮುಸ್ಲಿಂ ಗೂಂಡಾಗಳೇ ಚಾಕು ಇರಿದಿದ್ದಾರೆ. ಫ್ಲೆಕ್ಸ್ ಹಾಕುವ ವಿಚಾರದಲ್ಲಿ ಯುವಕರ ನಡುವೆ ಗಲಭೆ ಉಂಟಾಗಿತ್ತು. ಅಮಾಯಕ ಪ್ರೇಮ್ ಸಿಂಗ್‍ಗೆ ರ್ನಿಷ್ಟ ಸಂಘಟನೆಯೊಂದರ ಮುಸ್ಲಿಂ ಗೂಂಡಾಗಳೇ ಚಾಕು ಇರಿದಿದ್ದಾರೆ ಎಂದು ದೂರಿದರು.

ಈ ಘಟನೆಯಲ್ಲಿ ಕಾಂಗ್ರೆಸ್ ಪಕ್ಷದ ಕುಮ್ಮಕ್ಕು ಇದೆ. ಅವರ ಬೆಂಬಲದಿಂದಲೇ ಈ ಗೂಂಡಾಗಳು ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಯಾವುದೇ ಸಂಘಟನೆ ಇರಲಿ ಅಥವಾ ಯಾರೇ ಇರಲಿ ಸುಮ್ಮನೆ ಬಿಡಬಾರದು ಎಂದು ಒತ್ತಾಯಿಸಿದರು.

ಇದರಲ್ಲಿ ಕಾಂಗ್ರೆಸ್ ಮೇಲೆ ನಾನು ನೇರ ಆರೋಪ ಮಾಡ್ತಿದ್ದೇನೆ. ಕಾಂಗ್ರೆಸ್ ಕಾಪೆರ್ರೆ ಟರ್‍ರ ಗಂಡನಿಂದ ಈ ಘಟನೆ ನಡೆದಿದೆ. ಇವನ ವಿರುದ್ಧ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕ್ರಮ ತೆಗೆದುಕೊಳ್ಳಬೇಕು. ಈ ಘಟನೆಯಿಂದ ಜಿಲ್ಲೆಯಲ್ಲಿ ಪ್ರಕ್ಷುಬ್ಧ ವಾತವರಣ ನಿರ್ಮಾಣವಾಗಿದೆ ಎಂದು ಆಕ್ರೋಶ ಹೊರ ಹಾಕಿದರು.

ಹೊಟ್ಟೆಗೆ ಚಾಕು ಬಿದ್ದಿರುವುದರಿಂದ ನರನಾಡಿಗಳು ತುಂಡರಿಸಿವೆ. ಬದುಕುಳಿಯುವುದು ಕಷ್ಟ ಎನ್ನಲಾಗುತ್ತಿದೆ. ಪೊಲೀಸರು ಬಹಳ ಶ್ರಮಹಾಕಿ ಆರೋಪಿಗಳನ್ನು ಬಂಧಿಸುವ ವೇಳೆ ಹಲ್ಲೆ ನಡೆಸಲು ಯತ್ನಿಸಿದಾಗ ಗುಂಡು ಹಾರಿಸಿದ್ದಾರೆ. ಇಬ್ಬರನ್ನ ಬಂಧಿಸಿದ್ದಾರೆ. ಎಲ್ಲಾ ಅಂಶಗಳನ್ನ ಸಿಎಂಗೆ ಹೇಳಿದ್ದೇನೆ. ಹಿಂದೂಗಳನ್ನ ಕೊಲೆ ಮಾಡುವ ಎಸ್‍ಡಿಪಿಐ ಮನಸ್ಥಿತಿ ಬದಲಾಗಿಲ್ಲ. ಕೇರಳದಿಂದಲೂ ಹೊರಗಡೆಯಿಂದ ಬಂದವರಿಂದಲೂ ಈ ರೀತಿ ಆಗುತ್ತಿದೆ ಎಂದು ಆರೋಪಿಸಿದರು.

ನಮ್ಮ ಶಿವಮೊಗ್ಗದವರು ಶಾಂತಿಪ್ರಿಯರು. ಕೊಲೆ ಮಾಡುವಂತಹ ಬೆಳವಣಿಗೆ ಇರಲಿ, ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಮಾನ ಮಾಡುವುದಾಗಲಿ ಆಗಬಾರದು. ಕಠಿಣ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದೇನೆ ಎಂದರು.

ಹಿರಿಯರು ಬುದ್ಧಿ ಹೇಳಲಿ ದೇಶ ವಿಭಜನೆ ಮಾಡಿದ್ದು ನೆಹರು: ಇದೇ ವೇಳೆ ಸರ್ಕಾರದ ಜಾಹೀರಾತಿನಲ್ಲಿ ನೆಹರೂ ಭಾವಚಿತ್ರ ಮುದ್ರಣಗೊಳ್ಳದಿರುವ ಬಗ್ಗೆ ಪ್ರತಿಕ್ರಿಯಿಸಿದ ಕೆ.ಎಸ್.ಈಶ್ವರಪ್ಪ, ದೇಶ ವಿಭಜನೆ ಮಾಡಿದ್ದು ನೆಹರು. ಡಿಕೆಶಿ, ಸಿದ್ದರಾಮಯ್ಯ ಗೆ ಸರ್ದಾರ್ ಪಟೇಲ್, ಭಗತ್ ಸಿಂಗ್ ಬೇಕಿಲ್ಲ. ದೇಶ ತುಂಡು ಮಾಡಿದವರು ಅವರಿಗೆ ಬೇಕು. ಹಿಂದಿನ ಕಾಂಗ್ರೆಸ್ ನಿಂದ ಸ್ವಾತಂತ್ರ್ಯ ಬಂತು. ಆ ಹಿಂದಿನ ಕಾಂಗ್ರೆಸ್?ಗೆ ಈಗಿನವರು ಜಾತಿ ಲೇಪನ ಹಚ್ಚಿದ್ದಾರೆ. ಕುರುಬರಿಗೆ, ಒಕ್ಕಲಿಗರಿಗೆ ಜಾತಿ ಲೇಪನ ಹಚ್ಚಿದ್ದಾರೆ ಎಂದು ಕಿಡಿಕಾರಿದರು.

ನಮ್ಮ ಹಬ್ಬದ ತಂಟೆಗೆ ಬರಬೇಡಿ: ಫ್ಲೆಕ್ಸ್ ಹಾಕುವ ವಿಚಾರದಲ್ಲಿ ಗಲಭೆ ಉಂಟಾದಾಗ ಪೊಲೀಸರು ಮಧ್ಯಪ್ರವೇಶಿಸಿ ಸಮಾಧಾನಪಡಿಸಿ ಕಳುಹಿಸಿದ್ದರು. ಏನೂ ಮಾಡದ ಪ್ರೇಮ್‍ಸಿಂಗ್ ಆ ಸ್ಥಳಕ್ಕೆ ಬಂದಾಗ ಕೆಲವು ಗೂಂಡಾಗಳು ಚಾಕು ಇರಿದಿದ್ದಾರೆ. 10 ನಿಮಿಷ ತಡವಾಗಿದ್ದರೆ ಆತ ಬದುಕುತ್ತಿರಲಿಲ್ಲ. ದೇವರು ದೊಡ್ಡವನು ಸದ್ಯ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಹೇಳಿದರು.

ಇದಕ್ಕೂ ಮುನ್ನ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಬೊಮ್ಮಾಯಿ ಅವರ ನಿವಾಸಕ್ಕೆ ಆಗಮಿಸಿದ್ದ ಈಶ್ವರಪ್ಪ, ಸುಮಾರು 10 ನಿಮಿಷಕ್ಕೂ ಹೆಚ್ಚು ಕಾಲ ಚರ್ಚೆ ನಡೆಸಿ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ಪ್ರಮುಖ ಆರೋಪಿಯೊಬ್ಬನು ಈ ಹಿಂದೆ ಗಣಪತಿ ಉತ್ಸವದ ಸಂದರ್ಭದಲ್ಲಿ ಮೆರವಣಿಗೆ ನಡೆಯುತ್ತಿದ್ದ ವೇಳೆ ಚಪ್ಪಲಿ ಎಸೆದು ಕೋಮುಗಲಭೆ ಸೃಷ್ಟಿಸಿದ್ದ. ಇಂಥವರನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

ಈ ಹಿಂದೆ ಭಜರಂಗದಳದ ಕಾರ್ಯಕರ್ತ ಹರ್ಷನನ್ನು ಕೊಲೆ ಮಾಡಿದ್ದ ದುಷ್ಕರ್ಮಿಗಳೇ ಈಗ ಪ್ರೇಮ್ ಸಿಂಗ್ ಎಂಬ ಯುವಕನಿಗೆ ಚಾಕು ಇರಿದಿದ್ದಾರೆ. ರ್ನಿಧಿಷ್ಟ ಸಂಘಟನೆಯೊಂದರ ಕಾರ್ಯಕರ್ತರೇ ಪದೇ ಪದೇ ಇಂತಹ ಕೃತ್ಯಗಳನ್ನು ನಡೆಸುತ್ತಾರೆ. ಇವರನ್ನು ಸದೆಬಡೆಯದಿದ್ದರೆ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ ಎಂದು ಸಿಎಂಗೆ ಈಶ್ವರಪ್ಪ ಮನವರಿಕೆ ಮಾಡಿಕೊಟ್ಟರು.

Articles You Might Like

Share This Article