ಶಿವಮೊಗ್ಗ.ಜುಲೈ 14- ಹಾಡಹಗಲೇ ರೌಡಿ ಶೀಟರ್‍ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ವಿನೋಬನಗರದಲ್ಲಿ ಇಂದು ಬೆಳಗ್ಗೆ ನಡೆದಿದೆ.
ಇಂದು ಬೆಳಗ್ಗೆ 10.30ರ ಸಂದರ್ಭದಲ್ಲಿ ರಸ್ತೆಯಲ್ಲಿ ನಡೆದುಹೊಗುತ್ತಿದ್ದ ರೌಡಿ ಶೀಟರ್ ಹಂದಿ ಹಣಿ ಮೇಲೆ ಇನೋವಾ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅಡ್ಡಗಟ್ಟಿ ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಸಾಗರ ರಸ್ತೆಯಲ್ಲಿರುವ ನಿವೇಶನ ಒಂದರ ವಿವಾದಕ್ಕೆ ಸಂಬಂಧಿಸಿದಂತೆ ಈ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ಸುಮಾರು ನಾಲ್ಕರಿಂದ ಐದು ದುಷ್ಕರ್ಮಿಗಳು ಈ ಕೃತ್ಯ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರೌಡಿ ಲವ ,ಕುಶ ಹತ್ಯೆ ಪ್ರಕರಣದ ಮೂಲಕ ಹಂದಿ ಅಣ್ಣಿ ಪಾತಕ ಲೋಕಕ್ಕೆ ಪರಿಚಿತನಾಗಿದ್ದ.
ಹಲವು ಹತ್ಯೆ ಮತ್ತು ರೌಡಸಂ ಚಟುವಟಿಕೆಯಲ್ಲಿ ಭಾಗಿಯಾಗಿದ್ದಈತನನ್ನು ಗಡಿಪಾರು ಮಾಡಲು ಆದೇಶವಾಹಿತ್ತು. ಆದರೆ ಅದಕ್ಕೆ ಆತ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದ.