ಶಿವಮೊಗ್ಗ,ಡಿ.14- ಇಡಿ ವಿಶ್ವ ಆಧುನಿಕತೆಯಲ್ಲಿ ನಾಗಾಲೋಟದಿಂದ ಸಾಗುತ್ತಿದ್ದರೂ ಹಲವಾರು ಜೀವಂತ ಸಮಸ್ಯೆಗಳಿಗೆ ಇನ್ನು ಮುಕ್ತಿ ಸಿಕ್ಕಿಲ್ಲ ಎನ್ನುವುದಕ್ಕೆ ಶಿವಮೊಗ್ಗ ಜಿಲ್ಲೇಯ ಈ ಕುಗ್ರಾಮವೇ ಸಾಕ್ಷಿ.
ಸಾಗರದಿಂದ 60 ಕಿ.ಮೀ ದೂರದಲ್ಲಿರುವ ಬರುವೆ ಗ್ರಾಮದ ಸಮೀಪದ ಎಲಿಗೆ ಎಂಬ ಕುಗ್ರಾಮದಲ್ಲಿರುವ ಶಾಲಾ ಮಕ್ಕಳಿಗೆ ಸೀರೆ ಅಡ್ಡಲಾಗಿ ಕಟ್ಟಿರುವ ಪ್ರದೇಶವೇ ಶೌಚಾಲಯವಾಗಿ ಪರಿವರ್ತನೆಯಾಗಿದೆ.
ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಏಳು ವಿದ್ಯಾರ್ಥಿನಿಯರು ಹಾಗೂ ಆರು ವಿದ್ಯಾರ್ಥಿಗಳು ಬಹಿರ್ದೇಷೆಗೆ ಹೋಗಬೇಕಾದರೆ ಸೀರೆ ಅಡ್ಡ ಕಟ್ಟಲಾದ ಪ್ರದೇಶದಲ್ಲೆ ತಮ್ಮ ಬಾಧೆ ತೀರಿಸಿಕೊಳ್ಳುವಂತಹ ಸನ್ನಿವೇಶ ಎದುರಾಗಿದೆ.
ಅದರಲ್ಲೂ ವಿದ್ಯಾರ್ಥಿಗಳು ತೆರೆದ ತೊಟ್ಟಿಯಲ್ಲಿರುವ ನೀರನ್ನು ಮಗ್‍ನಲ್ಲಿ ತೆಗೆದುಕೊಂಡು ಬಹಿರ್ದೇಷೆಗೆ ಹೋಗುವಂತಹ ಪರಿಸ್ಥಿತಿ ಇದ್ದರೂ ಜನಪ್ರತಿನಿಧಿಗಳಾಗಳಿ, ಅಧಿಕಾರಿಗಳಾಗಲಿ ಸಮಸ್ಯೆ ಬಗೆಹರಿಸಲು ಮನಸ್ಸು ಮಾಡಿಲ್ಲ.
ನೀರಾವರಿ ಯೋಜನೆಗಳಲ್ಲಿ ನ್ಯಾಯಕ್ಕಾಗಿ ಮೋದಿ ಬಳಿ ಎಚ್‍ಡಿಡಿ ಮನವಿ
ಹಲವು ವರ್ಷಗಳ ಹಿಂದೆ ಶಾಲಾ ಕಟ್ಟಡದಲ್ಲಿದ್ದ ಶೌಚಾಲಯ ಹಾಳಾಗಿದೆ. ಹಾಳಾಗಿರುವ ಶೌಚಲಯ ನಿರುಪಯುಕ್ತವಾಗಿದೆ. ಹೀಗಾಗಿ ಇಲ್ಲಿನ ವಿದ್ಯಾರ್ಥಿಗಳು ಸೀರೆ ಅಡ್ಡ ಕಟ್ಟಿದ ನಿರ್ಜನ ಪ್ರದೇಶದಲ್ಲಿ ಶೌಚಕ್ಕೆ ಹೋಗುವಂತಹ ಸನ್ನಿವೇಶ ನಿರ್ಮಾಣವಾಗಿರುವುದು ಇದೀಗ ಎಲ್ಲೇಡೆ ವೈರಲ್ ಆಗುವ ಮೂಲಕ ದೇಶದ ಗಮನ ಸೆಳೆಯುತ್ತಿದೆ.
ಕರ್ನಾಟಕದ ರಾಜಧಾನಿಯಾಗಿರುವ ಬೆಂಗಳೂರು ವಿಶ್ವದ ಸಿಲಿಕಾನ್ ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರೂ ಇಂತಹ ಹೈಟೆಕ್ ಸಿಟಿಯಿಂದ ಕೇವಲ ನೂರಾರು ಕಿ.ಮೀ ದೂರದಲ್ಲಿರುವ ಶಿವಮೊಗ್ಗದಲ್ಲಿ ಇಂತಹ ಪರಿಸ್ಥಿತಿ ಇರುವುದು ನಾಚಿಕೆಗೇಡಿನ ಸಂಗತಿಯಾಗಿದೆ.
ರಾಹುಲ್‍ಗೆ ಸಾಥ್ ನೀಡಿದ RBI ಮಾಜಿ ಗವರ್ನರ್ ರಘುರಾಮ್ ರಾಜನ್
ಸೀರೆ ಅಡ್ಡಲಾಗಿ ಕಟ್ಟಿರುವ ಶೌಚಾಲಯದ ಚಿತ್ರ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಶಿವಮೊಗ್ಗದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪರಮೇಶ್ವರಪ್ಪ ಅವರು ಶಾಲೆಯ ದುಸ್ಥಿತಿ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.
ಹಾಳಾಗಿ ಹೋಗಿರುವ ಕಟ್ಟಡವನ್ನು ದುರಸ್ತಿಪಡಿಸದೇ ವರ್ಷಗಳೇ ಕಳೆದಿರುವ ಹಿನ್ನೆಲೆಯಲ್ಲಿ ಬಯಲು ಶೌಚಾಲಯದಲೇ ಸೀರೆ ಮರೆಯಲ್ಲಿ ಬಹಿರ್ದೇಷೆಗೆ ಹೋಗುವಂತೆ ಶಾಲಾ ಅಧಿಕಾರಿಗಳಗೆ ಮಕ್ಕಳಿಗೆ ಸೂಚಿಸಿದ್ದಾರೆ. ಈ ಕುರಿತು ಹಲವು ಬಾರಿ ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆ ಗಮನಕ್ಕೆ ತಂದರೂ ಪರಿಸ್ಥಿತಿ ಬದಲಾಗಿಲ್ಲ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಗ್ರಾಮಸ್ಥರು.
#Shivamogga, #School, #children, #opentoilets,