ಮುರುಘಾ ಶ್ರೀಗಳ ಮೇಲೆ ಸುಳ್ಳು ಆರೋಪ: ಬಿಎಸ್‌ವೈ

Social Share

ಬೆಂಗಳೂರು,ಆ.28- ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪಕ್ಕೆ ತುತ್ತಾಗಿರುವ ಚಿತ್ರದುರ್ಗದ ಮುರುಘಾ ಶ್ರೀಗಳ ವಿರುದ್ಧ ಸುಳ್ಳು ಆರೋಪ ದಾಖಲಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುರುಘಾ ಮಠದ ಬಗ್ಗೆ ಗೊತ್ತಿರುವ ಯಾರೂ ಕೂಡ ಶ್ರೀಗಳ ಬಗ್ಗೆ ಇಂತಹ ಆರೋಪ ಮಾಡಲು ಸಾಧ್ಯವೇ ಇಲ್ಲ. ಇದು ವ್ಯವಸ್ಥಿತ ಷಡ್ಯಂತರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಹಲವು ವರ್ಷಗಳಿಂದ ಶ್ರೀಗಳು ಶಿಕ್ಷಣ, ಆರೋಗ್ಯ, ಧಾರ್ಮಿಕ ಸೇರಿದಂತೆ ವಿವಿಧ ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಎಲ್ಲರ ಪ್ರೀತಿಪಾತ್ರಕ್ಕೆ ಪಾತ್ರವಾಗಿದ್ದಾರೆ. ಬಾಲಕಿಯರು ಮಾಡಿರುವ ಆರೋಪದಲ್ಲಿ ಎಳ್ಳಷ್ಟು ಸತ್ಯವಿಲ್ಲ ಎಂದು ಪುನರುಚ್ಚರಿಸಿದರು.

ಈ ಪ್ರಕರಣದಲ್ಲಿ ಶ್ರೀಗಳು ಯಾವುದೇ ರೀತಿಯ ತಪ್ಪು ಮಾಡಿಲ್ಲ. ನನಗೆ ಈಗಲೂ ಕೂಡ ವಿಶ್ವಾಸವಿದೆ. ಅವರು ಆರೋಪದಿಂದ ಮುಕ್ತರಾಗಿ ಬರಲಿದ್ದಾರೆ ಎಂದರು.

Articles You Might Like

Share This Article