ಕೊಪ್ಪ,ಡಿ.5-ಮಲೆನಾಡಿಗರಿಗೆ ಬಿಡುವುದಿಲ್ಲದ ಕೆಲಸದ ಸಮಯ ಇದರ ನಡುವೆಯೂ ಕಲಾಭಿಮಾನಿಗಳ ಜನಸಾಗರವೇ ಹರಿದುಬಂದು ಶಿವದೂತೆ ಗುಳಿಗೆ ನಾಟಕ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಅವರು ತಿಳಿಸಿದ್ದಾರೆ.
ಸಿದ್ರಾಮುಲ್ಲಾಖಾನ್ ಅಲ್ಲದೆ ಮತ್ತಿನ್ನೇನು : ಬಿಜೆಪಿ
ರಂಗ ಸಿಂಗಾರದಿಂದ ಕೊಪ್ಪದ ಲಾಲ್‍ಬಹುದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ ವಿಜಯ್‍ಕುಮಾರ್ ಕೊಡಿಯಲ್ ಬೈಲ್ ನಿರ್ದೇಶನದಲ್ಲಿ ಕಲಾ ಸಂಗಮ ಕಲಾವಿದರಿಂದ ಮೂಡಿಬಂದ ಶಿವದೂತೆ ಗುಳಿಗೆ ತುಳು ನಾಟಕ ಪ್ರದರ್ಶನದಲ್ಲಿ ಪಾಲ್ಗೊಂಡು ನೆರೆದಿದ್ದ ಜನಸ್ತೋಮ ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.
ಆಸ್ತಿ ಕಬಳಿಕೆಗೆ ಯತ್ನ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಪತಿ ವಿರುದ್ಧ ದೂರು
ಸಾಮಾನ್ಯವಾಗಿ ಈ ಸಮಯ ಅಡಿಕೆ ಕೊಯ್ಲು ಆಗಿದ್ದು ಈ ವೇಳೆ ಮಲೆನಾಡಿನ ಜನರಿಗೆ ಬಿಡುವಿಲ್ಲದ ಕೆಲಸವಾಗಿರುತ್ತದೆ ಇದರ ನಡುವೆಯೂ ನಾಟಕ ವೀಕ್ಷಣೆಗೆ ಜನಸಾಗರ ಹರಿದು ಬಂದಿದ್ದು ನಿಮ್ಮ ಪ್ರೀತಿ, ಸಹಕಾರ ಮೆಚ್ಚುವಂತಹದ್ದು ಎಂದರು.

ಕ್ರಿಕೆಟ್ ಬೆಟ್ಟಿಂಗ್ : ಮೂವರು ಬುಕ್ಕಿಗಳ ಸೆರೆ, 10.5 ಲಕ್ಷ ನಗದು, 3 ಮೊಬೈಲ್‍ಗಳ ವಶ
ಸುಮಾರು 8ರಿಂದ 10 ಸಾವಿರ ಜನರು ಪಾಲ್ಗೊಂಡು ನಾಟಕದ ಮುಖ್ಯ ಪಾತ್ರ ವಹಿಸಿದ್ದ ಕಾಂತಾರಾ ಚಿತ್ರದ ಗುರುವ ಪಾತ್ರದ ಸ್ವರಾಜ್ ಶೆಟ್ಟಿ ಬರುತ್ತಿದಂತೆ ಜನರು ಶಿಳ್ಳೆ, ಚಪ್ಪಾಳೆ ಮೂಲಕ ಹುರಿದುಬಂಸಿದರು.

ಅಂಜನಾದ್ರಿ ಬೆಟ್ಟದಲ್ಲಿ ಹನುಮ ಮಾಲೆ ವಿಸರ್ಜನೆ
ಇದೇ ವೇಳೆ ನಟ ಪುನೀತ್ ರಾಜ್‍ಕುಮಾರ್ ಅವರಿಗೆ ಮಲೆನಾಡಿಗರು ಗೌರವ ಸಲ್ಲಿಸಿದರು. ಮುಖಂಡರಾದ ಸುೀಧಿರ್ ಕುಮಾರ್ ಮುರೋಳ್ಳಿ, ಅನಿಲ್ ಹೊಸಕೊಪ್ಪ, ನುಗ್ಗಿ ಮಂಜುನಾಥ್, ಪ್ರಶಾಂತ್, ಆನಂದ್, ನಾಗೇಶ್, ಅಮೀನ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

#ShivduteGulige, #Drama, #Koppa,