ಗ್ಯಾನವಾಪಿ ಮಸೀದಿ ಪ್ರಕರಣ ವಿಚಾರಣೆ ನ.14ಕ್ಕೆ ಮುಂದೂಡಿಕೆ

Social Share

ವಾರಣಾಸಿ, ನ.8- ಉತ್ತರ ಪ್ರದೇಶದ ವಾರಾಣಾಸಿ ಫಾಸ್ಟ್ ಟ್ರಾಕ್ ಕೋರ್ಟ್ ಗ್ಯಾನವಾಪಿ ಮಸೀದಿಯ ಪ್ರಕರಣದ ವಿಚಾರಣೆಯನ್ನು ನವೆಂಬರ್ 14ಕ್ಕೆ ಮುಂದೂಡಿದೆ. ದೇಶದ ಗಮನ ಸೆಳೆದಿರುವ ಗ್ಯಾನವಾಪಿ ಮಸೀದಿ ಪ್ರಕರಣದಲ್ಲಿ ಅರ್ಜಿದಾರರು ಮೂರು ಬೇಡಿಕೆಗಳನ್ನು ಮುಂದಿಟ್ಟು ಅರ್ಜಿ ಸಲ್ಲಿಸಿದ್ದಾರೆ.

ಬೇಡಿಕೆಯಲ್ಲಿ ಮೊದಲನೆಯದು ಮಸೀದಿಯಲ್ಲಿರುವ ಸ್ವಯಂಭು ಜ್ಯೋರ್ತಿಲಿಂಗ ಭಗವಾನ್ ವಿಶ್ವೇಶ್ವರನಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು. ಒಟ್ಟಾರೆ ಮಸೀದಿಯನ್ನು ಹಿಂದುಗಳ ವಶಕ್ಕೆ ನೀಡಬೇಕು, ಮುಸ್ಲಿಂಮರಿಗೆ ಮಸೀದಿ ಪ್ರವೇಶವನ್ನು ನಿರ್ಬಂಧಿಸಬೇಕು ಎಂಬುದು ಬೇಡಿಕೆಳಾಗಿವೆ.

ಸಿದ್ದರಾಮಯ್ಯನವರೇ ನಿಮ್ಮ ಕ್ಷೇತ್ರ ಅಂತಿಮಗೊಳಿಸಿ : ಸಿಎಂ ಬೊಮ್ಮಾಯಿ

ಈ ಮೂರು ಮನವಿಗಳ ಕುರಿತು ಇಂದು ತೀರ್ಪು ಪ್ರಕಟಗೊಳ್ಳುವ ಸಾಧ್ಯತೆ ಇತ್ತು. ಆದರೆ ನ್ಯಾಯಾೀಧಿಶರ ಗೈರು ಹಾಜರಿಯಿಂದ ಪ್ರಕರಣದ ನವೆಂಬರ್ 14ಕ್ಕೆ ಮುಂದೂಡಿಕೆಯಾಗಿದೆ. ಬಹುಶಃ ಅಂದು ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ.

ಪ್ರಸ್ತುತ ಮುಸ್ಲಿಂಮರಿಗೆ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಹಿಂದಿನ ವಿಚಾರಣೆಯಲ್ಲಿ ಅಸ್ತಿತ್ವದಲ್ಲಿದೆ ಎಂದು ಹೇಳಲಾದ ಶಿವಲಿಂಗದ ವೈಜ್ಞಾನಿಕ ಪರಿಶೀಲನೆಗೆ ನ್ಯಾಯಾಲಯ ಅನುಮತಿ ನಿರಾಕರಿಸಿದೆ.

ಪ್ರೀತಿಸಿದವಳಿಗಾಗಿ ಲಿಂಗ ಬದಲಾವಣೆ ಮಾಡಿಸಿಕೊಂಡ ದೈಹಿಕ ಶಿಕ್ಷಕಿ

ಹಿಂದು ಸಮುದಾಯದ ಅರ್ಜಿದಾರರು ಮಸೀದಿಯ ಒಳಗೆ ಇರುವ ಶಿವಲಿಂಗವನ್ನು ವೈಜ್ಞಾನಿಕವಾಗಿ ಕಾರ್ಬನ್ ಡೆಟಿಂಗ್ ಸ್ವರೂಪದ ಪರಿಶೀಲನೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದರು. ಆದರೆ ಪ್ರತಿವಾದಿಗಳು ವಾದ ಮಂಡಿಸಿ, ಕಲ್ಲು ಕಾರ್ಬನ್ ಡೆಟಿಂಗ್ ಅನ್ನು ಹೀರಿಕೊಳ್ಳುವುದಿಲ್ಲ. ಹಾಗಾಗಿ ಈ ಪರೀಕ್ಷೆ ಸಾಧುವಲ್ಲ ಎಂದು ವಾದಿಸಿದ್ದರು. ಅಂತಿಮವಾಗಿ ನ್ಯಾಯಾಲಯ ಕಾರ್ಬನ್ ಡೆಟಿಂಗ್ ಪರೀಕ್ಷೆಗೆ ಅನುಮತಿ ನಿರಾಕರಿಸಿದೆ.

ಲಿಂಗ ಸ್ವರೂಪದ ಆಕೃತಿಯನ್ನು ಭಗ್ನಗೊಳಿಸುವುದರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಲಿದೆ. ದೈವಿಸ್ವರೂಪದ ಆಕೃತಿಗಳನ್ನು ಭಗ್ನಗೊಳಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿರುವ ಹಿಂದು ಸಮುದಾಯದ ವಕೀಲರು, ಕಾರ್ಬನ್ ಡೆಟಿಂಗ್ ಪರೀಕ್ಷೆಗೆ ಅನುಮತಿ ನಿರಾಕರಿಸಿರುವುದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ನಾಡಪ್ರಭು ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆಗೆ ಭರದ ಸಿದ್ಧತೆ

ಮುಸ್ಲಿಂ ಸಮುದಾಯ ಪ್ರತಿವಾದ ಮಂಡಿಸಿ, ಪತ್ತೆಯಾಗಿದೆ ಎಂದು ಹೇಳಲಾದ ಶಿವಲಿಂಗ ಕಾರಂಜಿಯ ನಿರ್ಮಾಣ ಸ್ವರೂಪವಾಗಿದೆ. ಅದು ಶಿವಲಿಂಗವಲ್ಲ ಎಂದು ಹೇಳುತ್ತಿದೆ.

Articles You Might Like

Share This Article