ಸಚಿವ ಭೈರತಿ ಸುರೇಶ್‌ ಧಮ್ಮು, ತಾಕತ್ತಿಗೆ ಶೋಭಾ ಕರಂದ್ಲಾಜೆ ಸವಾಲು

ಬೆಳಗಾವಿ,ಅ.27- ಧಮ್ಮು, ತಾಕತ್ತು ಇದ್ದರೆ ನಗರಾಭಿವೃದ್ದಿ ಸಚಿವ ಭೈರತಿ ಸುರೇಶ್‌ ಅವರು, ನಾನು ಇಂಧನ ಮಂತ್ರಿಯಾಗಿದ್ದ ವೇಳೆ ಅಕ್ರಮ ನಡೆಸಿದ್ದರೆ ದಾಖಲೆಗಳನ್ನು ಬಿಡುಗಡೆ ಮಾಡಲಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸವಾಲು ಹಾಕಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಇಂಧನ ಸಚಿವೆಯಾಗಿದ್ದಾಗ ವೇಳೆ ಸಾಕಷ್ಟು ಅಕ್ರಮ ನಡೆಸಿದ್ದೇನೆ. ಅದರ ದಾಖಲೆಗಳನ್ನು ಕಲೆ ಹಾಕುತ್ತಿರುವುದಾಗಿ ಸಚಿವ ಸುರೇಶ್‌ ಹೇಳಿದ್ದಾರೆ. ನಿಮದೇ ಪಕ್ಷ ಅಧಿಕಾರದಲ್ಲಿದೆ. ಅಧಿಕಾರಿಗಳು ನಿಮವರೇ ತಡವೇಕೆ? ದಾಖಲೆಗಳನ್ನು ಬಿಡುಗಡೆ ಮಾಡಿ ಎಂದು ಸವಾಲು ಹಾಕಿದರು. ಈ ವಿಚಾರವಾಗಿ ಬೆಳಗಾವಿಯಲ್ಲಿ ಮಾತನಾಡಿದ ಅವರು, ಭೈರತಿ ಸುರೇಶ ಮುಡಾದ ಸಾವಿರಾರು ಫೈಲ್‌್ಸ ತಂದು ಸುಟ್ಟು ಹಾಕಿದರು. ಅದರ ಬಗ್ಗೆ ನಾನು ಧ್ವನಿ ಎತ್ತಿದೆ. ಧ್ವನಿ ಎತ್ತಿದ ತಕ್ಷಣ ನನ್ನ ಬಗ್ಗೆ ಬೇರೆ ಬೇರೆ ಆರೋಪ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ, ಮಾಡುವುದೂ ಇಲ್ಲ. ನನ್ನ ವಿರುದ್ಧ ದಾಖಲೆ ಬಹಿರಂಗಕ್ಕೆ ಪೊನ್ನಣ್ಣನಿಗೆ ನೇಮಕ ಮಾಡಲಾಗಿದೆ. ಪೊನ್ನಣ್ಣನಿಗೆ ವಿದ್ಯುತ್‌ ಇಲಾಖೆ ಏನ್‌ … Continue reading ಸಚಿವ ಭೈರತಿ ಸುರೇಶ್‌ ಧಮ್ಮು, ತಾಕತ್ತಿಗೆ ಶೋಭಾ ಕರಂದ್ಲಾಜೆ ಸವಾಲು