ನವದೆಹಲಿ,ಡಿ.27- ಐಪಿಎಲ್ ಕ್ರಿಕೆಟಿಗರ ಹರಾಜಿನಲ್ಲಿ ನನ್ನನ್ನು ಯಾವ ಫ್ರಾಂಚೈಸಿಗಳು ಖರಿದೀಸಿರುವುದು ನನಗೆ ಶಾಕ್ ತರಿಸಿದೆ ಎಂದು ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಸಂದೀಪ್ ಶರ್ಮ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಕಳೆದ ಶುಕ್ರವಾರ ಕೊಚ್ಚಿಯಲ್ಲಿ ನಡೆದ ಐಪಿಎಲ್ ಬಿಡ್ಡಿಂಗ್ನಲ್ಲಿ ಶರ್ಮ ಅವರನ್ನು ಯಾವ ಫ್ರಾಂಚೈಸಿಗಳು ಖರೀದಿಸಿಲ್ಲ. ಈ ಕುರಿತಂತೆ ಪ್ರತಿಕ್ರಿಯಿಸಿರುವ ಅವರು, ತಾನು ಮಾರಾಟವಾಗದೆ ಹೋಗಿರುವುದು ನನಗೆ ಆಘಾತ ಮತ್ತು ನಿರಾಶೆ ತರಿಸಿದೆ ಎಂದು ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
ನಾನು ಇದುವರೆಗೂ ಯಾವ ತಂಡಕ್ಕಾಗಿ ಆಡಿದ್ದೀನೊ ಅದನ್ನು ನಾನು ಚೆನ್ನಾಗಿ ಮಾಡಿದ್ದೇನೆ ಮತ್ತು ಕೆಲವು ತಂಡಗಳು ನನಗೆ ಬಿಡ್ ಮಾಡುತ್ತದೆ ಎಂದು ನಾನು ಪ್ರಾಮಾಣಿಕವಾಗಿ ಭಾವಿಸಿದ್ದೇ. ನಿಜ ಹೇಳಬೇಕೆಂದರೆ, ನಾನು ಇದನ್ನು ನಿರೀಕ್ಷಿಸಿರಲಿಲ್ಲ. ನಾನು ಮಾಡಿರುವ ತಪ್ಪು ಏನು ಎಂದು ನನಗೆ ಇನ್ನು ಆರ್ಥವಾಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಇಂದು ದೇಶಾದ್ಯಂತ ಕೋವಿಡ್ ಮಾಕ್ ಡ್ರಿಲ್
ದೇಶೀಯ ಕ್ರಿಕೆಟ್ನಲ್ಲಿ, ನಾನು ಉತ್ತಮ ಪ್ರದರ್ಶನ ನೀಡುತ್ತಿದ್ದೇನೆ. ರಣಜಿ ಟ್ರೋಫಿಯಲ್ಲಿ, ಕೊನೆಯ ಸುತ್ತಿನಲ್ಲಿ, ನಾನು ಏಳು ವಿಕೆಟ್ಗಳನ್ನು ಪಡೆದಿದ್ದೇನೆ, ನಾನು ಸೈಯದ್ ಮುಷ್ತಾಕ್ ಅಲಿಯಲ್ಲಿ ಚೆನ್ನಾಗಿ ಮಾಡಿದ್ದೇನೆ ಆದರೂ ಯಾಕೆ ನನ್ನ ಮೇಲೆ ತಿರಸ್ಕಾರ ಎಂದು ಆರ್ಥವಾಗುತ್ತಿಲ್ಲ ಎಂದು ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಸಂವಿಧಾನ ಧಾರ್ಮಿಕ ಪುಸ್ತಕ ಎಂಬಂತೆ ನಾವು ನಡೆದುಕೊಳ್ಳುತ್ತಿದ್ದೇವೆ : ಕೇಂದ್ರ ಸಚಿವ
ನಾನು ಯಾವಾಗಲೂ ನನ್ನ ಬೌಲಿಂಗ್ನಲ್ಲಿ ಸ್ಥಿರವಾಗಿರಲು ಶ್ರಮಿಸುತ್ತಿರುತ್ತೇನೆ. ನನ್ನನ್ನು ತಿರಸ್ಕರಿಸುವುದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಆದರು ಅವಕಾಶಕ್ಕಾಗಿ ಎದುರು ನೋಡುತ್ತಿದ್ದೇನೆ ಒಂದು ವೇಳೆ ಅವಕಾಶ ಸಿಕ್ಕರೆ ಅದನ್ನು ಸದುಪಯೋಗಪಡಿಸಿಕೊಳ್ಳುತ್ತೇನೆ ಎಂದು ಶರ್ಮ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
shocking, I’m heartbroken, Sandeep Sharma, IPL, snub,