ಮುಂಬೈ, ಸೆ.13- ಹೃದಯಾ ಘಾತದಿಂದ ಮುಂಬೈನ ಕೋಕಿಲಾ ಬೇನ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದ ಬಾಲಿವುಡ್‍ನ ಹಿರಿಯ ನಟ ಸತೀಂದರ್ ಕುಮಾರ್ ಖೋಸ್ಲಾ (84) ನಿಧನರಾಗಿದ್ದು ಇಂದು ಅವರ ಅಂತ್ಯಕ್ರಿಯೆ ನೆರವೇರಿದೆ. ಸತೀಂದರ್ ಅವರ ನಿಧನಕ್ಕೆ ಬಾಲಿವುಡ್‍ನ ಹಲವು ನಟರು ಹಾಗೂ ತಂತ್ರಜ್ಞರು ಕಂಬನಿ ಮಿಡಿದಿದ್ದಾರೆ.
1960, 70ರಲ್ಲಿ ತಮ್ಮ ಹಾಸ್ಯದ ಮೂಲಕ ಮೆಹಬೂಬ್, ಜಗದೀಪ್‍ರೊಂದಿಗೆ ಬಾಲಿವುಡ್ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದ ಸತೀಂದರ್ ಕುಮಾರ್ ಖೋಸ್ಲಾ ಅವರು ಅಮಿತಾಬ್ ಬಚ್ಚನ್ ಹಾಗೂ ಧರ್ಮೇಂದ್ರ ನಟನೆಯ ಶೋಲೆ' ಚಿತ್ರದ ಬೀರಬಲ್ ಪಾತ್ರದಿಂದ ತುಂಬಾ ಹೆಸರಾದರು. ಬಾಲಿವುಡ್‍ನ ಸ್ಟಾರ್ ನಟರುಗಳಾದ ಮನೋಜ್‍ಕುಮಾರ್, ಅಮಿತಾಬ್‍ಬಚ್ಚನ್ , ಧರ್ಮೇಂದ್ರ, ರಾಜೇಶ್‍ಖನ್ನಾ ಸೇರಿದಂತೆ ಹಲವು ನಟರು ತಾವು ನಟಿಸುತ್ತಿದ್ದ ಚಿತ್ರದಲ್ಲಿ ಒಂದು ಪಾತ್ರವನ್ನು ಸತೀಂದರ್ ಕುಮಾರ್ ಖೋಸ್ಲಾಗೆ ಮೀಸಲಿಟ್ಟಿದ್ದರು.
ವಿ.ಶಾಂತಾರಾಮ್ ನಿರ್ದೇಶನದ
ಬೂಂದ್ ಜೊ ಬನ್ ಗಯಿ ಮೋತಿ’ ಎಂಬ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಪಡೆದ ಸತೀಂದರ್ ಅವರು ಮನೋಜ್‍ಕುಮಾರ್ ನಟನೆಯ ಉಪ್ಕಾರ್, ರೋಟಿ ಕಪ್ಡಾ ಔರ್ ಮಕಾನ್, ಕ್ರಾಂತಿ ಸಿನಿಮಾಗಳಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಸತೀಂದರ್ , ನಸೀಬ್, ಯಾರಾನಾ, ಹಮ್ ಹೇ ರಾಹಿ ಪ್ಯಾರ್ ಕೆ, ಅಂಜಾಮ್ ಸೇರಿದಂತೆ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಸತೀಂದರ್, ಪಂಜಾಬಿ, ಬೋಜ್‍ಪುರಿ, ಮರಾಠಿ ಸಿನಿಮಾಗಳಲ್ಲೂ ನಟಿಸಿದ್ದರು.
ರಾಜ್ಯದ 195 ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ
ಹಿರಿತೆರೆಯಲ್ಲದೆ 20ಕ್ಕೂ ಹೆಚ್ಚು ಧಾರಾವಾಹಿಗ¼ಲ್ಲ್ಲಿ ಸತೀಂದರ್ ಕುಮಾರ್ ಖೋಸ್ಲಾ ನಟಿಸಿದ್ದು, ಇವರ ನಿಧನಕ್ಕೆ ಸಿನಿಮಾ ಮತ್ತು ಟಿವಿ ಕಲಾವಿದರ ಸಂಘವು ಕಂಬನಿ ಮಿಡಿದಿದೆ.
Sholay, #actor, #SatinderKumarKhosla, #dies, #cardiacarrest,