ಶಬರಿಮಲೆ ಅಯ್ಯಪ್ಪ ಚಿತ್ರಕ್ಕೆ ಬೆಂಬಲ ನೀಡಿದ್ದ ವ್ಯಕ್ತಿಯ ಅಂಗಡಿ ಧ್ವಂಸ

Social Share

ಮಲಪುರಂ,ಜ.4- ಶಬರಿಮಲೆ ಅಯ್ಯಪ್ಪ ಕುರಿತ ಸಿನಿಮಾವನ್ನು ಬೆಂಬಲಿಸಿದ ಕಾರಣಕ್ಕೆ ಸಿಪಿಐ(ಎಂ) ಕಾರ್ಯಕರ್ತರ ಅಂಗಡಿಯೊಂದನ್ನು ಅಪರಿಚಿತ ದುಷ್ಕರ್ಮಿಗಳು ದ್ವಂಶಗೊಳಿಸಿರುವ ಘಟನೆ ನಡೆದಿದೆ.

ಆಡಳಿತಾರೂಢ ಸಿಪಿಐ(ಎಂ) ಪಕ್ಷದ ಕಾರ್ಯಕರ್ತರೂ ಆಗಿರುವ ಸಿ.ಪ್ರಗಿಲೇಶ್ ಅವರಿಗೆ ಸೇರಿದ ಸೌಂಡ್ ಮತ್ತು ಲೈಟ್ ಶಾಪ್ ಕೇರಳದ ಮಲಪುರಂ ಜಿಲ್ಲೆಯಯಲ್ಲಿದೆ. ಜನವರಿ 1ರಂದು ರಾತ್ರಿ ಅಪರಿಚಿತರು ಅಂಗಡಿಯ ಮೇಲೆ ದಾಳಿ ನಡೆಸಿದ್ದಾರೆ. ಹೊಸದಾಗಿ ನಿರ್ಮಿಸಲಾಗಿದ್ದ ಬೋರ್ಡ್‍ಗಳು, ಅಲಂಕಾರಿ ದೀಪಗಳು ಹಾನಿಗೊಳಗಾಗಿದ್ದು ವ್ಯಾಪರಿ ನಷ್ಟ ಅನುಭವಿಸಿದ್ದಾರೆ.

ನಟ ಉನ್ನಿಮುಕುಂದನ್ ಪ್ರಧಾನ ಭೂಮಿಕೆಯಲ್ಲಿ ನಟಿಸಿರುವ ಶಬರಿಮಲೆ ಅಯ್ಯಪ್ಪ ಕುರಿತಾದ ಮಲಿಕಪುರಂ ಚಿತ್ರದಲ್ಲಿ ಗ್ರಾಮವೊಂದರ ಬಾಲಕಿ ಅಯ್ಯಪ್ಪ ದರ್ಶನಕ್ಕೆ ಬಲವಾದ ಅಭಿಲಾಶೆ ಹೊಂದಿರುವ ಕಥಾನಕ ಹೊಂದಿದೆ. ಈ ಚಿತ್ರದ ಕುರಿತು ಪರ ವಿರೋಧ ಚರ್ಚೆಗಳು ವ್ಯಾಪಕವಾಗಿವೆ. ಪ್ರಗಿಲೇಶ್ ಚಿತ್ರದ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದರು ಎನ್ನಲಾಗಿದೆ.

ಸಿಂಗಾರಗೊಂಡ ಸಿಎಂ ತವರು ಜಿಲ್ಲೆ ಹಾವೇರಿ, ಅಕ್ಷರ ಜಾತ್ರೆಗೆ ಕ್ಷಣಗಣನೆ

ಬಳಿಕ ಅವರಿಗೆ ಹಲವ ರೀತಿಯ ಬೆದರಿಕೆಗಳು ಬರುತ್ತಿದ್ದವು. ಅಂಗಡಿಯನ್ನು ಧ್ವಂಸಗೊಳಿಸುವುದಾಗಿಯೂ ಎಚ್ಚರಿಕೆ ನೀಡಲಾಗಿತ್ತು ಎಂದು ದೂರಿನಲ್ಲಿ ಪ್ರಗಿಲೇಶ್ ತಿಳಿಸಿದ್ದಾರೆ.

Shop, Kerala, vandalised, owner, praises, film, Sabarimala, pilgrimage,

Articles You Might Like

Share This Article