ಶಿವಮೊಗ್ಗ,ಜ.8- ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಸ್ಟೆಬಿಲೈಜರ್ ಸ್ಪೋಟಗೊಂಡು ತಂದೆ ಸಾವನ್ನಪ್ಪಿ ಪುತ್ರ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಕುವೆಂಪು ರಸ್ತೆಯಲ್ಲಿ ನಡೆದಿದೆ.
ಜಿಲ್ಲಾ ಪಂಚಾಯಿತಿ ಕಚೇರಿ ಮುಂಭಾಗದಲ್ಲಿರುವ ಪ್ರತಿಷ್ಠಿತ ಭೂಪಾಳಂ ಕುಟುಂಬದ ಮನೆಯಲ್ಲಿ ಘಟನೆ ನಡೆದಿದ್ದು ,ಎಸ್.ಶರತ್ (39) ಮೃತಪಟ್ಟಿದ್ದು ,ಪುತ್ರ ಸಂಚಿತ್(12) ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಅತನ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
26/11 ದಾಳಿ ಸಂದರ್ಭದಲ್ಲಿ ಬಚಾವಾಗಿದ್ದ ಗೌತಮ್ ಅದಾನಿ
ಶಾರ್ಟ್ ಸರ್ಕ್ಯೂಟ್ ನಿಂದಾಗಿ ಸ್ಟೆಬಲೈಜರ್ ಸ್ಪೋಟವಾಗಿದ್ದು, ಕೂಡಲೇ ಮನೆಯಲ್ಲೇ ಬೆಂಕಿ ಆವರಿಸಿದೆ. .ಶರತ್ ಅವರು ಸಂಚಿತ್ನನ್ನು ಉಳಿಸಲು ಹೋಗಿ ತನ್ನ ಪ್ರಾಣ ಕಳೆದುಕೊಂಡಿರುವ ಎನ್ನಲಾಗಿದೆ ಈ ಕುರಿತು ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Short circuit, Businessman, Sharath, death, shivamogga,