ಬೆಂಗಳೂರು, ಡಿ.9- ಆಂಧ್ರಪ್ರದೇಶದ ಮದನಪಲ್ಲಿಯ ರೌಡಿ ಹಾಗೂ ಆತನ ಕಾರು ಚಾಲಕನ ಮೇಲೆ ಗುಂಡು ಹಾರಿಸಿ ಕೊಲೆಗೆ ಪ್ರಯತ್ನಿಸಿ ಪರಾರಿಯಾಗಿರುವ ಆರೋಪಿಗಳಿಗಾಗಿ ವೈಟ್‍ಫೀಲ್ಡ್ ವಿಭಾಗದ ಪೊಲೀಸರು ವ್ಯಾಪಕ ಶೋಧ ನಡೆಸುತ್ತಿದ್ದಾರೆ.
ಆರೋಪಿಗಳ ಬಂಧನಕ್ಕಾಗಿ ರಚಿಸಲಾಗಿರುವ ನಾಲ್ಕು ವಿಶೇಷ ತಂಡಗಳು ಈಗಾಗಲೇ ಕಾರ್ಯಾಚರಣೆ ಕೈಗೊಂಡಿದ್ದು, ಒಂದು ತಂಡ ಆಂಧ್ರ ಪ್ರದೇಶಕ್ಕೆ, ಮತ್ತೊಂದು ತಂಡ ತಮಿಳುನಾಡಿಗೆ ಹಾಗೂ ಇನ್ನೊಂದು ತಂಡ ತೆಲಂಗಾಣಕ್ಕೆ ಹೋಗಿದ್ದು, ಒಂದು ತಂಡ ಬೆಂಗಳೂರಿನಲ್ಲಿ ಶೋಧ ನಡೆಸುತ್ತಿದೆ.
ಕೆಆರ್‍ಪುರ ಸಮೀಪದ ಕುರುಸೊನ್ನೆನಹಳ್ಳಿ ಬಳಿ ರೌಡಿ ಶಿವಶಂಕರ ರೆಡ್ಡಿ ಅಪಾರ್ಟ್‍ಮೆಂಟ್ ಕಟ್ಟಿಸುತ್ತಿದ್ದು, ಕಟ್ಟಡ ಪರಿಶೀಲನೆಗಾಗಿ ಬಂದಿದ್ದಾಗ ನಿನ್ನೆ ಮಧ್ಯಾಹ್ನ ಎರಡು ಬೈಕ್‍ಗಳಲ್ಲಿ ಬಂದ ದುಷ್ಕರ್ಮಿಗಳು ಪಿಸ್ತೂಲಿನಿಂದ ಏಕಾಏಕಿ ಶಿವಶಂಖರ ರೆಡ್ಡಿ ಹಾಗೂ ಆತನ ಕಾರು ಚಾಲಕ ಅಶೋಕ್ ರೆಡ್ಡಿ ಮೇಲೆ ಎಂಟು ಸುತ್ತು ಗುಂಡಿನ ಮಳೆ ಸುರಿಸಿ ಪರಾರಿಯಾಗಿದ್ದಾರೆ.
ಶ್ರದ್ಧಾ ಕೊಲೆ ಆರೋಪಿ ಅಫ್ತಾಬ್ ನ್ಯಾಯಾಲಯದ ಮುಂದೆ ಹಾಜರ್
ಗುಂಡಿನ ದಾಳಿಯಿಂದಾಗಿ ಶಿವಶಂಕರ ರೆಡ್ಡಿ ಅವರ ಭುಜ ಹಾಗೂ ಕಾಲುಗಳಿಗೆ ನಾಲ್ಕು ಗುಂಡುಗಳು ಬಿದ್ದಿದ್ದರೆ, ಆತನ ಕಾರು ಚಾಲಕ ಅಶೋಕ್ ರೆಡ್ಡಿ ಕಾಲಿಗೆ ಒಂದು ಗುಂಡು ತಾಗಿದೆ.
ಗುಂಡು ತಗುಲಿದ್ದರೂ ಅದನ್ನು ಲೆಕ್ಕಿಸದೇ ಕಾರು ಚಾಲಕ ಅಶೋಕ್ ರೆಡ್ಡಿ ಕಾರನ್ನು ಚಾಲನೆ ಮಾಡಿಕೊಂಡು ಆಸ್ಪತ್ರೆಗೆ ಹೋಗಿ ಶಿವಶಂಕರ ರೆಡ್ಡಿ ಅವರನ್ನು ಚಿಕಿತ್ಸೆಗೆ ದಾಖಲಿಸಿ ನಂತರ ಆತನೂ ಚಿಕಿತ್ಸೆ ಪಡೆಯುತ್ತಿದ್ದು ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವೆಬ್ ಸೀರಿಸ್ ಒಪ್ಪಂದಕ್ಕೆ ಸಹಿ : ಐಪಿಎಸ್ ಅಧಿಕಾರಿ ಅಮಾನತು
ಹಳೆ ದ್ವೇಷದ ಹಿನ್ನೆಲೆಯಲ್ಲಿ ಶಿವಶಂಕರ ರೆಡ್ಡಿ ಅವರ ಕೊಲೆ ಯತ್ನ ನಡೆದಿರುವ ಸಾಧ್ಯತೆ ಇದ್ದು, ಈ ಕೃತ್ಯದಲ್ಲಿ ಆಂಧ್ರ ಪ್ರದೇಶ ವ್ಯಕ್ತಿಗಳ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿಯೂ ತನಿಖೆ ನಡೆಯುತ್ತಿದೆ ಎಂದು ವೈಟ್‍ಫೀಲ್ಡ್ ವಿಭಾಗದ ಡಿಸಿಪಿ ಗಿರೀಶ್ ಈ ಸಂಜೆಗೆ ತಿಳಿಸಿದ್ದಾರೆ.
ಮದನಪಲ್ಲಿಯ ರೌಡಿ ಶಿವಶಂಕರರೆಡ್ಡಿ ಕ್ರಿಮಿನಲ್ ಹಿನ್ನೆಲೆಯುಳ್ಳವನಾಗಿದ್ದು, ಈತನ ಮೇಲೆ ಕೊಲೆ, ಕೊಲೆಯತ್ನ, ಸುಲಿಗೆ ಪ್ರಕರಣಗಳಿದ್ದು, ರೌಡಿ ಪಟ್ಟಿ ತೆರೆಯಲಾಗಿದೆ. ಕಳೆದ ಎರಡು ತಿಂಗಳ ಹಿಂದೆಯಷ್ಟೇ ರಿಯಲ್ ಎಸ್ಟೇಟ್ ಉದ್ಯಮಿ, ಸ್ನೇಹಿತ ಬಾಬು ಎಂಬಾತನಿಗೆ ಶಿವಶಂಕರರೆಡ್ಡಿ ಜೀವ ಬೆದರಿಕೆ ಹಾಕಿ ಹಣ ಸುಲಿಗೆಗೆ ಯತ್ನಿಸಿದ್ದ ಪ್ರಕರಣದಲ್ಲಿ ವೈಟ್‍ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದರು.
ಕರ್ನಾಟಕ, ಕೇರಳದಲ್ಲಿ ನಿಷೇಧಿತ ಪಿಎಫ್‍ಐ ಕಚೇರಿಗಳ ಎನ್‍ಐಎ ದಾಳಿ
ಇತ್ತೀಚೆಗೆ ಜಾಮೀನು ಪಡೆದು ಶಿವಶಂಕರರೆಡ್ಡಿ ಹೊರಬಂದಿದ್ದನು. ಮದನಪಲ್ಲಿಯಿಂದ ತನ್ನ ಕಾರ್ಯ ಚಟುವಟಿಕೆಗಳನ್ನು ಬೆಂಗಳೂರಿನ ವೈಟ್‍ಫೀಲ್ಡ್ ಹಾಗೂ ಕೆಆರ್‍ಪುರ ದತ್ತ ವಿಸ್ತರಿಸಿ, ಭೂವ್ಯವಹಾರದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದನು.
shot, accused ,escaped, search police,