ಬುರ್ಕಿನಾ ಫಾಸೊದ ಅಧ್ಯಕ್ಷರ ಮನೆ ಬಳಿ ಗುಂಡಿನ ಚಕಮಕಿ

Social Share

ಔಗಡೌಗೌ,(ಪಶ್ಚಮ ಆಫ್ರಿಕಾ) ಜ. 24 ಬುರ್ಕಿನಾ ಫಾಸೊದ ಅಧ್ಯಕ್ಷ ರೋಚ್ ಮಾರ್ಕ್ ಕ್ರಿಶ್ಚಿಯನ್ ಕರ್ಬೋ ಅವರ ಮನೆಯ ಬಳಿ ತಡರಾತ್ರಿ ಗುಂಡಿನ ಚಕಮಕಿ ನಡೆದಿದೆ. ದಂಗೆಕೋರ ಸೈನಿಕರು ಮಿಲಿಟರಿ ನೆಲೆಯನ್ನು ವಶಪಡಿಸಿಕೊಂಡ ನಂತರ ಆತಂಕವನ್ನು ಮತ್ತಷ್ಟು ಹೆಚ್ಚಾಗಿದೆ. ಸೇನಾ ನೆಲೆಯಲ್ಲಿ ಗಂಟೆಗಟ್ಟಲೆ ಗುಂಡಿನ ಚಕಮಕಿ ನಡೆದಿದ್ದರೂ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಜನರಿಗೆ ಭರವಸೆ ನೀಡಲು ಸರ್ಕಾರಿ ಅಧಿಕಾರಿಗಳು ಪ್ರಯತ್ನಿಸಿದ್ದರು.
ಆದರೆ ದಿನದ ಅಂತ್ಯದ ವೇಳೆಗೆ, ದಂಗೆಕೋರರನ್ನು ಬೆಂಬಲಿಸುವ ಸರ್ಕಾರಿ ವಿರೋಧಿ ಪ್ರತಿಭಟನಾಕಾರರು ಕರ್ಬೋ ಅವರ ಪಕ್ಷಕ್ಕೆ ಸೇರಿದ ಕಟ್ಟಡಕ್ಕೆ ಬೆಂಕಿ ಹಚ್ಚಿದ್ದಾರೆ. ಅಧ್ಯಕ್ಷೀಯ ಭವನದ ಬಳಿ ಭಾರೀ ಹೋರಾಟ ನಡೆಯುತ್ತಿದೆ ಎಂದು ದಂಗೆಕೋರ ಸೈನಿಕ ಫೋನ್ ಮೂಲಕ  ಮಾಧ್ಯಮಕ್ಕೆ ತಿಳಿಸಿದ್ದು ಆಗ ಕರ್ಬೋ ಅವರು ಮನೆಯಲ್ಲಿದ್ದಾರೋ ಇಲ್ಲವೋ ಎಂಬುದು ತಕ್ಷಣವೇ ತಿಳಿದುಬಂದಿಲ್ಲ ಆದರೆ ಆ ಪ್ರದೇಶದಲ್ಲಿಗುಂಡೇಟಿನ ಸದ್ದಿನ ಜೊತೆಗೆ ಹೆಲಿಕಾಪ್ಟಗಳ ಹಾರಾಟ ಕೇಳಿಸಿದೆ ಎಂದು ಸ್ಥಳೀಯ ಜನರು ತಿಳಿಸಿದ್ದಾರೆ.
ಸರ್ಕಾರದ ವಿರೋಧಿ ಪ್ರತಿಭಟನಾಕಾರರು ದಂಗೆಕೋರ ಸೈನಿಕರಿಗೆ ಬೆಂಬಲ ನೀಡಿದ್ದರ ಪರಿಣಾಮ ರಾಜಧಾನಿಯಲ್ಲಿ ಜನಸಂದಣಿಯನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಸಿಡಿಸಿದ್ದರು.ಪಶ್ಚಮ ಆಫ್ರಿಕಾ ಪುಟ್ಟ ರಾಷ್ಠದಲ್ಲಿ ರಾಜಧಾನಿ ಔಗಡೌಗೌ ಮಾತ್ರವಲ್ಲದೆ ಇತರ ನಗರಗಳಲ್ಲಿಯೂ ಕೆಲವು ನಗರದಲ್ಲೂ ಅಶಾಂತಿ ತಲೆದೋರಿದೆ.
ಎಂದು ರಕ್ಷಣಾ ಸಚಿವ ಐಮ್ ಬಾರ್ತೆಲೆಮಿ ಸಿಂಪೋ ತಿಳಿಸಿದರು. ಅಧ್ಯಕ್ಷರನ್ನು ದಂಗೆಕೋರರು ಬಂಧಿಸಿದ್ದಾರೆ ಎಂಬುದನ್ನು ನಿರಾಕರಿಸಿದರು.ಇಸ್ಲಾಮಿಕ್ ಉಗ್ರಗಾಮಿಗಳ ವಿರುದ್ಧ ಹೆಚ್ಚುತ್ತಿರುವ ಹೋರಾಟದ ಮಧ್ಯೆ ಬುರ್ಕಿನಾ ಫಾಸೊದ ಮಿಲಿಟರಿ ಉತ್ತಮ ಕೆಲಸದ ಮಾಡುತ್ತಿದೆ.
ಅಲï-ಖೈದಾ ಮತ್ತು ಇಸ್ಲಾಮಿಕ್ ಸ್ಟೇಟï-ಸಂಯೋಜಿತ ಗುಂಪುಗಳ ದಾಳಿಗಳಿಂದ ಹೆಚ್ಚು ತೊಂದರೆಗೀಡಾಗಿರುವ ಬುರ್ಕಿನಾ ಫಾಸೊದಲ್ಲಿ ಅವರ ಬೇಡಿಕೆಗಳನ್ನು ಬೆಂಬಲಿಸುವ ಚಿಹ್ನೆಗಳು ಕಂಡುಬಂದಿವೆ. ಆ ದಾಳಿಗಳಿಂದ ಇತ್ತೀಚಿನ ವರ್ಷಗಳಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 1.5 ಮಿಲಿಯನ್ (15 ಲಕ್ಷ) ಜನರು ಸ್ಥಳಾಂತರಗೊಂಡಿದ್ದಾರೆ.

Articles You Might Like

Share This Article