ನವದೆಹಲಿ,ಡಿ.18-ದೇಶವನ್ನೇ ಬೆಚ್ಚಿ ಬೀಳಿಸಿದ ಶ್ರದ್ದಾ ವಾಲ್ಕರ್ ಭೀಕರ ಹತ್ಯೆಯ ಬಳಿಕ, ಅದೇ ಮಾದರಿಯ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಜಾರ್ಖಂಡ್ನಲ್ಲಿ ವ್ಯಕ್ತಿಯೊಬ್ಬ ತನ್ನ ಸಂಗಾತಿಯನ್ನು ಹತ್ಯೆ ಮಾಡಿ 12 ತುಂಡುಗಳಾಗಿ ಕತ್ತರಿಸಿ ಬಿಸಾಡಿದ್ದು, ಜೈಪುರದಲ್ಲಿ ಮತ್ತೊಬ್ಬ ವ್ಯಕ್ತಿ ತನ್ನ ಅತ್ತೆಯನ್ನೇ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿ 10 ತುಂಡುಗಳಾಗಿ ಕತ್ತರಿಸಿರುವ ವಿಕೃತ ಘಟನೆಗಳು ಬಯಲಾಗಿವೆ.
ಜಾರ್ಖಂಡ್ನ ಬೋರಿಯೊ ಪೊಲೀಸ್ ಠಾಣೆ ವ್ಯಾಪ್ತಿಯ ಸಾಹೇಬ್ಗಂಜ್ ಪ್ರದೇಶದಲ್ಲಿ ದಿಲ್ದಾರ್ ಅನ್ಸಾರಿ ಎಂಬಾತ, ತನ್ನ 2ನೇ ಪತ್ನಿ ರೂಬಿಕಾ ಪಹಾದಿಮ್ಳನ್ನು ಕೊಲೆ ಮಾಡಿದ್ದಾನೆ. ಎರಡು ವರ್ಷಗಳ ಹಿಂದೆ ಪರಿಚಯವಾಗಿ ಜೊತೆಯಲ್ಲೇ ವಾಸವಾಗಿದ್ದರು.
ಹತ್ಯೆಯಾದ ರೂಬಿಕಾ 22 ವರ್ಷದವಳಾಗಿದ್ದು, ಸಾಹೇಬ್ಗಂಜ್ ಪ್ರದೇಶದ ಪ್ರಾಚೀನ ಬುಡಕಟ್ಟು ಸಮುದಾಯಕ್ಕೆ ಸೇರಿದ್ದು, ಆಕೆ ನಾಪತ್ತೆಯಾಗಿದ್ದಾಳೆಂದು ಪೋಷಕರು ದೂರು ನೀಡಿದ್ದರು. ಪೊಲೀಸರು ತನಿಖೆ ಆರಂಭಿಸಿ ದಿಲ್ದಾರ್ ಅನ್ಸಾರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬಯಲಿಗೆ ಬಂದಿದೆ ಎಂದು ಎಂದು ಪೊಲೀಸ್ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಶಾಂತಿಮೊಹೀನ್ ಟೋಲಾ ಪ್ರದೇಶದಲ್ಲಿ ನಿನ್ನೆ ಸಂಜೆ ಹಲವೆಡೆ ಚದುರಿ ಬಿದ್ದ ದೇಹದ ಅಂಗಾಂಗಗಳನ್ನು ಸಂಗ್ರಹಿಸಲಾಗಿದೆ. ಅವು ಬಹುತೇಕ ಕೊಳೆಯುವ ಸ್ಥಿತಿಯಲ್ಲಿದ್ದವು.
ಮಹಿಳೆಯನ್ನು ಮದುವೆಯಾಗುವುದಾಗಿ ಕರೆತಂದಿದ್ದ ಆರೋಪಿ ಆಕೆಯನ್ನು ಹತ್ಯೆ ಮಾಡಿದ್ದಾನೆ. ಬಳಿಕ ಎಲೆಕ್ಟ್ರಿಕಲ್ ಕಟ್ಟರ್ನಲ್ಲಿ ಮೃತ ದೇಹವನ್ನು 12 ತುಂಡುಗಳನ್ನಾಗಿ ಕತ್ತರಿಸಿದ್ದಾನೆ. ಪ್ರಕರಣ ಮರೆಮಾಚಲು ಹಲವು ಭಾಗಗಳಲ್ಲಿ ಅವುಗಳನ್ನು ಎಸೆದಿದ್ದಾನೆ. ಇನ್ನು ಕೆಲವು ಅಂಗಾಂಗಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ರಾಜಕೀಯ ವಾಕ್ಸಮರ ಶುರುವಾಗಿದೆ. ಹೇಮಂತ್ ಸರ್ಕಾರ್ ಅವರ ಆಡಳಿತಾವಯಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ಅಲ್ಪಸಂಖ್ಯಾತ ಸಮುದಾಯದ ಕೆಲವು ಹತಾಶ ಜನ ನಮ್ಮ ಮಕ್ಕಳನ್ನು ಗುರಿಯಾಗಿಸಿಕೊಂಡಿದ್ದಾರೆ. ಸರ್ಕಾರ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಉಗ್ರ ಕ್ರಮ ಕೈಗೊಳ್ಳದೆ ಇದ್ದರೆ ಜನ ಬೀದಿಯಲ್ಲಿ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಆಟವಾಡುತ್ತಿದ್ದಾಗ ನಾಡ ಬಂದೂಕಿನಿಂದ ಗುಂಡು ಹಾರಿ ಬಾಲಕ ಸಾವು
ಮತ್ತೊಂದು ಪ್ರಕರಣದಲ್ಲಿ ರಾಜಸ್ಥಾನದ ಜೈಪುರದ ವಿದ್ಯಾನಗರದಲ್ಲಿ ಅಂಜು ಶರ್ಮ(32) ತನ್ನ ತಂದೆ, ಸಹೋದರಿಯರು ಮತ್ತು ಅತ್ತೆಯೊಂದಿಗೆ ವಾಸವಿದ್ದ.
ಅಂಜು ಅವರ ತಾಯಿ ಕಳೆದ ವರ್ಷ ಕೋವಿಡ್ನಲ್ಲಿ ಮೃತಪಟ್ಟಿದ್ದರು. ಆತನ ಅತ್ತೆ ಸರೋಜ(64), ಪತಿ ಸಾವನ್ನಪ್ಪಿದ ಬಳಿಕ ತವರು ಮನೆಯಲ್ಲೇ ವಾಸವಿದ್ದರು. ಡಿಸೆಂಬರ್ 11ರಂದು ಅಂಜು ಶರ್ಮ ಕಾರ್ಯಕ್ರಮವೊಂದಕ್ಕೆ ದೆಹಲಿಗೆ ತೆರಳಲು ಮುಂದಾಗಿದ್ದಾಗ ಆಕೆ ತಡೆದಿದ್ದಾರೆ. ಇದು ಇಬ್ಬರ ನಡುವೆ ಜಗಳ ಹಾಗೂ ವಾಗ್ವಾದಕ್ಕೆ ಕಾರಣವಾಗಿದೆ.
ಸಿಟ್ಟಿಗೆದ್ದ ಶರ್ಮ ಟೀ ಮಾಡುತ್ತಿದ್ದ ಅತ್ತೆಯ ತಲೆಗೆ ಸುತ್ತಿಗೆಯಿಂದ ಹೊಡೆದಿದ್ದಾನೆ. ಆಕೆ ಸ್ಥಳದಲ್ಲೇ ಕುಸಿದು ಮೃತಪಟ್ಟಿದ್ದಾಳೆ.ಮಾರ್ಬಲ್ ಕಟ್ ಮಾಡುವ ಮಿಷನ್ ಬಳಸಿ ಅತ್ತೆಯ ದೇಹವನ್ನು 10 ತುಂಡುಗಳಾಗಿ ಕತ್ತರಿಸಿದ್ದಾನೆ. ನಂತರ ಅವುಗಳನ್ನು ಬಕೆಟ್ ಮತ್ತು ಸೂಟ್ಕೇಸ್ನಲ್ಲಿ ತುಂಬಿಟ್ಟಿದ್ದಾನೆ. ಯಾರಿಗೂ ಅನುಮಾನ ಬಾರದಂತೆ ಪೊಲೀಸರಿಗೆ ದೂರು ನೀಡಿದ್ದಾನೆ. ಸಂಬಂಕರ ಮನೆಯಲ್ಲಿ ಹುಡುಕಾಟ ನಡೆಸಿದ್ದಾನೆ.
ವಿಚಾರಣೆ ಆರಂಭಿಸಿದ ಪೊಲೀಸರು ಮನೆಯಲ್ಲಿನ ಸಿಸಿಟಿವಿಯನ್ನು ಪರಿಶೀಲಿಸಿದಾಗ ಸರೋಜ ಅವರು ಇಲ್ಲದಿರುವುದು ಮತ್ತು ಶರ್ಮ ಬಕೆಟ್ ಹಾಗೂ ಸೂಟ್ಕೇಸ್ ಗಳೊಂದಿಗೆ ಕುಳಿತಿರುವುದು ಕಂಡುಬಂದಿದೆ. ಅನುಮಾನಗೊಂಡ ಪೊಲೀಸರು ಶರ್ಮನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಪ್ರಕರಣ ಬಯಲಾಗಿದೆ.
ಮೃತದೇಹದ ತುಂಡುಗಳನ್ನು ಜೈಪುರ್-ಶಿಕಾರ್ ಹೆದ್ದಾರಿಯ ನಿರ್ಜನ ಪ್ರದೇಶದಲ್ಲಿ ಎಸೆದಿರುವುದನ್ನು ಬಾಯ್ಬಿಟ್ಟಿದ್ದಾನೆ. ಕೊಲೆಗಾರ ಬುದ್ದಿವಂತ ಮತ್ತು ವಿದ್ಯಾವಂತ. ಆದರೆ ಮನೋರೋಗದ ಪ್ರವೃತ್ತಿ ಹೊಂದಿದ್ದಾನೆ ಎಂದು ಜೈಪುರದ ಪೊಲೀಸ್ ಆಯುಕ್ತ ಆನಂದ್ ಶ್ರೀವಾತ್ಸವ್ ತಿಳಿಸಿದ್ದಾರೆ. ‘
ಸಿಸಿಟಿವಿ ದೃಶ್ಯಾವಳಿಯಲ್ಲಿ ಅತ್ತೆ ಮನೆಯಿಂದ ಹೊರಹೋಗಿರುವುದು ಕಂಡುಬಂದಿಲ್ಲ. ಆದರೆ ಈತ ಬಕೆಟ್ ಮತ್ತು ಸ್ಕೂಟ್ಕೇಸ್ಗಳಲ್ಲಿ ಹೊರ ಹೋಗಿರುವುದು ಅನುಮಾನಕ್ಕೆ ಕಾರಣವಾಗಿತ್ತು. ಪರಿಶೀಲನೆ ನಡೆಸಿದಾಗ ಅಡುಗೆ ಮನೆಯಲ್ಲಿ ರಕ್ತದ ಕಲೆಗಳು ಕಂಡುಬಂದಿದ್ದವು ಎಂದು ಹೇಳಿದ್ದಾರೆ. ದಿನೇ ದಿನೇ ಬಯಲಾಗುತ್ತಿರುವ ಈ ರೀತಿಯ ವಿಕೃತ ಮನಸ್ಥಿತಿಯ ಕೃತ್ಯಗಳು ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸುವಂತೆ ಮಾಡುತ್ತಿವೆ.
#ShraddhaLikeMurder, #Rajasthan #Nephew, #chopsbody, #dumps, #differentplaces, #Jaipur,