ನವದೆಹಲಿ,ಡಿ.9-ಶ್ರದ್ಧಾ ಕೊಲೆ ಪ್ರಕರಣದ ಆರೋಪಿ ಅಫ್ತಾಬ್ ಅಮೀದ್ ಪೂನಾವಾಲನನ್ನು ಇಂದು ವಿಡಿಯೋ ಕಾನರೆನ್ಸ್ ಮೂಲಕ ನ್ಯಾಯಾಲಯದ ವಿಚಾರಣೆಗೆ ಹಾಜರುಪಡಿಸಲಾಯಿತು.
ಇಪ್ಪತ್ತೆಂಟು ವರ್ಷದ ಅಫ್ತಾಬ್ ತನ್ನೊಂದಿಗೆ ಸಹ ಜೀವನ ನಡೆಸುತ್ತಿದ್ದ ಶ್ರದ್ಧಾ ವಾಲ್ಕರ್‍ಳನ್ನು ತನ್ನ ಅಪಾರ್ಟ್‍ಮೆಂಟ್‍ನಲ್ಲಿ ಕತ್ತುಹಿಸುಕಿ ಕೊಲೆ ಮಾಡಿ ನಂತರ 35 ತುಂಡುಗಳನ್ನಾಗಿ ಕತ್ತರಿಸಿ ರಿಫ್ರಿಜರೇಟರ್‍ನಲ್ಲಿ ಇಟ್ಟಿದ್ದ. ನಂತರ ಹಂತ ಹಂತವಾಗಿ ಅದನ್ನು ಛತ್ರಾಪುರ್ ಪ್ರದೇಶದಲ್ಲಿ ಕೆಲವೊಂದು ಅಂಗಗಳನ್ನು ವಿಲೇವಾರಿ ಮಾಡಿದ್ದ.
ತಡವಾಗಿ ಬೆಳಕಿಗೆ ಬಂದ ಈ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿತ್ತು. ತನಿಖೆ ನಡೆಸಿದ ದೆಹಲಿ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಕೆಲವು ಅಂಗಗಳನ್ನು ವಶಪಡಿಸಿಕೊಂಡಿದ್ದಾರೆ.
ಚಂಡಮಾರುತ : ತಮಿಳುನಾಡು ಪುದುಚರಿ ಕರಾವಳಿಯಲ್ಲಿ ಭಾರಿ ಕಟ್ಟೆಚ್ಚರ
ಶ್ರದ್ಧಾಳನ್ನು ಕೊಲೆ ಮಾಡಿ ತುಂಡುಗಳನ್ನಾಗಿ ಕತ್ತರಿಸಿರುವುದನ್ನು ಒಪ್ಪಿಕೊಂಡಿರುವ ಅಫ್ತಾಬ್, ನಂತರದ ತನಿಖೆಯಲ್ಲಿ ದಿಕ್ಕು ತಪ್ಪಿಸುವ ಹೇಳಿಕೆಗಳನ್ನು ನೀಡಿದ್ದಾನೆ. ಆರೋಪಿಗೆ ಮಂಪರು ಹಾಗೂ ಸುಳ್ಳು ಪತ್ತೆ ಪರೀಕ್ಷೆಯನ್ನು ನಡೆಸಲಾಗಿದೆ.
ಪೊಲೀಸರು ಆರೋಪಿಯ ವರ್ತನೆ ಬಗ್ಗೆ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಮಾಹಿತಿ ನೀಡಲಿದ್ದಾರೆ.
ಕೊಲೆಯ ಬಗ್ಗೆ ಕಿಂಚಿತ್ತೂ ಪಶ್ಚಾತಾಪವಿಲ್ಲದ ಅಫ್ತಾಬ್ ಜೈಲಿನಲ್ಲಿ ಸಹ ಕೈದಿಗಳೊಂದಿಗೆ ಚೆಸ್ ಆಡುತ್ತಾ ಸಮಯ ಕಳೆಯುತ್ತಿದ್ದಾನೆ. ಅಫ್ತಾಬ್ ಜತೆ ಇಬ್ಬರು ಆರೋಪಿಗಳು ಕೊಠಡಿ ಹಂಚಿಕೊಂಡಿದ್ದಾರೆ.
ಸಂಸತ್‍ನಲ್ಲಿ ಏಕರೂಪ ನಾಗರೀಕತೆ ಮಸೂದೆ ಪ್ರಸ್ತಾಪ ನಿರೀಕ್ಷೆ
ಪ್ರತಿ ಹಂತದಲ್ಲೂ ತನ್ನ ಬುದ್ದಿವಂತಿಕೆ ಪ್ರದರ್ಶನ ಮಾಡುವ ಅಫ್ತಾಬ್‍ನ್ಯಾಯಾಲಯದ ವಿಚಾರಣೆ ವೇಳೆ ಮಹತ್ವದ ತಿರುವು ನೀಡುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
Shraddha, Murder, Accused, Aftab, produced, Delhi, Saket Court,